newsfirstkannada.com

ರಾಮಮಂದಿರದ ಬಾಕಿ ಕಾಮಗಾರಿಗೆ ಮತ್ತೆ ಚಾಲನೆ; ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳೋದು ಯಾವಾಗ?

Share :

Published February 4, 2024 at 9:07am

Update February 4, 2024 at 9:08am

  ರಾಮ ಮಂದಿರದಲ್ಲಿ ಏನೆಲ್ಲ ಕೆಲಸಗಳು ಬಾಕಿ ಇವೆ?

  ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕೆಲಸ

  ದೇಗುಲದ 2ನೇ ಮಹಡಿಯ ಕಾಮಗಾರಿ ಕೂಡ ಮುಂದುವರಿಕೆ

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ವಿರಾಜಮಾನನಾಗಿದ್ದಾನೆ. ಜನವರಿ 22 ರಂದು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆದಿದೆ. ಆದ್ರೆ ಶ್ರೀರಾಮನ ಆಸ್ಥಾನದ ಕಾಮಗಾರಿ ಇನ್ನೂ ಮುಗಿದಿಲ್ಲ. ಹೀಗಾಗಿ ಭವ್ಯ ರಾಮಮಂದಿರದ ಉದ್ಘಾಟನೆಯಾಗಿಲ್ಲ. ಇದೀಗ ಪ್ರಾಣ ಪ್ರತಿಷ್ಠಾಪನೆಗಾಗಿ ಸ್ಥಗಿತವಾಗಿದ್ದ ಮಂದಿರದ ನಿರ್ಮಾಣ ಕಾರ್ಯಗಳು ಮತ್ತೆ ಆರಂಭವಾಗಿವೆ.

ಅಯೋಧ್ಯೆಯ ಆಸ್ಥಾನದಲ್ಲಿ ಬಾಲರಾಮನ ಪ್ರಾಣಪ್ರತಿಷ್ಟಾಪನೆ ನಡೆದಿದೆ. ದೇಶದಲ್ಲಿ ಎಲ್ಲೆಲ್ಲೂ ಶ್ರೀರಾಮನ ಜಪ ನಡೀತಿದೆ. ರಾಮಲಲ್ಲಾನ ಕಣ್ತುಂಬಿಕೊಳ್ಳಲು ಕೋಟ್ಯಂತರ ರಾಮಭಕ್ತರು ಅಯೋಧ್ಯೆಗೆ ತೆರಳುತ್ತಿದ್ದಾರೆ. ನಗುಮೊಗದ ಶ್ರೀರಾಮನ ಕಂಡು ಪಾವನರಾಗುತ್ತಿದ್ದಾರೆ. ಈ ಮಧ್ಯೆ ಮಂದಿರ ನಿರ್ಮಾಣದ ಬಾಕಿ ಕಾರ್ಯಗಳನ್ನು ಮತ್ತೆ ಕೈಗೆತ್ತಿಕೊಳ್ಳಲಾಗಿದೆ.

ರಾಮಮಂದಿರದಲ್ಲಿ ಬಾಕಿ ಕಾಮಗಾರಿಗೆ ಮತ್ತೆ ಚಾಲನೆ
ಜನವರಿ 22 ರಂದು ವೈಭೋಗದಿಂದ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿತ್ತು. ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿತ್ತು. ಕೋಟ್ಯಂತರ ಹಿಂದೂಗಳ ಶತಮಾನಗಳ ಕನಸು ನನಸಾಗಿತ್ತು. ಇದಾದ ಬಳಿಕ ರಾಮಮಂದಿರ ನಿರ್ಮಾಣ ಕಾಮಗಾರಿ ಕಾರ್ಯ ಪುನರ್‌ ಆರಂಭಗೊಂಡಿದೆ. ಭವ್ಯ ಮಂದಿರದ ಗರ್ಭಗುಡಿಯಲ್ಲಿ ಬಾಲರಾಮ ವಿರಮಿಸುತ್ತಿದ್ದು, ಇದೀಗ ಮಂದಿರದ ಕಾರ್ಯವನ್ನ ನಿರ್ಮಾಣ ಸಮಿತಿ ಕೈಗೆತ್ತಿಕೊಂಡಿದೆ.. ಬಾಕಿ ಉಳಿದಿರೋ ಕಾಮಗಾರಿಯನ್ನ ಪೂರ್ಣಗೊಳಿಸಲು ಮುಂದಾಗಿದೆ.

ಏನೆಲ್ಲಾ ಕಾರ್ಯಗಳು ಆರಂಭ?

