newsfirstkannada.com

16 ಕಲ್ಯಾಣ ಗುಣಗಳು ಇರುವ ಏಕೈಕ ಚಕ್ರವರ್ತಿ; ‘ಮರ್ಯಾದಾ ಪುರುಷೋತ್ತಮ’ ಅನ್ನೋದೇಕೆ ಗೊತ್ತಾ?

Share :

Published January 17, 2024 at 9:08pm

  ರಾವಣನ ಸಂಹಾರದ ಬಳಿಕ ರಾಮನಿಗಿತ್ತು ಆ ದೊಡ್ಡ ಅವಕಾಶ

  ಶತ್ರುವನ್ನೂ ಕ್ಷಮಿಸಿದ್ದೇಗೆ ಶ್ರೀರಾಮ? ಲಕ್ಷ್ಮಣ ಮರುಕಪಟ್ಟಿದ್ದೇಕೆ?

  ಪುರಾಣಗಳಲ್ಲಿ ‘ಮರ್ಯಾದಾ ಪುರುಷೋತ್ತಮ’ ಅರ್ಥವೇನು?

ವಾಲ್ಮೀಕಿ ಅಂದಾಕ್ಷಣ, ಭುವನಮೋಹನ ಕಾವ್ಯ, ಆದರ್ಶ ಪಾರಾಯಣವನ್ನ ಉಣಿಸಿ, ಧರ್ಮವೇ ಜಯ ಅನ್ನೋ ದಿವ್ಯಮಂತ್ರವನ್ನು ಧರಿಸಿದ್ದ ರಾಮಕಾವ್ಯವೇ ನೆನಪಾಗುತ್ತೆ. ಇಂತಹ ಅಸಾಮಾನ್ಯ ಕಾವ್ಯ ಹುಟ್ಟಬೇಕಂದ್ರೆ, ಅದೆಂಥಾ ಚರ್ಚೆ ನಡೆದಿರಬಹುದು ಅನ್ನೋ ಒಂದು ಸಣ್ಣ ಕುತೂಹಲ ಯಾರಿಗಾದ್ರೂ ಬಂದೇ ಬರುತ್ತಲ್ವಾ? ಶ್ರೀರಾಮನ ಮಹಾಕಾವ್ಯ ರಾಮಾಯಣಕ್ಕೆ ಶ್ರೀಕಾರವೇ ಆ ಒಂದು ಅದ್ಭುತ ಸನ್ನಿವೇಶ.

ಈಗೊಮ್ಮೆ ತಮಸಾ ನದಿ ದಂಡೆದಲ್ಲಿ ಒಂದು ಎಲೆಮನೆಯಲ್ಲಿ, ನಾರದ ಮುನಿಗಳು, ವಾಲ್ಮೀಕಿ ಮಹರ್ಷಿಗಳು ಒಂದು ಯಕ್ಷ ವಿಷ್ಯವನ್ನ ಚರ್ಚೆ ಮಾಡ್ತಾರೆ. ವಾಲ್ಮೀಕಿ ಮಹರ್ಷಿ ಕೇಳಿದ ಆ ಒಂದು ಪ್ರಶ್ನೆಗೆ ನಾರದಮುನಿಗೆ ತಲೆ ಬಿಸಿ ಆಗ್ಬಿಡುತ್ತೆ. ಆದ್ರೆ, ಅದಕ್ಕೆ ಪರಿಹಾರ ನಾರದನಲ್ಲೇ ಇತ್ತು. ಹಾಗಾದ್ರೆ ವಾಲ್ಮೀಕಿ ಮಹರ್ಷಿ, ಮೂರು ಲೋಕ ಸುತ್ತುವ ನಾರದನಿಗೆ ತಲೆ ಕೆಡಿಸುವಂತೆ ಕೇಳಿದ, ಆ ಪ್ರಶ್ನೆ ಎಂಥದ್ದು?

