/newsfirstlive-kannada/media/post_attachments/wp-content/uploads/2024/12/RGV.jpg)
ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಪುಷ್ಪ-2 ವಿಶ್ವದಲ್ಲೇ ಹಲ್​ಚಲ್ ಸೃಷ್ಟಿಸುವ ಸೂಚನೆ ನೀಡಿದೆ. ಇಂದು ಪುಷ್ಪ-2 ರಿಲೀಸ್ ಆಗಿದ್ದು, ಅಭಿಮಾನಿಗಳು ಫಸ್ಟ್​ ಡೇ ಫಸ್ಟ್​ ಶೋ ಅನ್ನ ನೋಡಿ ಥ್ರಿಲ್ ಆಗಿದ್ದಾರೆ.
ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಿದ ಬೆನ್ನಲ್ಲೇ ಎಲ್ಲೆಲ್ಲೂ Pushpa 2 The Rule ಚಿತ್ರದ ಬಗ್ಗೆಯೇ ಮಾತನಾಡಲು ಶುರುಮಾಡಿದ್ದಾರೆ. ಪುಷ್ಪ 2 ಚಿತ್ರ ದೇಶಾದ್ಯಂತ ಟ್ರೆಂಡ್ ಆಗ್ತಿದೆ. ಬೆನ್ನಲ್ಲೇ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಪುಷ್ಪ 2 ಚಿತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ.
ಆರ್‌ಜಿವಿ ಅಲ್ಲು ಅರ್ಜುನ್ ಅವರನ್ನು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ALL INDIA INDUSTRY HIT ಸಿನಿಮಾ ನೀಡಿದ್ದಕ್ಕಾಗಿ ಅಭಿನಂದನೆಗಳು. ಅಲ್ಲು ಈಸ್ ಮೆಗಾ ಮೆಗಾ ಮೆಗಾ ಮೆಗಾ ಮೆಗಾ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸರಣಿಯಾಗಿ ಮೂರು ಟ್ವೀಟ್​ಗಳನ್ನು ಮಾಡಿದ್ದಾರೆ. ಬೆನ್ನಲ್ಲೇ ಆರ್​ಜಿವಿ ಅವರ ಟ್ವೀಟ್​ ವೈರಲ್ ಆಗಿವೆ.
ಪುಷ್ಪ 2 ಚಿತ್ರದಲ್ಲಿನ ಫೈಟ್ ಮತ್ತು ಸೆಂಟಿಮೆಂಟ್ ದೃಶ್ಯಗಳು ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಯಾಮೆರಾ ವರ್ಕ್, ಡೈರೆಕ್ಷನ್ ನೆಕ್ಸ್ಟ್​ ಲೆವೆಲ್​ಗೆ ಕೊಂಡೊಯ್ದಿದೆ ಎಂದು ಫ್ಯಾನ್ಸ್ ಮಾತಾಡಿಕೊಳ್ತಿದ್ದಾರೆ.
ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಮತ್ತು ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಸುನಿಲ್, ಫಹಾದ್ ಫಾಜಿಲ್, ರಾವ್ ರಮೇಶ್ ಮೊದಲಾದ ತಾರಾಬಳಗ ಇದೆ. ಸುಮಾರು 400 ರಿಂದ 500 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ.
CONGRATS to @alluarjun and team for giving a ALL INDIA INDUSTRY HIT ..
ALLU is MEGA MEGA MEGA MEGA MEGA— Ram Gopal Varma (@RGVzoomin) December 5, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