newsfirstkannada.com

ರಾಮ್ ಚರಣ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಹುಟ್ಟುಹಬ್ಬದ ದಿನವೇ ಗಿಫ್ಟ್ ಕೊಟ್ಟ ಗೇಮ್‌ ಚೇಂಜರ್‌; ಏನದು?

Share :

Published March 27, 2024 at 12:14pm

  ಹುಟ್ಟುಹಬ್ಬದ ಸಂಭ್ರಮದಲ್ಲಿ RRR ಖ್ಯಾತ ನಟ ರಾಮ್ ಚರಣ್ ದಂಪತಿ

  ಹುಟ್ಟು ಹಬ್ಬದ ದಿನದಂದೇ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟ ನಟ

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಈ ವಿಡಿಯೋ

ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್‌, ಆರ್​ಆರ್​ಆರ್ ಸಿನಿಮಾ ಖ್ಯಾತಿಯ​ ನಟ ರಾಮ್ ಚರಣ್​​ 39ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು 39ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ರಾಮ್ ಚರಣ್ ದಂಪತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಮ್‌ ಚರಣ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೂಡ ಸಿಕ್ಕಿದೆ.

ನಟ ರಾಮ್​ ಚರಣ್​ ಹಾಗೂ ಅವರ ಪತ್ನಿ ಉಪಾಸನಾ ಜೊತೆಗೆ ತಿರುಪತಿಗೆ ಭೇಟಿ ನೀಡಿದ್ದಾರೆ. ರಾಮ್ ಚರಣ್ ದಂಪತಿ ಮೊದಲ ಬಾರಿಗೆ ಮುದ್ದಾದ ಮಗಳು ಕ್ಲೀಂಕಾರಳನ್ನು ಕೂಡ ಕರೆದುಕೊಂಡು ಬಂದಿದ್ದಾರೆ. ರಾಮ್​ ಚರಣ್​ ಹಾಗೂ ಉಪಾಸನಾ ತಿರುಪತಿಗೆ ಹೋಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ಇದನ್ನೂ ಓದಿ: RRR ಹೀರೋ ರಾಮ್ ಚರಣ್ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ.. ನಾನು ರೆಡಿ ಎಂದ ಉಪಾಸನಾ! ​

ಹುಟ್ಟುಹಬ್ಬದ ಸ್ಪೆಷಲ್ ದಿನದಂದೇ ರಾಮ್ ಚರಣ್ ಅಭಿಮಾನಿಗಳಿಗೆ ಗಿಫ್ಟ್ ಕೊಡಲಾಗಿದೆ. ರಾಮ್ ಚರಣ್‌ ನಟನೆಯ ಗೇಮ್ ಚೇಂಜರ್ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಜರಗಂಡಿ ಎಂಬ ಶೀರ್ಷಿಕೆಯಲ್ಲಿ ಈ ಸಾಂಗ್​ ಮೂಡಿ ಬಂದಿದೆ. ಜರಗಂಡಿ ಹಾಡನ್ನು ಸಂಗೀತ ನಿರ್ದೇಶಕ ಥಮನ್ ಎಸ್ ರಚಿಸಿದ್ದಾರೆ. ಈ ಹಾಡನ್ನು ಪಂಜಾಬಿ ಪಾಪ್ ಗಾಯಕ ದಲೇರ್ ಮೆಹಂದಿ ಮತ್ತು ಸುನಿಧಿ ಚೌಹಾನ್ ಹಾಡಿದ್ದಾರೆ. ಇದೀಗ ಈ ಸಾಂಗ್​ ಬಿಡುಗಡೆ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ ರಾಮ್ ಚರಣ್ ತೇಜ ಅವರು RRR ಸಿನಿಮಾದಲ್ಲಿ ನಟಿಸಿದ್ದರು. ಅದಾದ ಬಳಿಕ ಅವರು ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್‌ಗೆ ಹೀರೋಯಿನ್ ಆಗಿ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ್ ಚರಣ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಹುಟ್ಟುಹಬ್ಬದ ದಿನವೇ ಗಿಫ್ಟ್ ಕೊಟ್ಟ ಗೇಮ್‌ ಚೇಂಜರ್‌; ಏನದು?

https://newsfirstlive.com/wp-content/uploads/2024/03/ram-charan.jpg

Load More