ವಾಲ್ಮೀಕಿ ಮಹರ್ಷಿಗಳು ನಾರದರಲ್ಲಿ ಪ್ರಶ್ನೆ ಮಾಡುತ್ತಾರೆ. ಹತ್ತರಿಂದ ಇಪ್ಪತ್ತು ಗುಣಗಳ ಪಟ್ಟಿ ಮಾಡಿ ಇಂತಹ ಗುಣಗಳು ಇರೋರು ಇದ್ದಾರಾ ಎಂದು ಕೇಳುತ್ತಾರೆ. ಅದಕ್ಕೆ ಹತ್ತರಿಂದ ಇಪ್ಪತ್ತು ಇನ್ನೊಂದು ಸೇರಿಸಿ ಇಂತಹ ಲೋಕದಲ್ಲಿ ಇದ್ದಾರೆ ಎನ್ನುತ್ತಾರೆ. ಅದುವೇ ಶ್ರೀರಾಮ ಚಂದ್ರ ಸಕಲ ಸದ್ಗುಣ ಗಣಿ ಎನ್ನುತ್ತಾರೆ.

ವಿಶ್ವಪ್ರಸನ್ನ ತೀರ್ಥ ಶ್ರೀಗಳು,ಪೇಜಾವರ ಮಠ

ಮೊದಲು ಆ ದೀರ್ಘ ಪ್ರಶ್ನೆಗೆ ಸುಸ್ತಾಗಿದ್ದ ನಾರದ, ಎಲ್ಲಿಂದ ತರ್ಬೇಕು ಸ್ವಾಮಿ ಈ ಹದಿನಾರು ಗುಣಗಳ ಗಣಿಯನ್ನ ಅಂತಾ ಅಂದುಕೊಳ್ತಾನೆ? ತಲೆಯಲ್ಲಿ ಏನೇನೋ ಕಲ್ಪನೆಗಳು, ಯಾಱರದ್ದೋ ಮುಖಚಿತ್ರಗಳು ಬರ್ತಿವೆ. ಆದ್ರೆ, ಕೊನೆಯದಾಗಿ ಗಟ್ಟಿಯಾಗಿ ಒಂದು ಮುಖ ಮಾತ್ರ.. ಅದು ಬೇರಾರೂ ಅಲ್ಲ.. ತ್ರೇತಾಯುಗದಲ್ಲಿ ಹುಟ್ಟುವ ಶ್ರೀರಾಮನೇ ಈ ಎಲ್ಲಾ ಗುಣಗಳನ್ನ ಹೊಂದಿರುವ ಏಕೈಕ ಮಹಾತ್ಮ ಅಂತಾ ನಾರದರು ಹೇಳಿದ್ರಂತೆ. ಅಲ್ಲಿಂದಲೇ ಶುರುವಾಗಿತ್ತು ಮರ್ಯಾದ ರಾಮನ ಅಸಲೀ ಕಥನ.

