newsfirstkannada.com

ಅಮೆರಿಕಾದ 48 ರಾಜ್ಯಗಳಲ್ಲಿ ರಾಮ ಮಂದಿರ ರಥಯಾತ್ರೆ; ಏನಿದರ ವಿಶೇಷತೆ?

Share :

Published March 23, 2024 at 6:17am

  2 ತಿಂಗಳು ವಿಶ್ವ ಹಿಂದೂ ಪರಿಷತ್ ಆಫ್ ಅಮೆರಿಕಾ ವತಿಯಿಂದ ಆಯೋಜನೆ

  ಜನವರಿ 22ರಂದು ರಾಮಮಂದಿರದಲ್ಲಿ ನಡೆದ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ

  ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಈ ಯಾತ್ರೆ ಆರಂಭ

ಚಿಕಾಗೋ: ಜನವರಿ 22ರಂದು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಡೆದಿತ್ತು. ಪ್ರಾಣ ಪ್ರತಿಷ್ಠಾಪನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಅಮೆರಿಕಾದ 48 ರಾಜ್ಯಗಳಲ್ಲಿ ರಾಮಮಂದಿರ ರಥ ಯಾತ್ರೆಯನ್ನು ಆರಂಭಿಸುತ್ತಿವೆ. ಮಾರ್ಚ್ 25ಕ್ಕೆ ಚಿಕಾಗೋದಿಂದ ರಾಮಮಂದಿರ ರಥ ಯಾತ್ರೆ ಹೊರಡಲಿದೆ.

ಇದನ್ನು ಓದಿ: ಮದುವೆ ನಿಶ್ಚಯವಾಗಿದ್ದ ನರ್ಸ್ ಮೇಲೆ ಬಿದ್ದ ಕೇಬಲ್ ವೈರ್; ಸ್ಥಳದಲ್ಲೇ ಮಹಿಳೆ ದಾರುಣ ಸಾವು!

ರಾಮಮಂದಿರ ರಥವನ್ನು ವ್ಯಾನ್‌ನಲ್ಲಿ ನಿರ್ಮಿಸಲಾಗುವುದು. ಇದರ ಜೊತೆಗೆ 8,000 ಮೈಲುಗಳಷ್ಟು ದೂರದಲ್ಲಿ ರಾಮ, ಸೀತಾದೇವಿ ಮತ್ತು ಇತರರ ವಿಗ್ರಹಗಳನ್ನು ಯುಎಸ್‌ನ 851 ದೇವಾಲಯಗಳಿಗೆ ಸಾಗಿಸಲಾಗುತ್ತದೆ. ಕೆನಡಾದ ವಿಶ್ವ ಹಿಂದೂ ಪರಿಷತ್‌ನಿಂದ ಕೆನಡಾದಲ್ಲಿ ಪ್ರತ್ಯೇಕ ಯಾತ್ರೆಯನ್ನು ಯೋಜಿಸಲಾಗಿದೆ. ಇದು ದೇಶದ 150 ದೇವಾಲಯಗಳನ್ನು ಒಳಗೊಂಡಿದೆ. ಮುಂದಿನ ಎರಡು ತಿಂಗಳು ಎಂದರೆ 60 ದಿನಗಳಲ್ಲಿ ವಿಶ್ವ ಹಿಂದೂ ಪರಿಷತ್ ಆಫ್ ಅಮೆರಿಕಾ (ವಿಎಚ್‌ಪಿಎ) ಆಯೋಜಿಸಿರುವ ಯಾತ್ರೆಯನ್ನು ಟೊಯೊಟಾ ಸಿಯೆನ್ನಾ ವ್ಯಾನ್ ಮೇಲೆ ನಿರ್ಮಿಸಲಾಗುವುದು ಮತ್ತು ಭಗವಾನ್ ರಾಮ, ಸೀತಾ ದೇವಿ, ಲಕ್ಷ್ಮಣ ಮತ್ತು ಹನುಮಾನ್ ಪ್ರತಿಮೆಗಳನ್ನು ಹೊತ್ತೊಯ್ಯಲಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಅಮೆರಿಕ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಯಾತ್ರೆಯ ಸಂಘಟಕರಾದ ಅಮಿತಾಬ್ ಮಿತ್ತಲ್ ತಿಳಿಸಿದ್ದಾರೆ.

ಇನ್ನೂ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಈ ಯಾತ್ರೆಯನ್ನು ಆಯೋಜಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಯಾತ್ರೆ ಅಮೆರಿಕದ ಹಿಂದೂಗಳಿಂದ ನಡೆಯುತ್ತಿದೆ ಎಂದು ಹಿಂದೂ ಮಂದಿರ ಅಭಿವೃದ್ಧಿ ಸಮಿತಿ (HMEC) ಸಂಯೋಜಕಿ ತೇಜಲ್ ಶಾ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕಾದ 48 ರಾಜ್ಯಗಳಲ್ಲಿ ರಾಮ ಮಂದಿರ ರಥಯಾತ್ರೆ; ಏನಿದರ ವಿಶೇಷತೆ?

https://newsfirstlive.com/wp-content/uploads/2024/03/us-rama.jpg

Load More