newsfirstkannada.com

ಇಂದು ಕೋಟ್ಯಾಂತರ ರಾಮಭಕ್ತರ ಆಸೆ ಈಡೇರಲಿದೆ.. ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ

Share :

Published January 17, 2024 at 7:58am

    ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ಶ್ರೀರಾಮನ ಮೂರ್ತಿ

    ರಾಮಮಂದಿರದ ಧಾರ್ಮಿಕ ವಿಧಿವಿಧಾನಗಳು ಭರದಿಂದ ಸಾಗುತ್ತಿವೆ

    ರಾಮರಾಜ್ಯದಲ್ಲಿ ಶಬರಿಯಂತೆ ಕಾತರದಿಂದ ಕಾಯುತ್ತಿರುವ ಭಕ್ತರು

ಅಯೋಧ್ಯೆಯಲ್ಲಿ ತ್ರೇತಾಯುಗದ ವೈಭವ ಮರುಕಳಿಸಿದೆ. ರಾಮಮಂದಿರ ಉದ್ಘಾಟನೆಗೆ ಮುಂಚಿತವಾಗಿ ಧಾರ್ಮಿಕ ವಿಧಿವಿಧಾನಗಳು ಭರದಿಂದ ನಡೆಯುತ್ತಿವೆ. ಇಂದು ರಾಮನ ಭಕ್ತರು ಕಾತರದಿಂದ ಎದುರು ನೋಡ್ತಿದ್ದ ರಾಮಲಲ್ಲಾ ಮೂರ್ತಿ ಮೊದಲ ಬಾರಿಗೆ ದರ್ಶನವಾಗಲಿದೆ.

ರಾಮರಾಜ್ಯದಲ್ಲಿ ರಾಮನ ಆಗಮನಕ್ಕೆ ಭಕ್ತರು ಶಬರಿಯಂತೆ ಕಾತರದಿಂದ ಕಾಯ್ತಿದ್ದಾರೆ. ಎಲ್ಲೆಲ್ಲೂ ಸಡಗರ, ಸಂಭ್ರಮ ಮನೆಮಾಡಿದೆ. ದಶದಿಕ್ಕುಗಳಲ್ಲೂ ಮರ್ಯಾದಾ ಪುರುಷೋತ್ತಮನದ್ದೇ ಜಪ-ತಪ. ಭಜನೆ ಕೇಳಿಬರುತ್ತಿದೆ. ಅಯೋಧ್ಯೆಯ ಕಣ ಕಣವೂ ಭಕ್ತಿ ಭಾವದಿಂದ ಕೂಗಿ ಹೇಳುತ್ತಿದೆ.

ರಾಮರಾಜ್ಯದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲು ಶತಕೋಟಿಗೂ ಅಧಿಕ ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ. ನಿನ್ನೆಯಿಂದಲೇ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಅದ್ಧೂರಿಯಾಗಿ ಶುರುವಾಗಿದೆ. ಟ್ರಸ್ಟ್​​ನಿಂದ ನೇಮಕವಾದ ಅರ್ಚಕರಿಂದ ಪೂಜಾ ಕೈಂಕರ್ಯ ಶುರುವಾಗಿವೆ.