ರಾತ್ರಿ ಪಟ್ಟಾಭಿಷೇಕಕ್ಕೆ ಸಿದ್ಧತೆ.. ಬೆಳಗ್ಗೆ ವನವಾಸಕ್ಕೆ ಆಜ್ಞೆ

ರಾಜ್ಯ ಬಿಟ್ಟು ಅರಣ್ಯಕ್ಕೆ ಹೊರಟ ಪಿತೃವಾಕ್ಯ ಪರಿಪಾಲಕ

ದಶವತಾರಗಳಲ್ಲಿ ಏಳನೇ ಅವತಾರದ ಮಹಾವಿಶ್ವರೂಪವೇ ರಾಮ ಅನ್ನೋದು ಎಲ್ಲರಲ್ಲೂ ಅಚ್ಚಾಗಿರೋ ವಿಷ್ಯ. ರಾಮಯಾಣದ ಕಥೆ, ತಿರುವುಗಳ ಬಗ್ಗೆ ನಿದ್ದೆಯಲ್ಲಿ ಕೇಳಿದ್ರೂ ಒಂದಷ್ಟು ವಿಷ್ಯಗಳನ್ನ ಎಲ್ಲರೂ ಹೇಳಿಬಿಡ್ತಾರೆ. ಆದ್ರೆ, ಆ ಪುರಾಣದಲ್ಲಿ ರಾಮನ ಬಗ್ಗೆ ಸಾರಿದ ಪ್ರತೀ ಅಕ್ಷರ, ಮರ್ಯಾದ ರಾಮ ಒಬ್ಬ ಮಹಾನ್​​​ ಪುರುಷೋತ್ತಮ ಅನ್ನೋದನ್ನ ಗಟ್ಟಿಯಾಗಿ ಹೇಳಿದೆ ಅನ್ನೋದು ಶಾಸ್ತ್ರಜ್ಞರ ಮಾತು. ರಾಮನ ಜನಕ ದಶರಥ ಮಹಾರಾಜ ರಾತ್ರಿ ರಾಮನಿಗೆ ರಾಜ್ಯವನ್ನ ಕೊಡ್ತಿದೀನಿ. ಬೆಳಗ್ಗೆ ನಿನಗೆ ಪಟ್ಟಾಭಿಷೇಕ ಅಂತೇಳಿದ್ದ. ರಾಮ ಬೆಳಗೆದ್ದು ಉಪವಾಸದಲ್ಲೇ ಇದ್ದು, ತಂದೆಯ ಬಳಿ ಹೋದಾಗ, ಬುಡಸಮೇತ ಬಿದ್ದ ಹೆಮ್ಮರದಂತೆ ದಶರಥ ಕುಸಿದು ಬಿದಿದ್ದ. ಏನಾಯ್ತು ಅಂತ ರಾಮ ಕೇಳಿದ್ರೆ ಕೈಕೆಯಿಂದ ಉತ್ತರ ಬಂತು, ನೀನು ಇದೇ ಮುಹೂರ್ತಕ್ಕೆ 14 ವರ್ಷ ವನವಾಸಕ್ಕೆ ಹೋಗಬೇಕು. ಇದೇ ನಿಮ್ಮ ತಂದೆ ನನಗೆ ಕೊಟ್ಟ ಮಾತು ಅಂತೇಳಿದ್ಳು. ಆಗ ರಾಮ.. ಅಮ್ಮಾ.. ನಾನು ತಂದೆ ಹೇಳಿದಂತೆ ಕೇಳುವ ಮಗ ಅಂತೇಳಿ, ತಂದೆಯನ್ನ ಒಂದು ಮಾತೂ ಪ್ರಶ್ನೆ ಮಾಡದೇ, ತಂದೆಯ ಮಾತೇ ವೇದವಾಕ್ಯ ಅಂದು ಕಾಡಿಗೆ ಹೊರಟು ನಿಂತ.. ಆಗ ಎರಡನೇ ಭಾರೀ ಜಾನಕಿ ವಲ್ಲಭ ಜನರ ಮನ ಗೆದ್ದಿದ್ದ.

ದಶರಥ ಮಹಾರಾಜ  ಹೇಳುತ್ತಾನೆ.  ಪ್ರಜೆಗಳಿಂದ ವೋಟ್​ ಮಾಡಿಸಿ ಎಂದರು. ಆಗ ಪ್ರಜೆಗಳು ಆಗ ರಾಮನಿಗೆ ಪಟ್ಟಾಭಿಷೇಕ ಮಾಡಿ ಎಂದರು.

ಡಾ. ಶಲ್ವಪಿಳ್ಳೈ ಅಯ್ಯಂಗಾರ್​​, ಧರ್ಮಶಾಸ್ತ್ರಜ್ಞರು

ಇಂಥಾ ವಿನಮ್ರ ವ್ಯಕ್ತಿತ್ವವನ್ನ ಪುರುಷೋತ್ತಮ ಅನ್ನದೇ ಇನ್ನೇನು? ತನ್ನ ಮಗನಿಗಾಗಿ ರಾಜ್ಯ ಬೇಕೆಂದ ಕೈಕೆ ಮೇಲಾಗಲಿ, ತನಗೆ ಕೇಳದೇ ಮಾತು ಕೊಟ್ಟ ತಂದೆ ದಶರಥನ ಮೇಲಾಗಲೀ ಆ ಕ್ಷಣಕ್ಕೆ ರಾಮನಿಗೆ ಕೋಪವೂ ಇಲ್ಲ, ದ್ವೇಷವೂ ಇಲ್ಲ. ಆ ಇಬ್ಬರ ಆಶೀರ್ವಾದ ಪಡೆದೇ ಕಾಡಿಗೆ ಕಾಲಿಡಲು ಮುಂದಾದ. ಆಗ ತಂದೆ ಸಕಲ ಸೌಕರ್ಯಗಳನ್ನ ಕೊಟ್ಟರೂ ಅವುಗಳನ್ನ ತ್ಯಜಿಸಿ, ಸಾಮಾನ್ಯನಂತೆ ಉಟ್ಟ ಬಟ್ಟೆಯಲ್ಲೇ ಹೊರಟು ನಿಂತ. ಇದೇ ರಾಮ ಪುರುಷೋತ್ತಮನಾಗೋದಕ್ಕೆ ನಾಂದಿಯಾಗಿತ್ತು. ಇದೇ ಸಮಯದಲ್ಲಿ ಮತ್ತೊಂದು ಸ್ವಾರಸ್ಯಕರ ಸನ್ನಿವೇಶವೊಂದು ನಡೆಯುತ್ತೆ ಅದನ್ನ ಹೇಳೋ ಮುನ್ನ, ಮರ್ಯಾದಾ ಪುರುಷೋತ್ತಮ ಅಂದ್ರೆ ಏನರ್ಥ ಅಂತ ತಿಳಿದುಕೊಳ್ಳಲೇ ಬೇಕು.

