newsfirstkannada.com

ಇಂದು ರಾಮನವಮಿ ಸಂಭ್ರಮ.. ಅಯೋಧ್ಯೆಯ ಬಾಲರಾಮನ ಸ್ಪರ್ಶಿಸಲಿವೆ ಸೂರ್ಯನ ಹೊಂಗಿರಣಗಳು, ಹೇಗೆ?

Share :

Published April 17, 2024 at 7:08am

    ಮರ್ಯಾದಾ ಪುರುಷೋತ್ತಮನ ಜನ್ಮದಿನ, ನಾಡಿನಾದ್ಯಂತ ಸಂಭ್ರಮ

    ವರ್ಷದಲ್ಲಿ ಎರಡು ಬಾರೊ ಶ್ರೀರಾಮ ನವಮಿ ಬಂದಿವೆ, ಯಾವ್ಯಾವಾಗ?

    ರಾಮಮಂದಿರದಲ್ಲಿ ಗರ್ಭಗುಡಿಯ ಬಾಲರಾಮನಿಗೆ ಸೂರ್ಯ ತಿಲಕ..!

ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿರೋ ರಾಮಲಲ್ಲಾನ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ಬಾಲರಾಮನ ದರ್ಶನ ಪಡೆದು ಭಕ್ತಿಯಲ್ಲಿ ತಲ್ಲೀನರಾಗ್ತಿದ್ದಾರೆ. ಇದೇ ಹೊತ್ತಲ್ಲಿ ಇವತ್ತು ರಾಮನವಮಿ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು ಸೂರ್ಯವಂಶಿಯಾದ ಬಾಲ ರಾಮನನ್ನು ಸೂರ್ಯರಶ್ಮಿ ಸ್ಪರ್ಶಿಸಲಿದೆ.

ಇಂದು ರಾಮನವಮಿ.. ಮರ್ಯಾದಾ ಪುರುಷೋತ್ತಮನ ಜನ್ಮದಿನ.. ವಿಶೇಷ ಏನಂದ್ರೆ ಒಂದೇ ವರ್ಷದಲ್ಲಿ ಎರಡು ಶ್ರೀರಾಮ ನವಮಿ ಹಬ್ಬ ಬಂದಿದೆ.. ಒಂದು ಕಳೆದ ಜನವರಿ 22 ರಂದು.. ಮತ್ತೊಂದು ಇವತ್ತಿನ ರಾಮನವಮಿ.. ಜನವರಿ 22 ರಂದು ಭಕ್ತರ ಮೇಲೆ ಸದಾ ಕೃಪಾ ದೃಷ್ಟಿ ಬೀರುತ್ತಿರುವ ಆ ನಯನಗಳು.. ಹಸನ್ಮುಖಿಯಾಗಿ ನಿಂತಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಇದೀಗ ಮತ್ತದೇ ಘೋಷವಾಕ್ಯ ಇವತ್ತು ರಾಮನವಮಿಯಂದು ಮೊಳಗಲಿದೆ.

ರಾಮನವಮಿ ಸಂಭ್ರಮ.. ಅಯೋಧ್ಯೆ ಮಂದಿರದಲ್ಲಿ ವಿಸ್ಮಯ

ಈ ಬಾರಿ ರಾಮನವಮಿ ಅಯೋಧ್ಯೆಯ ಸನ್ನಿಧಿ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಗರ್ಭಗುಡಿಯಲ್ಲಿರೋ ಬಾಲರಾಮನ ಮೇಲೆ ಸೂರ್ಯನ ಬೆಳಕು ಬೀಳುವ ಕ್ಷಣಗಳನ್ನ ಕಣ್ತುಂಬಿಕೊಳ್ಳಲಿದ್ದಾರೆ. ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣ ಬೀಳುವುದಕ್ಕೆ ದೈವಿಕ ತಿಲಕ ಅಥವಾ ಸೂರ್ಯ ತಿಲಕ ಎಂದು ಕರೆಯಲಾಗುತ್ತೆ. ಇವತ್ತು ಇದೇ ಮೊದಲ ಬಾರಿಗೆ ಬಾಲರಾಮನಿಗೆ ಸೂರ್ಯ ತಿಲಕ ಇಡಲಿದ್ದಾನೆ.

