/newsfirstlive-kannada/media/post_attachments/wp-content/uploads/2024/03/Ayodhya-holi-Habba.jpg)
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸರ್ಕಾರಕ್ಕೆ ಒಟ್ಟು 400 ಕೋಟಿ ರೂಪಾಯಿ ತೆರಿಗೆಯನ್ನು ಕಳೆದ ಐದು ವರ್ಷಗಳಲ್ಲಿ ಕಟ್ಟಿದೆ ಎಂದು ವರದಿಗಳು ಆಗಿವೆ. ಧಾರ್ಮಿಕ ಪ್ರವಾಸಿ ತಾಣವಾಗಿ ದೊಡ್ಡದಾಗಿ ಸುದ್ದಿಯಾಗುತ್ತಿರುವ ಅಯೋಧ್ಯಾ ಶ್ರೀರಾಮಮಂದಿರಕ್ಕೆ ಈಗ ಭಕ್ತಕೋಟಿಯೇ ಹರಿದು ಬರುತ್ತಿದೆ. ಟ್ರಸ್ಟ್ನ ಸೆಕ್ರೆಟರಿ ಚಂಪತ್ ರೈ ಅಯೋಧ್ಯ ಶ್ರೀರಾಮ ಮಂದಿರ ಧಾರ್ಮಿಕ ಪ್ರವಾಸಿ ತಾಣದ ಹಬ್ ಆಗಿ ಪರಿವರ್ತನೆಯಾಗುತ್ತಿದೆ ಎಂದು ಹೇಳಿದ್ದಾರೆ..
ಅವರು ಹೇಳುವ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಅಂದ್ರೆ ಫೆಬ್ರವರಿ 5, 2020ರಿಂದ ಫೆಬ್ರವರಿ 5,2025 ರ ಒಟ್ಟು ಐದು ವರ್ಷಗಳ ನಡುವೆ ಸುಮಾರು 270 ಕೋಟಿ ಜಿಎಸ್ಟಿ ಹಾಗೂ ಉಳಿದ 130 ಕೋಟಿ ರೂಪಾಯಿಗಳನ್ನು ವಿವಿಧ ಟ್ಯಾಕ್ಸ್ ವಿಭಾಗಗಳಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಈ ಜಾಗವನ್ನು ಗಂಗಾಮಾತೆಯ ಮಾವನ ಮನೆ ಎನ್ನುತ್ತಾರೆ! ಹಾಗೆ ಕರೆಯಲು ಕಾರಣವೇನು ಗೊತ್ತಾ?
ಅಯೋಧ್ಯೆಗೆ ನಿತ್ಯ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಧಾರ್ಮಿಕ ಪ್ರವಾಸಿತಾಣದ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿದೆ. ಅದು ಮಾತ್ರವಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶಗಳನ್ನು ಕೂಡ ಸೃಷ್ಟಿ ಮಾಡಿದೆ. ಮಹಾಕುಂಭದ ಸಮಯದಲ್ಲಿ ಸುಮಾರು 1.26 ಕೋಟಿ ಭಕ್ತಾದಿಗಳು ಶ್ರೀರಾಮ ಮಂದಿರಕ್ಕೆ ಭೇಟಿ ಕೊಟ್ಟಿದ್ದಾರೆ ಎಂದು ಚಂಪತ್ ರೈ ಹೇಳಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಒಟ್ಟು 16 ಕೋಟಿ ಭಕ್ತರು ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ ಎಂದು ಶ್ರೀರಾಮಜನ್ಮಭೂಇ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