ರಾಮನಿಗೆ ತಕ್ಕ ಬಿರುದು ಈ ‘ಮರ್ಯಾದಾ ಪುರುಷೋತ್ತಮ’!

ಮರ್ಯಾದಾ ಪುರುಷೋತ್ತಮ ಅನ್ನೋದು ಸಂಸ್ಕೃತದ ಪದಗುಚ್ಛದಿಂದ ಬಂದಿರೋದು. ಮುನಿವರ್ಯರ ಪ್ರಕಾರ, ಮರ್ಯಾದಾ ಅಂದ್ರೆ ‘ಮಿತಿ’ ಅನ್ನೋ ಮಾತಿದೆ. ಇನ್ನು, ಪುರುಷೋತ್ತಮ ಅಂದ್ರೆ ‘ಶ್ರೇಷ್ಠ ವ್ಯಕ್ತಿಗಿಂತ ದೊಡ್ಡವನು’ ಅಂತಾ ಹೇಳಲಾಗುತ್ತೆ. ಇಲ್ಲಿ ಉತ್ತಮ ಪದದಲ್ಲಿ ‘ಉತ್’ ಅಂದ್ರೆ ಮೇಲೆ ಅಂತಾ ಅರ್ಥ, ಇದನ್ನ ‘ತಮ’ ಅಂತಲೂ ಹೇಳಲಾಗಿದೆ. ಇಲ್ಲಿ ಒಟ್ಟಾಗಿ ಹೇಳೋದೆನಂದ್ರೆ ಮಿತಿಯನ್ನ ಮೀರಿ.. ರಾಮನು ಎಲ್ಲಾ ತಾಮಸಿಕ ಗುಣಗಳಿಗಿಂತ ಮೇಲಿದ್ದಾನೆ ಅನ್ನೋದಾಗಿದೆ. ಹಾಗಾಗಿ ಅವನು ‘ಪುರುಷೋತ್ತಮ’ ಶ್ರೇಷ್ಠ ಅಥವಾ ಉತ್ತಮ ಪುರುಷರಿಗಿಂತ ಶ್ರೇಷ್ಠ ಅಂತಾನೇ ಹೇಳಬಹುದು. ರಾಮನಿದ್ದರೆ ಅದು ರಾಮರಾಜ್ಯವಾಗುತ್ತೆ. ಇಲ್ಲದಿದ್ದರೆ ನಾವ್ಯಾರೂ ಇಲ್ಲಿರಲ್ಲ ಅಂತಾ ಸಿಡಿದು ನಿಂತಿದ್ದ ಆ ಪ್ರಜೆಗಳನ್ನ ನೆನಪಿಸಿಕೊಂಡ್ರೆ, ರಾಮನ ಗುಣದ ಬಗ್ಗೆ ಅರಿವು ಮೂಡುತ್ತೆ. ಅವ್ರನ್ನ ತಡೆಯಲಾಗದೇ ರಾಮ ಎಲ್ಲರೂ ನಿದ್ರಿಸುವ ಸಮಯಕ್ಕೆ ಕಾಡಿಗೆ ಹೊರಟು ನಿಂತ. ಆಗ ಸೀತಾ ಲಕ್ಷ್ಮಣರನ್ನ ಕಾಡಿಗೆ ಬರೋದು ಬೇಡ ಅಂದ, ಆ ಸಮಯದಲ್ಲಿ ಲಕ್ಷ್ಮಣ ವಿನಯದಲ್ಲೇ ಅವನಿಂದೆ ಬರೋದಾಗಿ ಕೇಳಿಕೊಂಡ.