ಬಾಲರಾಮನಿಗೆ ಸೂರ್ಯ ಅಭಿಷೇಕ

  • ಮಸೂರಗಳು ಮತ್ತು ಕನ್ನಡಿಗಳ ಅತ್ಯಾಧುನಿಕ ಕಾರ್ಯವಿಧಾನ
  • ಭಗವಾನ್ ರಾಮನ ಪ್ರತಿಮೆಯ ಹಣೆ ಮೇಲೆ ಸೂರ್ಯನ ಬೆಳಕು
  • 3 ರಿಂದ 5 ನಿಮಿಷಗಳ ಕಾಲ ಸೂರ್ಯನ ಕಿರಣಗಳು ಬೀಳುತ್ತವೆ
  • ಮಧ್ಯಾಹ್ನ 12.16ಕ್ಕೆ ವಿಗ್ರಹದ ಮೇಲೆ ಬೀಳಲಿರುವ ಸೂರ್ಯರಶ್ಮಿ
  • ಸೂರ್ಯನ ಪಥವನ್ನ ಪತ್ತೆಹಚ್ಚುವ ತತ್ವದ ಮೇಲೆ ಕಾರ್ಯನಿರ್ವಹಣೆ
  • 3ನೇ ಮಹಡಿಯಿಂದ ಬೆಳಕನ್ನ ವಿಗ್ರಹದ ಮೇಲೆ ಬೀಳುವಂತೆ ಜೋಡಣೆ

ಇದನ್ನೂ ಓದಿ: ಕರ್ನಾಟಕದಲ್ಲಿ ರಂಗೇರಿದ ಲೋಕಸಭಾ ಅಖಾಡ; ದಳಪತಿ ಕೋಟೆಗೆ ರಾಹುಲ್ ಗಾಂಧಿ​ ಎಂಟ್ರಿ

ಸೂರ್ಯನ ಕಿರಣಗಳು ರಾಮನ ವಿಗ್ರಹದ ಹಣೆಯ ಮೇಲೆ ಬೀಳುತ್ತಿದ್ದಂತೆ ಸೂರ್ಯ ತಿಲಕ ರಚನೆಯಾಗಲಿದೆ ಎಂದು ವಿಜ್ಞಾನಿಗಳು ಭರವಸೆ ನೀಡಿದ್ದಾರೆ. ಇನ್ನು ಇವತ್ತು ಪ್ರಧಾನಿ ಮೋದಿ ಕೂಡ ಅಯೋಧ್ಯೆಗೆ ಭೇಟಿ ನೀಡಿ ಬಾಲರಾಮನ ಸನ್ನಿಧಿಯಲ್ಲಿ ಸೂರ್ಯ ತಿಲಕದ ಮಹಾನ್ ದೃಶ್ಯವನ್ನ ಕಣ್ತುಂಬಿಕೊಳ್ಳಲಿದ್ದಾರೆ. ರಾಮನವಮಿ ಸಂಭ್ರಮದಲ್ಲಿ ಅಯೋಧ್ಯೆ ಮಂದಿರ ಮತ್ತೊಂದು ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿದ್ದು ಅಸಂಖ್ಯ ಭಕ್ತಗಣ ಕಾತುರದಿಂದ ಕಾಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ರಾಮನವಮಿ ಸಂಭ್ರಮ.. ಅಯೋಧ್ಯೆಯ ಬಾಲರಾಮನ ಸ್ಪರ್ಶಿಸಲಿವೆ ಸೂರ್ಯನ ಹೊಂಗಿರಣಗಳು, ಹೇಗೆ?

https://newsfirstlive.com/wp-content/uploads/2024/04/RAM.jpg

Load More