newsfirstkannada.com

ಅಯೋಧ್ಯೆಯಲ್ಲಿ ರಾಮನ ದರ್ಶನ ಇನ್ನೆರಡು ದಿನ ಬಂದ್​​.. ಕಾರಣವೇನು..?

Share :

Published January 20, 2024 at 7:49pm

Update January 20, 2024 at 7:51pm

  ಅಯೋಧ್ಯೆಯಲ್ಲಿ ರಾಮೋತ್ಸವ.. ಮೇಳೈಸಿದೆ ಗತವೈಭವ

  2 ದಿನ ತಾತ್ಕಾಲಿಕ ಮಂದಿರದಲ್ಲಿ ರಾಮನ ದರ್ಶನ ಬಂದ್

  ರಾಮಲಲ್ಲಾ ಜೊತೆಯಲ್ಲೇ ಹಳೆ ರಾಮಮೂರ್ತಿ ದರ್ಶನ!

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಇನ್ನೆರಡೇ ದಿನ ಬಾಕಿ ಇದೆ.. ಇದುವರೆಗೆ ಭಕ್ತರಿಗೆ ದರ್ಶನ ನೀಡುತ್ತಿದ್ದ ಹಳೆಯ ರಾಮಮೂರ್ತಿಯ ದರ್ಶನ ಇನ್ನೆರಡು ದಿನ ಇರಲ್ಲ.. ಹೊಸ ಮಂದಿರದಲ್ಲೇ ಹಳೆಯ ಮೂರ್ತಿಯನ್ನು ಕೂಡ ಪ್ರತಿಷ್ಠಾಪಿಸಲಾಗುತ್ತೆ.. ಮತ್ತೊಂದೆಡೆ ಅಯೋಧ್ಯೆಗೆ ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರು ಆಗಮಿಸುತ್ತಿದ್ದು ಬಿಗಿಭದ್ರತೆ ವ್ಯವಸ್ಥೆ ಮಾಡಲಾಗಿದೆ.

ರಾಮಮಂದಿರದಲ್ಲಿ ಎರಡೆರಡು ರಾಮಮೂರ್ತಿ ದರ್ಶನ

ಹೊಸ ಮಂದಿರದಲ್ಲಿ ಎರಡೆರಡು ರಾಮಮೂರ್ತಿಗಳು ಭಕ್ತರಿಗೆ ದರ್ಶನ ನೀಡಲಿಕ್ಕಿವೆ.. ನಾಡಿದ್ದು ಸೋಮವಾರ ರಾಮಮಂದಿರದ ಗರ್ಭಗುಡಿಯಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ 51 ಇಂಚಿನ ರಾಮಲಲ್ಲಾ ಮೂರ್ತಿ ವಿರಾಜಮಾನನಾಗಲಿದ್ದಾನೆ.. ಹೀಗಾಗಿ ಇದುವರೆಗೆ ತಾತ್ಕಾಲಿಕ ಟೆಂಟ್​​ನಲ್ಲಿ ಪೂಜಿಸಲ್ಪಡುತ್ತಿದ್ದ ಹಳೆಯ ರಾಮಮೂರ್ತಿಯನ್ನೂ ಕೂಡ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಡಲಾಗುತ್ತೆ.. ಹೀಗಾಗಿ ಇಂದಿನಿಂದ ತಾತ್ಕಾಲಿಕ ಮಂದಿರದಲ್ಲಿ ರಾಮನ ದರ್ಶನ ಬಂದ್ ಮಾಡಲಾಗಿದೆ.. ಇನ್ನು 1949ರಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದ ಸುಮಾರು 6 ಇಂಚು ಎತ್ತರದ ಹಳೆಯ ರಾಮಮೂರ್ತಿ ಕೂಡ ಭಕ್ತರಿಗೆ ದರ್ಶನ ನೀಡಲಿದೆ… ಪ್ರಭು ರಾಮ, ಸೋದರ ಲಕ್ಷ್ಮಣ, ಭರತ್, ಶತ್ರುಘ್ನ ಹಾಗೂ ಭಗವಾನ್ ಹನುಮನ ಮೂರ್ತಿಯನ್ನು ಕೂಡ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತೆ.

ಗರ್ಭಗುಡಿ ರಹಸ್ಯ!

