ಪಳ ಪಳ ಹೊಳೆಯೋ ರಾಮಲಲ್ಲಾ ಕಣ್ಣು ಕೆತ್ತನೆ ಆಗಿದ್ಹೇಗೆ? ಫೋಟೋ ಹಂಚಿಕೊಂಡ ಅರುಣ್​ ಯೋಗಿರಾಜ್‌!

author-image
Veena Gangani
Updated On
ಪಳ ಪಳ ಹೊಳೆಯೋ ರಾಮಲಲ್ಲಾ ಕಣ್ಣು ಕೆತ್ತನೆ ಆಗಿದ್ಹೇಗೆ? ಫೋಟೋ ಹಂಚಿಕೊಂಡ ಅರುಣ್​ ಯೋಗಿರಾಜ್‌!
Advertisment
  • ಅರುಣ್​ ಯೋಗಿರಾಜ್ ಮೇಲೆ ದೇವರ ಆಶೀರ್ವಾದವಿದೆ ಎಂದ ಭಕ್ತರು
  • ದೇಶದಲ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಮೈಸೂರಿನ ಶಿಲ್ಪಿ​ ಯೋಗಿರಾಜ್
  • ಕೋಟ್ಯಾಂತರ ಭಕ್ತರ ಕಣ್ಮನ ಸೆಳೆದ ಅಯೋಧ್ಯೆಯ ರಾಮಲಲ್ಲಾನ ಕಣ್ಣುಗಳು

ಅಯೋಧ್ಯೆಯಲ್ಲಿ ಇದೇ ಜನವರಿ 22ರಂದು ಭವ್ಯ ರಾಮಮಂದಿರ ಲೋಕಾರ್ಪಣೆಗೊಂಡಿತ್ತು. ಐತಿಹಾಸಿಕ ರಾಮ ಮಂದಿರದಲ್ಲಿ ಕರ್ನಾಟಕದ ಶಿಲ್ಪಿ ಕೆತ್ತಿರೋ ರಾಮ ಲಲ್ಲಾ ಮೂರ್ತಿಯನ್ನೇ ಪ್ರತಿಷ್ಠಾಪನೆಯಾಗಿರೋದು ಹೆಮ್ಮೆಯ ವಿಚಾರ. ಅದರಲ್ಲೂ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗೋಕೆ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವ್ರು ಕೆತ್ತಿರೋ ಮೂರ್ತಿ ಆಯ್ಕೆಯಾಗಿದ್ದು ಇದು ಕರ್ನಾಟಕ್ಕೆ ಹೆಮ್ಮೆಯ ಸಂಗತಿ.

publive-image

51 ಇಂಚಿನ ರಾಮ ಲಲ್ಲಾ ಮೂರ್ತಿಯನ್ನ ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಗ್ರಾಮದ ಕಲ್ಲಿನಿಂದ ಅರುಣ್‌ ಯೋಗಿರಾಜ್ ಕೆತ್ತನೆ ಮಾಡಿದ್ದರು. ಅರುಣ್ ಯೋಗಿರಾಜ್.. ಮೈಸೂರಿನ ಈ ಶಿಲ್ಪಿ ದೇಶದಲ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಇವರ ಕೆತ್ತನೆಯಲ್ಲಿ ಅರಳಿರುವ ರಾಮಲಲ್ಲಾ ಮೂರ್ತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೋಟ್ಯಾಂತರ ಭಕ್ತರ ಕಣ್ಮನ ಸೆಳೆದಿತ್ತು. ಜತೆಗೆ ರಾಮಲಲ್ಲಾ ಮೂರ್ತಿ ಎಷ್ಟೊಂದು ಸುಂದರವಾಗಿದ್ದು, ಎಲ್ಲರ ಹೃದಯವನ್ನು ಗೆದ್ದಿದೆ. ಕಲ್ಲಿನಲ್ಲಿ ಸುಂದರವಾದ ದೇವರ ಮೂರ್ತಿಯನ್ನು ಕೆತ್ತನೆ ಮಾಡಲು ಅರುಣ್ ಯೋಗಿರಾಜ್ ಅವರ ಮೇಲೆ ದೇವರ ಆಶೀರ್ವಾದ ಇದೆ ಅಂತಾ ಹೇಳುತ್ತಿದ್ದರು. ಅದರಲ್ಲೂ ರಾಮನ ಕಣ್ಣುಗಳು ಅದೆಷ್ಟೋ ಭಕ್ತರ ಕಣ್ಣಲ್ಲಿ ನೀರು ತರಿಸಿತ್ತು.


">February 10, 2024

ಇದೀಗ ಅರುಣ್​ ಯೋಗಿರಾಜ್​ ಅವರು ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ರಾಮಲಲ್ಲಾನ ಕಣ್ಣನ್ನು ಕೆತ್ತಲು ಬಳಸಿದ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅರುಣ್ ಯೋಗಿರಾಜ್ ಅವರು ಕೇವಲ ಅರ್ಧ ತಾಸಿನ ಒಳಗೆ ಶ್ರೀ ರಾಮನ ಕಣ್ಣು ಕೆತ್ತಿನೆ ಮಾಡಿದ್ದರಂತೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment