ರಾಮಗೋಪಾಲ್ ವರ್ಮಾಗೆ ಜೈಲು ಶಿಕ್ಷೆ; ಏನಿದು ಗಂಭೀರ ಪ್ರಕರಣ..?

author-image
Gopal Kulkarni
Updated On
ರಾಮಗೋಪಾಲ್ ವರ್ಮಾಗೆ ಜೈಲು ಶಿಕ್ಷೆ; ಏನಿದು ಗಂಭೀರ ಪ್ರಕರಣ..?
Advertisment
  • ಬಾಲಿವುಡ್​ ನಿರ್ದೇಶಕ ರಾಮಗೋಪಾಲ್ ವರ್ಮಾಗೆ ಜೈಲು
  • ಮುಂಬೈನ ಅಂದೇರಿ ಮ್ಯಾಜಿಸ್ಟ್ರೇಟ್​ ಕೋರ್ಟ್​​ನಿಂದ ಆದೇಶ
  • ನಿರ್ದೇಶಕರ ವಿರುದ್ಧ ಹೊರಬಿದ್ದ ಜಾಮೀನು ರಹಿತ ವಾರೆಂಟ್​

ಖ್ಯಾತ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಮೂರು ತಿಂಗಳ ಜೈಲು ಶಿಕ್ಷೆ ಘೋಷಣೆ ಮಾಡಲಾಗಿದೆ. ಚೆಕ್​​ ಬೌನ್ಸ್ ಕೇಸ್​​​ನಲ್ಲಿ ಜಾಮೀನುರಹೀತ ವಾರೆಂಟ್ ಹೊರಬಿದ್ದಿದೆ. ಮುಂಬೈನ ಅಂಧೇರಿ ಮ್ಯಾಜಿಸ್ಟ್ರೇಟ್ ಕೋರ್ಟ್​​ ಮಂಗಳವಾರ ಈ ಒಂದು ಆದೇಶವನ್ನು ಹೊರಡಿಸಿದೆ. ರಾಮ್​ ಗೋಪಾಲ್ ವರ್ಮಾ ವಿರುದ್ಧ ನಾನ್ ಬೇಲೆಬಲ್ ವಾರೆಂಟ್​​ ಹೊರಬಬಿದ್ದಿದ್ದು. ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ:ಅಬ್ಬಬ್ಬಾ.. ಶಿಕ್ಷಣಾಧಿಕಾರಿ ಮನೆಯಲ್ಲಿ ಕಂತೆ, ಕಂತೆ ನೋಟು; ಕೌಂಟಿಂಗ್ ಮಷೀನ್ ತರಿಸಿಕೊಂಡ ಅಧಿಕಾರಿಗಳು

ಸೆಕ್ಷನ್ 138ರ ಅಡಿಯಲ್ಲಿ ರಾಮಗೋಪಾಲ್ ವರ್ಮಾ ಅವರನ್ನು ದೋಷಿ ಎಂದು ಪರಿಗಣಿಸಲಾಗಿದ್ದು. ಇದು ಚೆಕ್​ ಬೌನ್ಸ್ ಹಾಗೂ ಬ್ಯಾಂಕ್​ನಲ್ಲಿ ನೀಡಿದ ಚೆಕ್​​ಗೆ ಬೇಕಾದಷ್ಟು ಹಣ ಇಲ್ಲದಾಗ ನಡೆಯುವ ಅಪರಾಧಕ್ಕೆ ನೀಡಲಾಗುವ ಶಿಕ್ಷೆಯಾಗಿದೆ. ಕೇವಲ ಮೂರು ತಿಂಗಳು ಜೈಲು ಮಾತ್ರವಲ್ಲ ದೂರುದಾರರಿಗೆ ಸುಮಾರು 3.75 ಲಕ್ಷ ರೂಪಾಯಿ ಮೂರು ತಿಂಗಳೊಳಗಾಗಿ ನೀಡುವಂತೆಯೂ ಸಹ ಆದೇಶ ಹೊರಡಿಸಿದೆ
2018ರಲ್ಲಿ ಆರ್​​ಜಿವಿ ಫರ್ಮ್​​ ವಿರುದ್ಧ ಶ್ರೀ ಮಹೇಶ್​ ಚಂದ್ರ ಮಿಶ್ರಾ ಅವರು ಚೆಕ್​ಬೌನ್ಸ್​ ಪ್ರಕರಣವನ್ನು ದಾಖಲಿಸಿದ್ದರು. ಜೂನ್​ 2022ರಲ್ಲಿ ನಿರ್ದೇಶಕ ಇದೇ ಪ್ರಕರಣದಲ್ಲಿ ನಿರ್ದೇಶಕ ರಾಮ್​ಗೋಪಾಲ್ ವರ್ಮಾ ಐದು ಸಾವಿರ ರೂಪಾಯಿ ಸೆಕ್ಯೂರಿಟಿ ಡಿಪಾಸಿಟ್​ ಪರ್ಸನಲ್ ಬಾಂಡ್ ನೀಡಿ ಬೇಲ್ ಪಡೆದಿದ್ದರು.

ಇದನ್ನೂ ಓದಿ:ಅಂದು ರಾತ್ರಿ ನಿಜಕ್ಕೂ ಆಗಿದ್ದೇನು? ಪೊಲೀಸರ ಮುಂದೆ ಅಸಲಿ ವಿಚಾರ ಹೇಳಿದ ಸೈಫ್..!


">January 23, 2025

ಇನ್ನು ಈ ಕೇಸ್​ ಬಗ್ಗೆ ತಮ್ ಎಕ್ಸ್​ ಖಾತೆಯಲ್ಲಿ ಸ್ಪಷ್ಟನೆ ಕೊಟ್ಟಿರುವ ರಾಮ್​ಗೋಪಾಲ್ ವರ್ಮಾ, ಅಂದೇರಿ ಕೋರ್ಟ್​ನಲ್ಲಿ ನನ್ನ ಬಗ್ಗೆ ನಡೆಯುತ್ತಿರುವ ವಿಚಾರಣೆಯ ಬಗ್ಗೆ ಅನೇಕ ಸುದ್ದಿಗಳನ್ನು ನಾನು ಕೇಳಿದ್ದೇನೆ. ನಾನು ಇಲ್ಲಿ ಒಂದನ್ನು ಸ್ಪಷ್ಟಪಡಿಸಲು ಇಷ್ಟಪಡುತ್ತೇನೆ. ಇದು ಸುಮಾರು 7 ವರ್ಷಗಳ ಹಳೆಯ ಕೇಸ್​, 2 ಲಕ್ಷ 38 ಸಾವಿರ ರೂಪಾಯಿಗೆ ನನ್ನ ಮಾಜಿ ಕೆಲಸಗಾರನಿಗೆ ಸಂಬಂಧಿಸಿದ ಕೇಸ್​. ಇದನ್ನು ನನ್ನ ವಕೀಲರು ಗಮನಿಸುತ್ತಿದ್ದಾರೆ. ಸದ್ಯ ಪ್ರಕರಣ ಕೋರ್ಟ್​​ನಲ್ಲಿ ಇರುವುದರಿಂದ ನಾನು ಇದರ ಬಗ್ಗೆ ಹೆಚ್ಚಿಗೆ ಏನು ಹೇಳಲಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment