newsfirstkannada.com

ಪೂನಂ ಪಾಂಡೆಗೆ ಬೆಂಬಲ ನೀಡಿ ಪೇಚಿಗೆ ಸಿಲುಕಿದ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ..!

Share :

Published February 4, 2024 at 9:59am

    ಗರ್ಭಕಂಠ ಕ್ಯಾನ್ಸರ್​ನಿಂದ ಸತ್ತಿದ್ದೇನೆ ಎಂದಿದ್ದ ಪೂನಂ ಪಾಂಡೆ

    ದೇಶದಾದ್ಯಂತ ಭಾರೀ ಸಂಚಲ ಸೃಷ್ಟಿತ್ತು ಪೂನಂ ಸಾವಿನ ಸುದ್ದಿ

    ಬೆನ್ನಲ್ಲೇ ನಾನು ಸತ್ತಿಲ್ಲ ಬದುಕಿದ್ದೇನೆ ಎಂದು ವಿಡಿಯೋ ಮಾಡಿದ್ದ ನಟಿ

ಭಾವನೆಗಳ ಜೊತೆ ಆಟವಾಡಿದ ನಟಿ ಪೂನಂ ಪಾಂಡೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಾಲಿವುಡ್​ ಸ್ಟಾರ್​​ಗಳೂ ಸೇರಿದಂತೆ ದೇಶದಾದ್ಯಂತ ವ್ಯಾಪಕ ಟೀಕೆ ಜೋರಾಗಿದೆ. ಆದರೆ ಸ್ಟಾರ್​ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ, ಪೂನಂ ಪಾಂಡೆ ಪರ ಬ್ಯಾಟ್ ಬೀಸಿದ್ದಾರೆ.

ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಪೂನಂ ನೀವು ಜಾಗೃತಿ ಮೂಡಿಸಲು ಅಳವಡಿಸಿಕೊಂಡ ವಿಧಾನವು ಟೀಕೆಗಳನ್ನು ಎದುರಿಸಲು ಕಾರಣವಾಗಬಹುದು. ಆದರೆ ನಿಮ್ಮ ಸದುದ್ದೇಶವನ್ನು ಯಾರೂ ಪ್ರಶ್ನಿಸುವಂತಿಲ್ಲ. ಸರ್ವಿಕಲ್ ಕ್ಯಾನ್ಸರ್ ಏನೆಂದು ಎಲ್ಲೆಡೆ ಚರ್ಚೆ ಆಗುತ್ತಿದೆ. ನಿಮ್ಮ ಹೃದಯವು ನಿಮ್ಮಂತೆ ಸುಂದರವಾಗಿರುತ್ತದೆ. ನಾನು ನಿಮಗೆ ಒಳ್ಳೆಯ ಜೀವನವನ್ನು ಬಯಸುತ್ತೇನೆ.

ಯಾವಾಗ ವರ್ಮಾ, ಪೂನಂ ಪಾಂಡೆ ಪರ ಬ್ಯಾಟ್ ಬೀಸುತ್ತಿದ್ದಂತೆಯೇ ಟ್ರೋಲ್ ಆಗಿದ್ದಾರೆ. ಪೂನಂ ಪಾಂಡೆ ಸತ್ತಿದ್ದೇನೆ ಎಂದು ನಾಟಕ ಮಾಡದೇ ಗರ್ಭಕಂಠ ಕ್ಯಾನ್ಸರ್​ ಬಗ್ಗೆ ಕ್ಯಾಂಪೇನ್ ಮಾಡಬಹುದಿತ್ತು ಎಂದು ಓರ್ವ ನೆಟ್ಟಿಗ ಬರೆದರೆ, ನಿಮ್ಮಂಥ ಗಣ್ಯರು ಇರೋವರೆಗೆ ಪೂನಂ ಪಾಂಡೆಯಂತವರಿಗೆ ಪ್ರೋತ್ಸಾಹ ಸಿಗುತ್ತಲೇ ಇರುತ್ತದೆ ಎಂದು ಇನ್ನೊಬ್ಬರು ಕೌಂಟರ್ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೂನಂ ಪಾಂಡೆಗೆ ಬೆಂಬಲ ನೀಡಿ ಪೇಚಿಗೆ ಸಿಲುಕಿದ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ..!

https://newsfirstlive.com/wp-content/uploads/2024/02/RAM-GOPAL-VARMA.jpg

Load More