/newsfirstlive-kannada/media/post_attachments/wp-content/uploads/2025/04/RAM-NAVAMI.jpg)
ಇಂದು ಪವಿತ್ರ ರಾಮನವಮಿಯ ದಿನ. ರಾಮನವಮಿಯನ್ನು ದೇಶಾದ್ಯಂತ ವಿವಿಧ ರೀತಿಯಲ್ಲಿ ಸಂಭ್ರಮದೊಂದಿಗೆ ಆಚರಿಸುತ್ತಾರೆ. ಭಗವಾನ್ ರಾಮನನ್ನು ವಿಶೇಷ ರೀತಿಯಲ್ಲಿ ಪೂಜಿಸಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ದಿನವನ್ನು ವಿಶೇಷಗೊಳಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿಯೂ ಕೂಡ ದುರ್ಗಾಪೂಜಾ ಹಾಗೂ ರಾಮನವಮಿಯನ್ನು ಬಹಳಷ್ಟು ಸಂಭ್ರಮದಿಂದಲೇ ಆಚರಿಸುತ್ತಾರೆ. ಈ ವರ್ಷವೂ ಕೂಡ ಅದೇ ಸಂಭ್ರಮ ಸಡಗರ ಕಳೆಗಟ್ಟಲಿದೆ.
ಇದನ್ನೂ ಓದಿ:ಉಚಿತ ಸ್ಪಾ ಮತ್ತು *ಕ್ಸ್..! ಹೋಟೆಲ್ ಆಚೆ ರಾರಾಜಿಸಿದ ಡಿಸ್ಪ್ಲೇ ಬೋರ್ಡ್.. ಜನರು ಶಾಕ್!
ಈಗಾಗಲೇ ಪಶ್ಚಿಮ ಬಂಗಾಳದ ಬಿಜೆಪಿ ಒಟ್ಟು ಐವತ್ತು ಬೃಹತ್ Rallyಗಳನ್ನು ರಾಜ್ಯದಾದ್ಯಂತ ಕೈಗೊಳ್ಳಲು ತೀರ್ಮಾನಿಸಿದ್ದು. ಅದರಂತೆ ಪಶ್ಚಿಮ ಬಂಗಾಳದಲ್ಲಿ 50 ಱಲಿಗಳು ತಮ್ಮ ಸಂಭ್ರಮಾಚರಣೆಗೆ ಸಜ್ಜಾಗಿವೆ. ಬಿಜೆಪಿಯ ಈ ನಿರ್ಧಾರದ ಬೆನ್ನಲ್ಲೆ ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಭದ್ರತೆಯನ್ನು ದುಪ್ಪಟ್ಟು ಮಾಡಿದ್ದು, ಸಿಎಂ ಮಮತಾ ಬ್ಯಾನರ್ಜಿ ಜನರಲ್ಲಿ ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ. ಹಿಂದೂ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಯಾರೆಲ್ಲಾ ರಾಮನವಮಿಯಂದ ಮೆರವಣಿಗೆ ಹೊರಡಲು ಸಜ್ಜಾಗಿದ್ದಿರೋ ದಯವಿಟ್ಟು ಶಾಂತ ರೀತಿಯಿಂದ ಕಾರ್ಯಕ್ರಮ ನಡೆಯುವಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪತ್ನಿಯಿಂದ ಮಾನಸಿಕ ಕಿರುಕುಳ.. ವಿಡಿಯೋ ಮಾಡಿದ ಪತಿ ಕೊನೆಗೆ ಮಾಡಿಕೊಂಡಿದ್ದೇನು? ಬೆಚ್ಚಿ ಬೀಳಿಸುವ ಸ್ಟೋರಿ!
ಈಗಾಗಲೇ ಕೊಲ್ಕತ್ತಾದ ಪೊಲೀಸ್ ಕಮಿಷನರ್ ಕಮಿಷನರ್ ಮನೋಜ್ ವರ್ಮಾ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸೇರಿಕೊಂಡು ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.. 5 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹೌರಾ, ಸಿಲಿಗುರಿ, ಮಲ್ಡಾ, ಮುರ್ಶಿದಾಬಾದ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಕಾಯ್ದುಕೊಳ್ಳಲಲು ಪೊಲೀಸರು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.
ಪ್ರತಿ ಬಾರಿ ರಾಮನವಮಿ ಹಾಗೂ ದುರ್ಗಾಪೂಜೆಯ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಅತಿಹೆಚ್ಚು ಕೋಮುಗಲಭೆಗಳು ಉಂಟಾಗುತ್ತೆ ಈ ನಿಟ್ಟಿನಲ್ಲಿ ಈ ಬಾರಿ ಅ ರೀತಿಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪಶ್ಚಿಮ ಬಂಗಾಳದ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಜ್ಜಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