ಇಂದು ದೇಶದ ಜನರಿಗೆ ದರ್ಶನವಾಗಲಿದೆ ಬಾಲರಾಮನ ಮೂರ್ತಿ

ಎಲ್ಲರೂ ಕಾತುರದಿಂದ ಕಾಯ್ತಿರೋದು ಆ ಒಂದು ಕ್ಷಣಕ್ಕೆ. ಈಗಾಗಲೇ ಭಕ್ತರ ಮನದಲ್ಲಿ ಶ್ರೀರಾಮ ಅಚ್ಚಳಿಯದೇ ಆರೂಢನಾಗಿದ್ದಾನೆ. ಆದ್ರೂ ಕೂಡ ಇಂದು ಬಾಲರಾಮನನ್ನು ನೋಡಲು ಆತನ ದರ್ಶನ ಮಾಡಲು ಭಕ್ತಸಾಗರ ಎದುರು ನೋಡ್ತಿದೆ. ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ಮೂರ್ತಿ ಇಂದು ಅಯೋಧ್ಯೆ ರಾಮಮಂದಿರದ ಆವರಣವನ್ನು ಪ್ರವೇಶ ಮಾಡಲಿದೆ. ರಾಮಮಂದಿರದ ಕಾಂಪ್ಲೆಕ್ಸ್​ನ‌ 70 ಎಕರೆ ಜಾಗದಲ್ಲಿ ಮೂರ್ತಿಯ ಮೆರವಣಿಗೆಯಾಗಲಿದ್ದು, ಈ ವೇಳೆಯೇ ದೇಶದ ಜನರಿಗೆ ರಾಮಲಲ್ಲಾ ಮೂರ್ತಿಯ ‌ಮೊದಲ ದರ್ಶನವಾಗಲಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಕರ್ಮಕುಟಿಯ ತಪಸ್ಸು ಹಾಗೂ ಪೂಜೆ ನೆರವೇರಲಿದೆ. ಮಂಗಳ ಕಳಸದಲ್ಲಿ ಸರಯೂ ನೀರಿನೊಂದಿಗೆ ಮಂದಿರವನ್ನು ಭಕ್ತರು ತಲುಪುಲಿದ್ದಾರೆ. ಇಂದಿನಿಂದ ಜನವರಿ 22 ರವರೆಗೆ ಗಣೇಶ್ವರ ಶಾಸ್ತ್ರಿ‌ದ್ರಾವಿಡ್, ಲಕ್ಷ್ಮಿಕಾಂತ್ ದೀಕ್ಷಿತ್ ನೇತೃತ್ವದಲ್ಲಿ ಮೂರ್ತಿಯ ಪ್ರಾಣಪ್ರತಿಷ್ಠೆಯ ಪೂಜಾ ವಿಧಿವಿಧಾನ ನಡೆಯಲಿದೆ.

ರಾಮನ ಪ್ರಾಣಪ್ರತಿಷ್ಠಾಪನೆ

  • ನಾಳೆ ಗಣೇಶ ಅಂಬಿಕಾ ಪೂಜೆ, ವರುಣ ಪೂಜೆ, ಮಾತ್ರಿಕಾ ಪೂಜೆ
  • ಬ್ರಾಹ್ಮಿಣ ವರುಣ, ವಾಸ್ತು ಪೂಜೆಯೊಂದಿಗೆ ಔಪಚಾರಿಕ ಪೂಜೆ ಆರಂಭ
  • ಜ.19 ರಂದು ಮಂದಿರದಲ್ಲಿ ಅಗ್ನಿ ಸ್ಥಾಪನಾ, ನವಗ್ರಹ ಸ್ಥಾಪನಾ, ಹವನ
  • ಜ.20 ಸರಯೂ ನೀರಿನಿಂದ ಗರ್ಭಗೃಹ ಶುದ್ಧಗೊಳಿಸುವಿಕೆ, ವಾಸ್ತುಶಾಂತಿ
  • ಜ. 21ರಂದು ರಾಮಮಂದಿರದಲ್ಲಿ 125 ಕಳಸಗಳಿಗೆ ಪೂಜೆ ಮಾಡಲಾಗುತ್ತೆ
  • ಜ.22 -ಬೆಳಗಿನ ಪೂಜೆ, ಪ್ರಾರ್ಥನೆ ಬಳಿಕ, ರಾಮಲಲ್ಲಾ ಪ್ರಾಣ ಪ್ರತಿಷ್ಠೆ
  • ಮೃಗಶಿರಾ ನಕ್ಷತ್ರದಲ್ಲಿ 12 ಗಂಟೆ ಬಳಿಕ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ

ನಿನ್ನೆಯಿಂದಲೇ ರಾಮ ಪ್ರಾಣ ಪ್ರತಿಷ್ಠಾಪನೆ ಕೈಂಕರ್ಯಗಳು ಆರಂಭವಾಗಿವೆ. ಇದು ಭಕ್ತರು ಕಾತರದಿಂದ ಎದುರು ನೋಡ್ತಿದ್ದ ಅತಮ್ಮ ಆರಾಧ್ಯ ದೈವ ಬಾಲರಾಮನ ಮೂರ್ತಿಯ ದರ್ಶನವಾಗಲಿದೆ. ಇದಕ್ಕಾಗಿ ಇಡೀ ವಿಶ್ವವೇ ಎದುರು ನೋಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಕೋಟ್ಯಾಂತರ ರಾಮಭಕ್ತರ ಆಸೆ ಈಡೇರಲಿದೆ.. ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ

https://newsfirstlive.com/wp-content/uploads/2024/01/RAM_AYODHYA-1.jpg

Load More