ಆದ್ರೆ, ಆ ಸಮಯದಲ್ಲಿ ಮತ್ತೊಂದು ಸನ್ನಿವೇಶ ನಡೆದಿತ್ತು. ರಾಮ ಸೀತೆಯನ್ನ ಕಾಡಿಗೆ ಬರೋದನ್ನ ತಿರಸ್ಕರಿಸಿದಾಗ, ಆಕೆಗೆ ಕೋಪ ಬಂದಿತ್ತು. ಅನ್ನಬಾರದ ಮಾತೊಂದನ್ನ ಅಂದುಬಿಟ್ಟಿದ್ದಳು. ಮಾತರಾಮಜಂ ತರಂಬಸ್ಯ ಸ್ತ್ರೀಯಂಬುರುಷ ವಿಗ್ರಹಂ. ಈ ಮಾತಿನ ಅರ್ಥ ಇಷ್ಟೇ. ‘‘ನನ್ನ ತಂದೆ ರಾಮ ಒಬ್ಬ ಪರಾಕ್ರಮಿ ಅಂತಾ ನನ್ನನ್ನ ನಿನಗೆ ಕೊಟ್ಟಿದ್ದರು. ಆದ್ರೆ ನೀನೇನು ಮಾಡುತ್ತಿರುವೆ ಎಂದು ಬಿಟ್ಟಿದ್ದಳು’’ ಆ ಮಾತನ್ನ ಆ ಕ್ಷಣವನ್ನ ರಾಮ ತುಂಬಾ ಅದ್ಭುತವಾಗಿ ನಿಭಾಯಿಸಿದ್ದ. ಸೀತೆ ತನ್ನ ಮೇಲೆ ಪ್ರೀತಿಯಿಟ್ಟಿರುವುದರಿಂದಲೇ ಹಾಗೇ ಅಂದಿದ್ದಾಳೆ. ಹಾಗಾಗಿ, ಬಾ ಅಂತಾ ಕಾಡಿಗೆ ಕರೆದೊಯ್ದಿದ್ದನಂತೆ. ಇದರಿಂದ ಪತ್ನಿಯ ಮನಸನ್ನ ಅರ್ಥ ಮಾಡಿಕೊಳ್ಳುವ ಪತಿ ಎನಿಸಿಕೊಂಡಿದ್ದ.

