newsfirstkannada.com

13 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, 10 ಸಾವಿರ ಸಿಸಿಟಿವಿ.. ರಾಮನೂರಿನ ರಕ್ಷಾ ಕವಚ ಹೇಗಿದೆ?

Share :

Published January 21, 2024 at 6:40am

  ದೇಶದ ಲಕ್ಷಾಂತರ ದೇವಸ್ಥಾನಗಳಲ್ಲಿ ಎಲ್​​​ಇಡಿ ಪರದೆಯ ವ್ಯವಸ್ಥೆ

  ಎರಡು ಬಾಂಬ್ ಪತ್ತೆ ದಳ ಮತ್ತು 2 ವಿಧ್ವಂಸಕ ದಳದ ತಂಡಗಳು

  ಮ್ಯಾನ್​ ಪವರ್​ ಜೊತೆಗೆ ಹೈಟೆಕ್​ ಭದ್ರತೆಗೆ ಹೆಚ್ಚು ಆದ್ಯತೆ ನೀಡಿದೆ

ಅಯೋಧ್ಯೆಯ ಭದ್ರತೆ ಅದೊಂದು ಅಭೇದ್ಯ, ಬೇಧಿಸಲಾಗದ ಚಕ್ರವ್ಯೂಹ. ನಾಳೆ ಇಡೀ ಜಗತ್ತಿನ ಕಣ್ಣು, ರಾಮನೂರಿನ ಮೇಲೆ ನೆಟ್ಟಿರುತ್ತದೆ. ಹೀಗಾಗಿ ಅಭೂತಪೂರ್ವ ಭದ್ರತೆ ನಿಯೋಜನೆ ಆಗಿದೆ.

ಅಯೋಧ್ಯೆಯಲ್ಲಿ ರಾಮಲಾಲ ಪ್ರಾಣಪ್ರತಿಷ್ಠಾಪನೆಗೆ ಇವತ್ತೊಂದೆ ದಿನ ಬಾಕಿ. ರಾಮ ನಾಮ ಸ್ಮರಣೆಯೊಂದಿಗೆ ನಾಳೆ ಸೂರ್ಯೋದಯ ಆಗಲಿದೆ. ರಾಮ ಭಕ್ತಿ ಸಾಗರದ ಸೆಲೆ ಆಗಿರುವ ರಾಮನೂರಿನಲ್ಲಿ ರಾಮನ ಮೇಲಿನ ಭಕ್ತಿ ಜೊತೆಗೆ ಪ್ರತಿ ಹಂತದಲ್ಲೂ ರಕ್ಷಣೆಯ ಶಕ್ತಿ ಮಿಳಿತಗೊಂಡಿದೆ. ಒಂದ್ಕಡೆ ಧಾರ್ಮಿಕ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. ಇನ್ನೊಂದ್ಕಡೆ ರಕ್ಷಣೆಗಾಗಿ 7 ಸುತ್ತಿನ ಕೋಟೆ ನಿರ್ಮಾಣವಾಗಿದೆ.

ರಾಮನೂರಿನಲ್ಲಿ ಏಳು ಸುತ್ತಿನ ಭದ್ರತಾ ಕೋಟೆ!

ಅಯೋಧ್ಯೆಯಲ್ಲಿ ಭಾರೀ ಪೊಲೀಸ್​ ಸರ್ಪಗಾವಲು ಹಾಕಲಾಗಿದೆ. ಇಡೀ ಅಯೋಧ್ಯೆ ನಗರವು 7 ಸುತ್ತಿನ ಭದ್ರಕೋಟೆಯಾಗಿ ಮಾರ್ಪಾಡಾಗಿದೆ. ಎಲ್ಲೆಲ್ಲೂ ಪೊಲೀಸರು, ಅರೆಸೇನೆ, ಉಗ್ರ ನಿಗ್ರಹ ದಳದ ಕಮಾಂಡೋಗಳು ಕಣ್ಣಿಗೆ ಕಾಣ್ತಿದ್ದಾರೆ. ಅಯೋಧ್ಯೆಯಲ್ಲಿ ನೆಲ, ಜಲ, ಆಕಾಶದವರೆಗೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಅಷ್ಟಕ್ಕೂ ಅಯೋಧ್ಯೆಯಲ್ಲಿ ಭದ್ರತಾ ವ್ಯವಸ್ಥೆ ಹೇಗಿದೆ? ಏನೆಲ್ಲ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಅನ್ನೋದನ್ನ ನೋಡೋದಾದ್ರೆ,

‘ಅಯೋಧ್ಯೆ ಅಭೇದ್ಯ’ ಕೋಟೆ

 • ಬರೋಬ್ಬರಿ 10 ಸಾವಿರಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ
 • ಸರಯೂ ತಟದಲ್ಲಿ ಎಸ್​ಡಿಆರ್​​ಎಫ್​, ಎನ್​ಡಿಆರ್​​ಎಫ್​​
 • ನಗರದಾದ್ಯಂತ 13 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ
 • ಯುಪಿ ಎಟಿಎಸ್‌ನ ಕಮಾಂಡೋಗಳ ತಂಡದ ಕಾವಲು
 • ಐಬಿ ಮತ್ತು ರಾ ಅಧಿಕಾರಿಗಳು ಅಯೋಧ್ಯೆಯಲ್ಲಿ ಮೊಕ್ಕಾಂ
 • ಸಿಆರ್‌ಪಿಎಫ್‌ನ 6 ತುಕಡಿ, ಪಿಎಸಿಯ 3 ತುಕಡಿ ಭದ್ರತೆ
 • ಎಸ್‌ಎಸ್‌ಎಫ್ & ಎಟಿಎಸ್‌ನ 9 ತುಕಡಿಯ ಕಣ್ಗಾವಲು
 • ಎಸ್‌ಟಿಎಫ್‌ನ ಒಂದು ತುಕಡಿ ಭದ್ರತೆಗಾಗಿ ನಿಯೋಜನೆ
 • 300 ಪೊಲೀಸರು, 47 ಅಗ್ನಿಶಾಮಕ ದಳದ ಸಿಬ್ಬಂದಿಗಳು
 • 40 ವಾಯರ್​​ಲೆಸ್​​​ ಸಿಬ್ಬಂದಿ, 37 ಸ್ಥಳೀಯ ಗುಪ್ತಚರ ಸಿಬ್ಬಂದಿ
 • 2 ಬಾಂಬ್ ಪತ್ತೆ ದಳ ಮತ್ತು 2 ವಿಧ್ವಂಸಕ ದಳದ ತಂಡಗಳು

