newsfirstkannada.com

ಅಯೋಧ್ಯೆಯ ಮಂದಿರಕ್ಕೆ ಆಗಮಿಸಿದ ಶ್ರೀರಾಮಲಲ್ಲಾ ವಿಗ್ರಹ.. SPG ಮಾದರಿಯಲ್ಲೇ ತರಬೇತಿ ನೀಡಿ ಭದ್ರತೆ..!

Share :

Published January 18, 2024 at 7:25am

  ಇಂದಿನಿಂದ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಾರಂಭ

  ಯಾವುದೇ ಅಹಿತಕರ ಘಟನೆ ನಡೆಯಂದತೆ ಭಾರೀ ಭದ್ರತೆ

  ಸಭಾ ಕಾರ್ಯಕ್ರಮದಲ್ಲಿ 7,500 ಗಣ್ಯರಿಗೆ ಅವಕಾಶ

ಶತಮಾನಗಳ ವನವಾಸ ಅಂತ್ಯ ಆಗಿದೆ.. ದಶಕಗಳ ಕೋರ್ಟ್​​​ ಕಟ್ಟಳೆಗಳು ಸಮಾಪ್ತಿ ಕಂಡಿವೆ.. ನವಭಾರತದಲ್ಲಿ ಶುರುವಾದ ರಾಮಾಯಣ, ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮೂಲಕ ಕೊನೆ ಆಗಲಿದೆ.. ಸರಯೂ ನದಿ ತೀರದ ಐತಿಹಾಸಿಕ, ಪೌರಾಣಿಕ ಪಟ್ಟಣ ಅಯೋಧ್ಯೆಯಲ್ಲಿ ಮತ್ತೊಮ್ಮೆ ಶ್ರೀರಾಮ ಸಿಂಹಾಸನರೂಢರಾಗ್ತಿದ್ದಾರೆ. ಈ ಮೂಲಕ ಭಕ್ತರ ಪಾಲಿಗೆ ದರ್ಶನ ಭಾಗ್ಯ ಕಲ್ಪಿಸಲಿದ್ದಾರೆ.

ಅಯೋಧ್ಯೆಯ ಮಂದಿರಕ್ಕೆ ಆಗಮಿಸಿದ ಶ್ರೀರಾಮಲಲ್ಲಾ ವಿಗ್ರಹ

ಶ್ರೀರಾಮ.. ದಶರಥ ನಂದನ.. ಜಾನಕಿ ವಲ್ಲಭ.. ಶತಕೋಟಿ ಭಾರತೀಯರ ಹೃದಯವಾಸಿ.. ಜನವರಿ 22.. ಶುಭ ಸೋಮವಾರ.. ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ.. ಅಯೋಧ್ಯೆ ಮತ್ತೆ ಗತ ವೈಭವಕ್ಕೆ ಸಾಕ್ಷಿ ಆಗಲಿದೆ.. ಮರ್ಯಾದಾ ಪುರುಷೋತ್ತಮ ಶ್ರೀರಾಮಪ್ರಭು ಮಂದಿರ ನಿರ್ಮಾಣ ಲೋಕಾರ್ಪಣೆ ಆಗಲಿದೆ.. ನಿನ್ನೆ ರಾಮಮಂದಿರಕ್ಕೆ ಪ್ರಭು ಶ್ರೀರಾಮಲಲ್ಲಾ ವಿಗ್ರಹ ಆಗಮಿಸಿದೆ.. ಭಾರೀ ಬಂದೋಬಸ್ತ್​​ ಮಧ್ಯೆ ಬೃಹತ್​ ಲಾರಿಯಲ್ಲಿ ಸುರಕ್ಷಿತವಾಗಿ ಮೂರ್ತಿ ತರಲಾಗಿದೆ.. ದಾರಿಯೂದ್ದಕ್ಕೂ ಜನರಿಂದ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು..

ಯಾವುದೇ ಅಹಿತಕರ ಘಟನೆ ನಡೆಯಂದತೆ ಭಾರೀ ಭದ್ರತೆ

ಅಯೋಧ್ಯೆ ಹಿಂದೆಂದಿಗಿಂತಲೂ ಭದ್ರತಾ ಕಾವಲು ಏರ್ಪಟ್ಟಿದೆ.. ಇಡೀ ಅಯೋಧ್ಯೆ ಏಳು ಸುತ್ತಿನ ಭದ್ರತಾ ಕೋಟೆ ಆಗಿ ಮಾರ್ಪಟ್ಟಿದೆ.. ಉತ್ತರ ಪ್ರದೇಶದ ಕಮ್ಯಾಂಡೋಗಳು, ಇಡೀ ನಗರದ ಕಾವಲಿಗೆ ನಿಂತಿದ್ದಾರೆ.. ಬಾಲರಾಮನ ಪ್ರಾಣ ಪ್ರತಿಷ್ಠಾನ ಪ್ರಯುಕ್ತ ಅಯೋಧ್ಯೆಗೆ ಗಣ್ಯರ ದಂಡೆ ಆಗಮಿಸ್ತಿದ್ದು ಸುರಕ್ಷತಾ ಕಣ್ಗಾವಲು ಇಡ್ಲಾಗಿದೆ.. ಎಸ್‌ಪಿಜಿ ಮಾದರಿಯಲ್ಲೇ ತರಬೇತಿ ನೀಡಿ ಭದ್ರತೆ ನೀಡಲಾಗಿದೆ..
ಜನವರಿ 21 ರಂದೇ ಪ್ರಧಾನಿ ಮೋದಿ, ಅಯೋಧ್ಯೆಗೆ ಆಗಮಿಸ್ತಿದ್ದಾರೆ.. ಈ ಮೊದಲು ಜನವರಿ 22ರ ಬೆಳಗ್ಗೆ 11 ಗಂಟೆಗೆ ಆಗಮಿಸುವ ಬಗ್ಗೆ ಕಾರ್ಯಕ್ರಮ ನಿಗದಿ ಆಗಿತ್ತು.. ಆದ್ರೆ, ದೆಹಲಿ ಮತ್ತು ಅಯೋಧ್ಯೆಯಲ್ಲಿ ದಟ್ಟ ಮಂಜು ಆವರಿಸುತ್ತಿರುವ ಹಿನ್ನಲೆ, ಒಂದು ದಿನ ಮುಂಚಿತವಾಗಿಯೇ ಪ್ರಧಾನಿ ಮೋದಿ ಅಯೋಧ್ಯೆಗೆ ಬಂದು ವಾಸ್ತವ್ಯ ಹೂಡಲಿದ್ದಾರೆ..