ಅರಣ್ಯವಾಸದ ಸಮಯದಲ್ಲೇ ಸುಗುಣಗಳ ಮಹಾದರ್ಶನ

ವಾಲ್ಮೀಕಿ ಬಯಸಿದ್ದ ಕಲ್ಯಾಣ ಗುಣಗಳು ರಾಮನಲ್ಲಿರೋದನ್ನ ನಾರದಮಹರ್ಷಿ ಹೇಳಿದ್ರು. ಆದ್ರೆ, ಆ ಗುಣಗಳು ಒಂದೊಂದಾಗಿ ಬಯಲಾಗಿದ್ದು ಮಾತ್ರ, ವನವಾಸಕ್ಕೆ ಆಜ್ಞೆಯ ಸಮಯದ ಆರಂಭದಲ್ಲೇ.. ಹೌದು, ರಾಮಾಯಣದಲ್ಲಿ ಪ್ರತಿಯೊಂದು ಘಟ್ಟ, ಮರ್ಯಾದ ರಾಮನ ಗುಣ ತೋರಿಸುವಂತದ್ದೇ ಆಗಿದೆ. ಒಬ್ಬ ರಾಜ.. ಯಾವುದೇ ಅಹಂ ಇಲ್ಲದೇ ಎಲ್ಲರೂ ತನ್ನವರೇ ಎಂಬಂತೆ, ಕೃತಜ್ಞನಾಗಿ ಬದುಕಿದ್ದ ವೀರರಾಜ ರಾಮ. ದೋಣಿಯಿಂದ ನದಿ ದಾಟಿಸಿದ ಬುಡಕಟ್ಟು ಗುಹನನ್ನೇ ನೆಂಟನಂತೆ ಎದೆಗೆ ಒತ್ತಿಕೊಂಡ. ಶಬರಿಯಿಂದ ಎಂಜಲು ಹಣ್ಣನ್ನ ತಿಂದು ಒಡಹುಟ್ಟಿದವಳಂತೆ ಕಂಡ. ಸೀತಾಪಹರಣದ ಸಮಯದಲ್ಲಿ ರಾವಣನನ್ನ ತಡೆಯಲು ಜಟಾಯು ಹಾರಿದ್ದ. ಆಗ ಪೆಟ್ಟು ತಿಂದು, ಸೀತೆಯ ಜಾಡು ಕೊಟ್ಟು ಮೃತನಾದ ಅದೇ ಜಟಾಯುಗೆ, ರಾಮ ತಂದೆಯ ಅಂತ್ಯಸಂಸ್ಕಾರದಂತೆ ಅಂತ್ಯಕ್ರಿಯೆ ಮಾಡಿದ್ದ. ಇದೇ ಪ್ರಾಣಿ ಪಕ್ಷಿಗಳೂ ನಮ್ಮಂತೆ ಸಮಾನ ಅನ್ನೋದಕ್ಕೆ ಸಂದೇಶವಾಗಿತ್ತು. ಸೇತುವೆ ನಿರ್ಮಾಣದಲ್ಲಿ ಅಳಿಲು, ಶರಣೆಂದು ಬಂದಿದ್ದ ರಾವಣನ ತಮ್ಮನಿಗೆ ಆಶ್ರಯ, ಅಷ್ಟೇ ಯಾಕೆ ಯುದ್ಧಾರಂಭದಲ್ಲಿ ನಿರಾಯುಧನಾಗಿದ್ದ ರಾವಣನನ್ನೇ ಕೈ ಬಿಡುವಷ್ಟು ಉದಾತ್ತ ಪುರುಷನಾಗಿದ್ದರಿಂದಲೇ, ಮನೆ ಮನೆಗೂ, ಮನ ಮನಕೂ, ತಲೆ ತಲೆಮಾರುಗಳಿಗೂ, ಯುಗ ಯುಗಾಂತರಕ್ಕೂ ರಾಮನೇ ಆದರ್ಶ ಪುರುಷನಾಗಿದ್ದಾನೆ. 16 ಕಲ್ಯಾಣ ಗುಣಗಳಿರುವ ಏಕೈಕ ಚಕ್ರವರ್ತಿಯಾಗಿದ್ದಾನೆ.

ರಾಮನ ಕಲ್ಯಾಣ ಗುಣಗಳು!

ಗುಣವಾನ್ ಕಶ್ಚ & ವೀರ್ಯವಾನ್
ಧಮರ್ಙ್ಜಶ್ಚ & ಕೃತಙ್ಞಶ್ಚ
ಸತ್ಯವಾಕ್ಯಃ & ದೃಢವ್ರತಃ
ಚಾರಿತ್ರೇಣ ಚ ಕೋಯುಕ್ತಃ
ಸರ್ವಭೂತೇಷು ಹಿತಃ