ಮೋದಿ ಸೇರಿ ದೇಶದ ದಿಗ್ಗಜರಿಗೆ ಅಭೂತಪೂರ್ವ ರಕ್ಷಣೆ

ಇನ್ನು, ಪ್ರಧಾನಿ ಮೋದಿ ಅವರ ಭದ್ರತಾ ವಲಯದಲ್ಲಿ ಸಾವಿರಾರು ಯೋಧರನ್ನ ನಿಯೋಜನೆ ಆಗಿದೆ. 3 ಡಿಐಜಿ, 17 ಎಸ್ಪಿ, 40 ಎಎಸ್ಪಿ, 82 ಡಿಎಸ್ಪಿ, 90 ಇನ್ಸ್‌ಪೆಕ್ಟರ್‌ಗಳ ಜೊತೆಗೆ 1000ಕ್ಕೂ ಹೆಚ್ಚು ಕಾನ್‌ಸ್ಟೆಬಲ್‌ಗಳು ಭದ್ರತೆ ನೀಡ್ತಿದ್ದಾರೆ. ಇದಷ್ಟೇ ಅಲ್ಲ, ನಗರದಲ್ಲಿ ಹೈಟೆಕ್​​ ಭದ್ರತೆಗೆ ಒತ್ತು ನೀಡಿರುವ ಯೋಗಿ ಸರ್ಕಾರ, ಬ್ಲ್ಯಾಕ್‌ಕ್ಯಾಟ್ ಕಮಾಂಡೋಗಳು, ಶಸ್ತ್ರಸಜ್ಜಿತ ವಾಹನಗಳನ್ನ ಕಾವಲಿಗೆ ನಿಲ್ಲಿಸಿದೆ. ಅಲ್ಲದೆ ನಗರದಾದ್ಯಂತ ಆ್ಯಂಟಿ ಡ್ರೋನ್​​ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಜೊತೆಗೆ ಎಐ ಸುಸಜ್ಜಿತ ಕಮಾಂಡ್ ಕಂಟ್ರೋಲ್ ಸಿಸ್ಟಮ್ ಬಳಕೆ ಆಗ್ತಿದೆ.

ಅಯೋಧ್ಯೆಯಲ್ಲಿ ಇಂದು ನಾಳೆ, ಬಸ್​-ರೈಲುಗಳ ಸ್ಟಾಪ್​​ ಇಲ್ಲ

ಇನ್ನು, ಸಂಚಾರ ದಟ್ಟಣೆ ನಿಯಂತ್ರಣಕ್ಕೂ ಕ್ರಮಕೈಗೊಳ್ಳಲಾಗಿದ್ದು, ಇವತ್ತು ಮತ್ತು ನಾಳೆ ಅಯೋಧ್ಯೆಯಲ್ಲಿ ಬಸ್​, ರೈಲುಗಳ ನಿಲುಗಡೆ ಹೊಂದದಂತೆ ಸೂಚನೆ ನೀಡಲಾಗಿದೆ. ಇತ್ತ, ರಾಮನ ಜನ್ಮಭೂಮಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ನೇರಪ್ರಸಾರ ವೀಕ್ಷಣೆಗೆ ಹಿಂದೂ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ. ದೇಶದ ಲಕ್ಷಾಂತರ ದೇಗುಲಗಳು, ಸಮುದಾಯ ಭವನಗಳಲ್ಲಿ ಎಲ್​​ಇಡಿ ಪರದೆಗಳನ್ನ ಅಳವಡಿಸಲಾಗ್ತಿದೆ. ಸಿನಿಮಾ ಥಿಯೇಟರ್​​​ಗಳಲ್ಲೂ ಅದ್ಭುತ ಕ್ಷಣದ ಅನುಭೂತಿಗೆ ವ್ಯವಸ್ಥೆ ಆಗಿದೆ.

ದೇಶದ ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮ ರಾಮೋತ್ಸವಕ್ಕೆ ದೇಶದ ಗಣ್ಯಾತಿ ಗಣ್ಯರೆಲ್ಲ ಭಾಗಿ ಆಗ್ತಿದ್ದಾರೆ. ಹೀಗಾಗಿ ರಾಮನ ನಗರವಾದ ಅಯೋಧ್ಯೆ ಅಭೇದ್ಯ ಕೋಟೆಯಾಗಿ ಪರಿವರ್ತನೆ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

13 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, 10 ಸಾವಿರ ಸಿಸಿಟಿವಿ.. ರಾಮನೂರಿನ ರಕ್ಷಾ ಕವಚ ಹೇಗಿದೆ?

https://newsfirstlive.com/wp-content/uploads/2024/01/RAM_TEMPLE_1-2.jpg

Load More