ಸಭಾ ಕಾರ್ಯಕ್ರಮದಲ್ಲಿ 7,500 ಗಣ್ಯರಿಗೆ ಅವಕಾಶ

ದೇವಾಲಯದ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿಯನ್ನ ಅಯೋಧ್ಯೆ ಉಪವಿಭಾಗಾಧಿಕಾರಿ ಗೌರವ್ ದಯಾಳ್ ನೀಡಿದ್ದಾರೆ.. ಸಭಾ ಕಾರ್ಯಕ್ರಮದಲ್ಲಿ 7,500 ಮಂದಿ ಭಾಗವಹಿಸಲಿದ್ದಾರೆ.. ಸಭಾ ಕಾರ್ಯಕ್ರಮ ಒಂದು ಗಂಟೆ ಕಾಲ ನಡೆಯಲಿದೆ.. ಆದಾದ ಬಳಿಕ ಅತಿಥಿಗಳು ರಾಮಲಲ್ಲಾ ದರ್ಶನ ಪಡೆಯಬಹುದು.. ಇನ್ನು, ಅತಿಥಿಗಳ ಸೀಟಿಂಗ್ ವ್ಯವಸ್ಥೆ ಮಾಡಲಾಗ್ತಿದೆ.. ಯಾಱರು ಎಲ್ಲೆಲ್ಲಿ ಕುಳಿತುಕೊಳ್ಳಬೇಕು ಎಂಬ ತೀರ್ಮಾನ ಆಗ್ತಿದೆ.. ವಿಐಪಿಗಳನ್ನ ವಾಹನಗಳ ಮೂಲಕ ಒಳಗೆ ಕರೆದೊಯ್ಯಲಾಗುತ್ತೆ.. ರಾಮಜನ್ಮಭೂಮಿ ಪಥದವರೆಗೂ ಅತಿಥಿಗಳ ವಾಹನ ಬರಲು ಅವಕಾಶ ಇರಲಿದೆ ಅಂತ ಗೌರವ್ ದಯಾಳ್ ಮಾಹಿತಿ ತಿಳಿಸಿದ್ದಾರೆ..

ರಮಾನಂದ ಸಾಗರ್ ಅವರ ರಾಮಾಯಣದ ರಾಮ, ಲಕ್ಷ್ಮಣ, ಸೀತೆ ಪಾತ್ರಧಾರಿಗಳು ಈಗಾಗಲೇ ಅಯೋಧ್ಯೆಗೆ ಆಗಮಿಸಿದ್ದಾರೆ.. ಕಾರ್ಯಕ್ರಮದಲ್ಲಿ ಭಾಗಿ ಆಗಲು ರಾಯಾಯಣದ ಪಾತ್ರಧಾರಿಗಳಿಗೆ ಆಹ್ವಾನ ನೀಡಲಾಗಿತ್ತು.. ಇತ್ತ, ಪ್ರಧಾನಿ ಮೋದಿ, ದಕ್ಷಿಣ ಯಾತ್ರೆ ಕೈಗೊಂಡಿದ್ದಾರೆ.. ಕಳೆದ ಶುಕ್ರವಾರದಿಂದ ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ ಭೇಟಿ ನೀಡಿದ್ದ ಪ್ರಧಾನಿ, ನಾಳೆ ಕರ್ನಾಟಕ, ತಮಿಳುನಾಡಿಗೆ ಭೇಟಿ ನೀಡ್ತಿದ್ದಾರೆ.. ವ್ರತ ಅನುಷ್ಠಾನದ ಭಾಗವಾಗಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ, ಜಪ, ಧ್ಯಾನ ಮಾಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯ ಮಂದಿರಕ್ಕೆ ಆಗಮಿಸಿದ ಶ್ರೀರಾಮಲಲ್ಲಾ ವಿಗ್ರಹ.. SPG ಮಾದರಿಯಲ್ಲೇ ತರಬೇತಿ ನೀಡಿ ಭದ್ರತೆ..!

https://newsfirstlive.com/wp-content/uploads/2024/01/AYODHYA-3.jpg

Load More