ಶ್ರೀರಾಮನ ಕಲ್ಯಾಣ ಗುಣಗಳ ಭಾಗವಾಗಿ ಮೊದಲಾರ್ಧ ಭಾಗ ನೋಡೋದಾದ್ರೆ.. ಗುಣವಾನ್ ಕಶ್ಚ.. ಈ ಗುಣ ರಾಮನು ಎಲ್ಲರನ್ನೂ ಯಾವುದೇ ಭೇದ ಭಾವವಿಲ್ಲದೇ ಒಂದೇ ರೀತಿ ನೋಡೋದಾಗಿದೆ. ಇನ್ನೂ ವೀರ್ಯವಾನ್ ಈ ಪದವೇ ಹೇಳುತ್ತೆ ರಾಮನೊಬ್ಬ ಪ್ರಬಲ ಯೋಧ ಅಂತ. ಧರ್ಮಜ್ಞಶ್ಚ ಅಂದ್ರೆ ರಾಮ ಧರ್ಮಕ್ಕೆ ಅಂಟಿಕೊಂಡಿದ್ದವನು, ಹಾಗೆ ಕೃತಜ್ಞಶ್ಚ, ತನಗೆ ಸಹಾಯ ಮಾಡಿದವರಿಗೆ ಯಾವತ್ತಿಗೂ ಕೃತಜ್ಞನಾಗಿದ್ದ. ಗುಹಾ, ಹನುಮ, ವಾನರ ಸೈನ್ಯಕ್ಕೆ ರಾಮ ಯಾವತ್ತಿಗೂ ಆಭಾರಿಯಾಗಿದ್ದ. ಸತ್ಯವಾಕ್ಯಃ, ರಾಮನ ಬಾಯಿಯಿಂದ ಒಂದು ಸುಳ್ಳು ಮಾತು ಬಂದಿಲ್ಲ ಎನ್ನಲಾಗಿದೆ. ಆತ ಏನೇ ಹೇಳಿದ್ರೂ ಅದು ಪರಮ ಸತ್ಯವೇ ಆಗಿರ್ತಿತ್ತಂತೆ. ಇನ್ನು ದೃಢವ್ರತಾಃ.. ಅಂದ್ರೆ ರಾಮ ಒಮ್ಮೆ ನಿರ್ಧಾರ ಮಾಡಿದ್ರೆ ಮುಗೀತು, ಅದನ್ನೆ ಮಾಡಿಯೇ ಬಿಡ್ತಿದ್ದ. ವನವಾಸ ಮಾಡಿದ್ದು ಹಾಗೇನೆ. ದಶರಥ ಗತಿಸಿದ್ರೂ ವನವಾಸ ಮಾತ್ರ ನಿಲ್ಲಿಸಿರಲಿಲ್ಲ. ಚರಿತ್ರೇಣಾಚ ಕೋಯುಕ್ತಾಃ. ಈ ಗುಣ ದೋಷರಹಿತನಾಗಿರೋದನ್ನ ತಿಳಿಸುತ್ತೆ. ರಾಮನ ಮೇಲೆ ಒಂದು ಮಚ್ಚೆಯಷ್ಟು ಆ ಕಲೆ ಇಲ್ಲ. ಇನ್ನೂ ಸರ್ವಭೂತೇಷು ಹಿತಃ.. ಇದು ಎಲ್ಲರಿಗೂ ಒಳ್ಳೆಯದನ್ನೇ ಬಯಸೋ ಗುಣ.. ರಾಮ ಮಾಡಿದ್ದೂ ಅದೆ. ಇದಕ್ಕೆ ಜಟಾಯು ಸನ್ನಿವೇಶವೇ ಸಾಕ್ಷಿ.

ಧರ್ಮಪಾಲನೆಯನ್ನ, ಪ್ರಜಾಕ್ಷೇಮವನ್ನ ಬಯಸಿದ್ದ ನಿಜವಾದ ರಾಜ ರಾಮ. ಮನೆಯ ಒಡತಿಯಾಗಲೀ, ಪ್ರಜೆಗಳೆ ಆಗಲೀ ಏನು ಹೇಳಿದರೆ ಅದನ್ನೇ ಮಾಡಿದ್ದಾನೆ. ಒಬ್ಬ ಅಗಸ ರಾಮನ ಹೆಸರೇಳಿ ಹೆಂಡತಿಯನ್ನ ದೂಷಿಸಿದಾಗ, ತನ್ನಿಂದ ಪ್ರಜೆಗಳಿಗೆ ತಪ್ಪು ಸಂದೇಶ ಹೋಗಬಾರದು ಅಂತಾ ಸೀತೆಯನ್ನೇ ಅಗ್ನಿಪರೀಕ್ಷೆಗೆ ಒಳಪಡಿಸಿದ್ದ. ಇದು ದಾಂಪತ್ಯ, ಸಂಸಾರದಲ್ಲಿ ಕ್ರೂರವಾಗಿ ಕಂಡರೂ ರಾಜ್ಯದ ದೃಷ್ಟಿಯಲ್ಲಿ ನ್ಯಾಯ ಅಂದಿದ್ದಾರೆ. ಹೀಗೆ, ರಾಮ ಪುರುಷೋತ್ತಮ ಅನ್ನೋದಕ್ಕೆ ಕಾರಣಗಳು ಒಂದಲ್ಲ ಎರಡಲ್ಲ ಸುಗುಣಾದಿರಾಮನ ಸುಗುಣಗಳು ಇನ್ನಷ್ಟು ಬಾಕಿ ಇವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

16 ಕಲ್ಯಾಣ ಗುಣಗಳು ಇರುವ ಏಕೈಕ ಚಕ್ರವರ್ತಿ; ‘ಮರ್ಯಾದಾ ಪುರುಷೋತ್ತಮ’ ಅನ್ನೋದೇಕೆ ಗೊತ್ತಾ?

https://newsfirstlive.com/wp-content/uploads/2024/01/shri-ram-mandira.jpg

Load More