newsfirstkannada.com

ರಾಮ ಮಂದಿರ ಉದ್ಘಾಟನೆಗೆ ದಿನಗಣನೆ; ಅಯೋಧ್ಯೆ ತಲುಪಿದ ಪ್ರಭು ಶ್ರೀರಾಮ ಲಲ್ಲಾ ವಿಗ್ರಹ!

Share :

Published January 17, 2024 at 7:32pm

    ಹಿಂದೂ ಸಮಾಜದ ಬಹು ವರ್ಷಗಳ ಕನಸು ಶ್ರೀರಾಮ ಮಂದಿರ ನಿರ್ಮಾಣ

    ಶ್ರೀರಾಮ ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ!

    ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ ರಾಮನ ಪ್ರತಿಮೆ

ಬೆಂಗಳೂರು: ಹಿಂದೂ ಸಮಾಜದ ಬಹು ವರ್ಷಗಳ ಕನಸು ಶ್ರೀರಾಮ ಮಂದಿರ ನಿರ್ಮಾಣ. ಈ ಶ್ರೀರಾಮ ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಜನವರಿ 22ನೇ ತಾರೀಕು ನಡೆಯಲಿದೆ. ಕರ್ನಾಟಕ ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಶ್ರೀ ರಾಮನ ಪ್ರತಿಮೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ.

ಇನ್ನು, ಈ ಮುನ್ನವೇ ಇಂದೇ ರಾಮ ಮಂದಿರಕ್ಕೆ ಪ್ರಭು ಶ್ರೀರಾಮ ಲಲ್ಲಾ ವಿಗ್ರಹ ಆಗಮಿಸಿದೆ. ಭಾರೀ ಬಂದೋಬಸ್ತ್​​ ಮಧ್ಯೆ ಅಯೋಧ್ಯೆಗೆ ಪ್ರಭು ಶ್ರೀರಾಮ ಲಲ್ಲಾ ವಿಗ್ರಹವನ್ನು ತರಲಾಗಿದೆ. ಅದು ಬೃಹತ್​ ಲಾರಿಯಲ್ಲಿ ಸುರಕ್ಷಿತವಾಗಿ ಇಟ್ಟು ಸಾಗಿಸಲಾಗಿದೆ.

ನಾಳೆ ಬೆಳಗ್ಗೆ ರಾಮ ಮಂದಿರದ ಗರ್ಭಗುಡಿಗೆ ವಿಗ್ರಹ ತಲುಪಲಿದೆ. ಈಗಾಗಲೇ ಜನವರಿ 16ರಿಂದಲೇ ವಿಧಿವಿಧಾನ ಶುರುವಾಗಿದ್ದು, ನಾಳೆಯಿಂದ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಾರಂಭ ಆಗಲಿದೆ. ಜ. 22ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ ಮಂದಿರ ಉದ್ಘಾಟನೆಗೆ ದಿನಗಣನೆ; ಅಯೋಧ್ಯೆ ತಲುಪಿದ ಪ್ರಭು ಶ್ರೀರಾಮ ಲಲ್ಲಾ ವಿಗ್ರಹ!

https://newsfirstlive.com/wp-content/uploads/2024/01/Ram-Lalla.jpg

Load More