/newsfirstlive-kannada/media/post_attachments/wp-content/uploads/2024/12/RAM_MANDIR.jpg)
ಮಹಾಕುಂಭಮೇಳದ ಸಡಗರದಲ್ಲಿ ಇತ್ತ ಅಯೋಧ್ಯ ರಾಮಮಂದಿರಕ್ಕೂ ಭೇಟಿ ನೀಡಿ ದರ್ಶನ ಪಡೆಯುವವರ ಸಂಖ್ಯೆಯಲ್ಲೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಕಾರಣದಿಂದ ದೇವಸ್ಥಾನ ಮಂಡಳಿ ಮಂದಿರವನ್ನು ತೆರೆಯುವ ಸಮಯದಲ್ಲಿ ಬದಲಾವಣೆ ಮಾಡಿದೆ. ನಿತ್ಯ ಬೆಳಗ್ಗೆ 7 ಗಂಟೆಗೆ ತೆರೆಯುತ್ತಿದ್ದ ಮಂದಿರವನ್ನು ಇನ್ನು ಮುಂದೆ ಬೆಳಗ್ಗೆ 6 ಗಂಟೆಗೆ ತೆರೆಯಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಸ್ವತಃ ದೇವಸ್ಥಾನದ ಆಡಳಿತ ಮಂಡಳಿಯೇ ಹೇಳಿದೆ.
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳುವ ಪ್ರಕಾರ, ಭಕ್ತಾದಿಗಳಿಗಾಗಿ ಮಂದಿರ ಇನ್ನು ಮುಂದೆ ಬೆಳಗ್ಗೆ 6 ಗಂಟೆಗೆ ತೆರೆಯಲಿದೆ. ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಭಕ್ತಾದಿಗಳಿಗೆ ಶ್ರೀರಾಮಲಲ್ಲಾನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.
ಬೆಳಗ್ಗೆ 4 ಗಂಟೆಗೆ ಮಂಗಳಾರತಿ ಬಳಿಕ ದೇವಸ್ಥಾನದ ಬಾಗಿಲನ್ನು ಹಾಕಲಾಗುವುದು ಪುನಃ 6 ಗಂಟೆಗೆ ಶೃಂಗಾರ ಆರತಿಯನ್ನು ಕೈಗೊಳ್ಳಲಾಗುವುದು. ಈ ವೇಳೆ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ ಶೋ ವಿನ್ನರ್ ಹನುಮಂತು ಮೊದಲ ಕಾರ್ಯಕ್ರಮ.. ಜನರಿಗೆ ಫುಲ್ ಮನರಂಜನೆ
ಮಧ್ಯಾಹ್ನ 12 ಗಂಟೆಗೆ ರಾಜಭೋಗ ಸಲ್ಲಿಕೆಯಾಗುತ್ತದೆ, ಆವಾಗಲೂ ಕೂಡ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಸಂಜೆ 7ಗಂಟೆಗೆ ಸಂಧ್ಯಾರತಿಯನ್ನು ಕೈಗೊಳ್ಳಲಾಗುವುದು. ನಂತರ 15 ನಿಮಿಷಗಳ ಕಾಲ ಮಂದಿರದ ಬಾಗಿಲು ಮುಚ್ಚಲಾಗುತ್ತದೆ. ನಂತರ ರಾತ್ರಿ ಹತ್ತು ಗಂಟೆಯವರೆಗೂ ಭಕ್ತಾದಿಗಳಿಗೆ ರಾಮಲಲ್ಲಾನ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ರಾತ್ರಿ 10 ಗಂಟೆಗೆ ಶಯನಾರತಿಯನ್ನು ಕೈಗೊಳ್ಳಲಾಗುವುದು. ಈ ಮೊದಲು 9.30ಕ್ಕೆ ಶಯನಾರತಿ ಇರುತ್ತಿತ್ತು ಈಗ ಅದರ ಸಮಯವನ್ನು10 ಗಂಟೆಗೆ ಮುಂದೂಡಲಾಗಿದೆ ಅದಾದ ಬಳಿಕವೇ ಮಂದಿರದ ಬಾಗಿಲುಗಳನ್ನು ಮುಚ್ಚಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ರೈತರೇ ಹುಷಾರ್!!.. ನಿಮ್ಮ ಜಾನುವಾರು ಖದೀಯಲು ಕಾರಿನಲ್ಲಿ ಬರ್ತಾರೆ ಖದೀಮರು
ಸಮಯ ಬದಲಾವಣೆಗೆ ಪ್ರಮುಖ ಕಾರಣವೇ ಭಕ್ತಾದಿಗಳ ಸಂಖ್ಯೆ ಜಾಸ್ತಿಯಾಗಿರುವುದು. ಹೀಗಾಗಿಯೇ ಬೆಳಗ್ಗೆ 90 ನಿಮಿಷ ಹಾಗೂ ರಾತ್ರಿ 30 ನಿಮಿಷ ಹೆಚ್ಚಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಪ್ರಸಾದ ನೀಡುವ ಸಮಯದಲ್ಲಿಯೂ ಕೂಡ ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.
ಫೆಬ್ರವರಿ 3 ರಂದು ಉತ್ತರಪ್ರದೇಶ ಸರ್ಕಾರ ನೀಡಿದ ಮಾಹಿತಿ ಪ್ರಕಾರ ಜನವರಿ 26 ರಿಂದ ಫೆಬ್ರವರಿ 3 ವರೆಗೂ ಅಂದ್ರೆ ವಸಂತ ಪಂಚಮಿಯವರೆಗೂ ಅಯೋಧ್ಯಾ ಶ್ರೀರಾಮಮಂದಿರಕ್ಕೆ ಬರೋಬ್ಬರಿ 1 ಕೋಟಿ ಜನ ಭಕ್ತರು ಭೇಟಿ ನೀಡಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