ಇನ್ನು ಅಯೋಧ್ಯೆ ರಾಮಮಂದಿರದಲ್ಲಿ ಹಳೆಯ ಹಾಗು ಹೊಸ ಮೂರ್ತಿ ಸೇರಿ ಎರಡು ರಾಮಮೂರ್ತಿಗಳಿವೆ, ಹೊಸ ಮೂರ್ತಿಗೆ ಅಚಲ ಮೂರ್ತಿ ಅಂತ ಕರೆಯಲಾಗುತ್ತೆ.. ಹಳೆಯ ಮೂರ್ತಿಗೆ ‘ಉತ್ಸವಮೂರ್ತಿ’ ಅಂತಾ ಹೆಸರಿಡಲಾಗುತ್ತೆ.. ರಾಮನಿಗೆ ಸಂಬಂಧಿಸಿದ ಮೆರವಣಿಗೆಯಲ್ಲಿ ಮಾತ್ರ ಉತ್ಸವಮೂರ್ತಿಯನ್ನು ಇರಿಸಲಾಗುತ್ತೆ.. ಇನ್ನು ಗರ್ಭಗುಡಿಯಲ್ಲಿ ಅಚಲಮೂರ್ತಿಯನ್ನ ಭಕ್ತರ ದರ್ಶನಕ್ಕೆ ಮೀಸಲಿಡಲಾಗುತ್ತೆ.. ಮಂದಿರಕ್ಕಾಗಿ ಹೊಸದೊಂದು ಉಪಕರಣ ಸಿದ್ಧಪಡಿಸಲಾಗಿದ್ದು ಇದನ್ನು ದೇಗುಲದ ಶಿಖರದಲ್ಲಿಡಲಿದ್ದಾರೆ ಎನ್ನಲಾಗಿದ್ದು ರಾಮನವಮಿಯಂದು ಸೂರ್ಯರಶ್ಮಿ ಮೂರ್ತಿಯ ಹಣೆಯ ಮೇಲೆ ಬೀಳಲಿದೆ ಎನ್ನಲಾಗಿದೆ.

ಇಡೀ ಅಯೋಧ್ಯೆ ನಗರದಲ್ಲಿ ಪೊಲೀಸರ ಸರ್ಪಗಾವಲು!

ಇನ್ನು ಅಯೋಧ್ಯೆಯಲ್ಲಿ ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರು, ಸಾಧು-ಸಂತರು ಸೇರಿ 8 ಸಾವಿರಕ್ಕೂ ಹೆಚ್ಚು ಗಣ್ಯರು ಆಗಮಿಸುತ್ತಿದ್ದಾರೆ.. ಈ ನಡುವೆ ರಾಮಮಂದಿರ ಉದ್ಘಾಟನೆಗೆ ಉಗ್ರರ ಕರಿನೆರಳು ಕೂಡ ಬಿದ್ದಿದೆ.. ಹೀಗಾಗಿ ಅಯೋಧ್ಯೆ ನಗರ ಏಳುಸುತ್ತಿನ ಕೋಟೆಯಂತಾಗಿ ಮಾರ್ಪಾಡಾಗಿದೆ.. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೇಂದ್ರ ಮೀಸಲು ಪಡೆ ಜೊತೆಗೆ ಉತ್ತರ ಪ್ರದೇಶ ಸರ್ಕಾರ 11 ಸಾವಿರ ಪೊಲೀಸರನ್ನು ನಿಯೋಜಿಸಿದೆ.. ಈ ಮೂಲಕ ಬ್ಲ್ಯಾಕ್ ಕಮಾಂಡೋ ಅಯೋಧ್ಯೆಯಾದ್ಯಂತ ಹದ್ದಿನ ಕಣ್ಣಿರಿಸಿದೆ.. ಜೊತೆಗೆ ಡ್ರೋಣ್​ಗಳ ಕಣ್ಗಾವಲು, ಜಿಲ್ಲೆಯಲ್ಲಿ 10 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ.

ಒಟ್ಟಿನಲ್ಲಿ ಅಯೋಧ್ಯೆಯಲ್ಲಿ ಗತವೈಭವ ಝೇಂಕರಿಸಿದೆ.. ರಾಮಲಲ್ಲಾನನ್ನ ಕಣ್ತುಂಬಿಕೊಳ್ಳೋಕೆ ಲಕ್ಷಾಂತರ ಭಕ್ತರು ತುದಿಗಾಲಲ್ಲಿ ಕಾಯ್ತಿದ್ದಾರೆ. ದಶಕಗಳಿಂದ ಕೋಟಿ ಕೋಟಿ ಭಾರತೀಯರು ಕಂಡಿದ್ದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯಲ್ಲಿ ರಾಮನ ದರ್ಶನ ಇನ್ನೆರಡು ದಿನ ಬಂದ್​​.. ಕಾರಣವೇನು..?

https://newsfirstlive.com/wp-content/uploads/2024/01/Ayodhya-Rama-Mandira-2.jpg

Load More