 • ಮಂದಿರ ಸುತ್ತ 795 ಮೀಟರ್ ಉದ್ದದ ಪರಿಕ್ರಮ ನಿರ್ಮಾಣ
 • ಕೆಳಗಿನ ಸ್ತಂಭದ ಮೇಲೆ ಪ್ರತಿಮಾಶಾಸ್ತ್ರದ ಕಾರ್ಯ ಆರಂಭ
 • ಮಂದಿರದ ಮೊದಲ ಮಹಡಿಯ ರಾಜ ದರ್ಬಾರ್ ಕಾಮಗಾರಿ
 • ದೇಗುಲದ 2ನೇ ಮಹಡಿಯ ಕಾಮಗಾರಿ ಕೂಡ ಮುಂದುವರಿಕೆ
 • ದೇಗುಲದಲ್ಲಿ ‘ಪಾರ್ಕೋಟ’ ಕಾಮಗಾರಿ ಪೂರ್ಣವಾಗಬೇಕಿದೆ

2024ರ ಅಂತ್ಯಕ್ಕೆ ಮಂದಿರ ನಿರ್ಮಾಣ ಕಾರ್ಯ ಪೂರ್ಣ
2024ರ ಅಂತ್ಯಕ್ಕೆ ಭವ್ಯ ರಾಮಮಂದಿರದ ಕಾರ್ಯ ಬಹುತೇಕ ಮುಕ್ತಾಯವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಈ ಬಗ್ಗೆ ಮಾಹಿತಿ ನೀಡಿದ್ದು, ಮಂದಿರ ನಿರ್ಮಾಣ ಕಾರ್ಯ 2024 ರಲ್ಲಿ ಪೂರ್ಣವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಮಂದಿರದ ನಿರ್ಮಾಣ ಕಾರ್ಯ ಪುನರ್ ಆರಂಭಗೊಂಡಿದೆ. ದೇವಾಲಯದಲ್ಲಿ ಮತ್ತೊಮ್ಮೆ ನಿರ್ಮಾಣ ಕಾರ್ಯ ಆರಂಭವಾಗಿದೆ. ‘ಪಾರ್ಕೋಟ’ ಕಾಮಗಾರಿ ಪೂರ್ಣಗೊಳ್ಳಬೇಕಿದೆ. 795 ಮೀಟರ್‌ನ ‘ಪರಿಕ್ರಮ’ ಗೋಡೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ಮೊದಲ ಮತ್ತು ಎರಡನೇ ಮಹಡಿಯಲ್ಲಿ ರಾಜಾರಾಮನ ‘ದರ್ಬಾರ್’ ಕೆಲಸವು ಈಗ ಏಕಕಾಲದಲ್ಲಿ ಪ್ರಾರಂಭವಾಗಲಿದೆ. ಇದು ಡಿಸೆಂಬರ್ 2024 ರಲ್ಲಿ ಅದು ಪೂರ್ಣಗೊಳ್ಳಲಿದೆ-ನೃಪೇಂದ್ರ ಮಿಶ್ರಾ, ಮಂದಿರ ನಿರ್ಮಾಣ ಸಮಿತಿ ಮುಖ್ಯಸ್ಥ

ಒಟ್ಟಾರೆ, ಭರತ ಖಂಡದೊಳಗೆ ಬಾಲರಾಮನ ಜಯಘೋಷ ಮಾರ್ಧನಿಸುತ್ತಿದೆ. ಎಲ್ಲೆಲ್ಲೂ ಜೈ ಶ್ರೀರಾಮ್ ಎಂಬ ಮಂತ್ರಘೋಷವೇ ಕೇಳುತ್ತಿದೆ. ಇದೀಗ ರಾಮಮಂದಿರ ನಿರ್ಮಾಣ ಕಾರ್ಯ ಮುಕ್ತಾಯವಾಗಿ ದೇಗುಲ ಲೋಕಾರ್ಪಣೆಗೊಂಡ್ರೆ ಹಿಂದೂಗಳ ಪವಿತ್ರ ಕ್ಷೇತ್ರಕ್ಕೆ ಮತ್ತಷ್ಟು ಭಕ್ತಿಯ ಸಾಗರ ಹರಿಯೋದಂತೂ ಪಕ್ಕಾ.

ವಿಶೇಷ ವರದಿ: ಚಂದ್ರಮೋಹನ್, ನ್ಯಾಷನಲ್ ಡೆಸ್ಕ್‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಮಂದಿರದ ಬಾಕಿ ಕಾಮಗಾರಿಗೆ ಮತ್ತೆ ಚಾಲನೆ; ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳೋದು ಯಾವಾಗ?

https://newsfirstlive.com/wp-content/uploads/2023/10/Ram-Mandir-1.jpg

Load More