newsfirstkannada.com

Ram Lalla idol: ಶಿಲ್ಪಿ ಅರುಣ್​ ಯೋಗಿರಾಜ್​ಗೆ ಮೈಸೂರಲ್ಲಿ ‘ಸ್ವೀಟ್’ ಗಿಫ್ಟ್..!

Share :

Published January 19, 2024 at 3:07pm

    ಮೈಸೂರಿನ ಪ್ರಸಿದ್ಧ ಸ್ವೀಟ್ ಅಂಗಡಿಯಿಂದ ಗಿಫ್ಟ್

    ರಾಮ ಮಂದಿರ ಮಾದರಿಯ ಸ್ವೀಟ್​ಗಳ ಉಡುಗೊರೆ

    ಜನವರಿ 22 ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ

ಅರುಣ್ ಯೋಗಿರಾಜ್.. ಮೈಸೂರಿನ ಈ ಶಿಲ್ಪಿ ದೇಶದ ಸೆನ್ಸೇಷನ್.. ಇವರ ಕೆತ್ತನೆಯಲ್ಲಿ ಅರಳಿರುವ ಬಾಲರಾಮನ ರಾಮಲಲ್ಲಾ ಮೂರ್ತಿಗೆ ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ದೇಶದ ಭವ್ಯ ಮಂದಿರದಲ್ಲಿ ನೆಲೆಯೂರಿರುವ ವಿಗ್ರವನ್ನು ಕೆತ್ತಿರೋದು ಕನ್ನಡಿಗ ಅನ್ನೋದೇ ಹೆಮ್ಮೆಯ ಸಂಗತಿ.

ಅಂತೆಯೇ ಅರುಣ್ ಯೋಗಿರಾಜ್ ಅವರ ಸಾಧನೆಯನ್ನು ಇಡೀ ದೇಶ ಕೊಂಡಾಡುತ್ತಿದೆ. ಗಣ್ಯರು ಅವರನ್ನು ಸನ್ಮಾನಿಸಿ ಹಾಡಿ ಹೊಗಳುತ್ತಿದ್ದಾರೆ. ಅಂತೆಯೇ ಮೈಸೂರಿನ ಪ್ರಸಿದ್ಧ ಸ್ವೀಟ್ ಅಂಗಡಿ ‘ಮಹಾಲಕ್ಷ್ಮೀ ಸ್ವಿಟ್ಸ್​’ ಅರುಣ್ ಯೋಗಿರಾಜ್ ಮತ್ತು ಅವರ ಕುಟುಂಬಕ್ಕೆ ಸ್ಪೆಷಲ್ ಗಿಫ್ಟ್ ನೀಡಿದೆ. ರಾಮ ಮಂದಿರ ಮಾದರಿಯಲ್ಲಿ ವಿವಿಧ ಸ್ವೀಟ್​ಗಳನ್ನು ತಯಾರಿಸಿ ಉಡುಗೊರೆಯಾಗಿ ನೀಡಿ ಕೃತಜ್ಞತೆ ಸಲ್ಲಿಸಿದೆ.

ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಆಗಿರುವ ಬಾಲರಾಮನ ಮೂರ್ತಿಯು 51 ಇಂಚು ಎತ್ತರ ಇದೆ. ಇಡೀ ಮೂರ್ತಿಯ ಒಟ್ಟು ಗಾತ್ರ 8 ಅಡಿ ಎತ್ತರ ಹಾಗೂ ಮೂರು ಅಡಿ ಅಗಲ ಇದೆ. ಈ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದಿನ ಸೋಮವಾರ ಅನಾವರಣಗೊಳಿಸಲಿದ್ದಾರೆ. ಈ ಮೊದಲು ಕೇದಾರನಾಥ ದೇಗುಲಕ್ಕೆ ಆದಿ ಶಂಕರಾಚಾರ್ಯರ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಅವರೇ ಕೆತ್ತಿದ್ದರು. ದೆಹಲಿಯ ಇಂಡಿಯಾ ಗೇಟ್ ಬಳಿ (ಕರ್ತವ್ಯ ಪಥ) ಸ್ಥಾಪಿಸಲಾದ ಸುಭಾಶಚಂದ್ರ ಬೋಸ್ ಅವರ ಪ್ರತಿಮೆಯನ್ನೂ ಇವರು ಕೆತ್ತಿದ್ದರು. ಇದನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಎಂಬಿಎ ಪದವೀಧರರಾದ ಅರುಣ್ ಕಾರ್ಪೊರೇಟ್ ನೌಕರಿಯನ್ನು ತೊರೆದು ಕುಟುಂಬ ನಡೆಸಿಕೊಂಡು ಬಂದ ಶಿಲ್ಪ ಕೆತ್ತನೆಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. 2008ರಿಂದ ಈವರೆಗೂ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರತಿಮೆಗಳನ್ನು ಇವರು ಕೆತ್ತಿರೋದು ವಿಶೇಷವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ram Lalla idol: ಶಿಲ್ಪಿ ಅರುಣ್​ ಯೋಗಿರಾಜ್​ಗೆ ಮೈಸೂರಲ್ಲಿ ‘ಸ್ವೀಟ್’ ಗಿಫ್ಟ್..!

https://newsfirstlive.com/wp-content/uploads/2024/01/ARUN-YOGIRAJ.jpg

Load More