newsfirstkannada.com

BIG BREAKING: ಅಯೋಧ್ಯೆಯಲ್ಲಿ ಕನ್ನಡಿಗ ಕೆತ್ತಿದ ರಾಮ ಲಲ್ಲಾ ಮೂರ್ತಿಯೇ ಪ್ರತಿಷ್ಠಾಪನೆ

Share :

Published January 15, 2024 at 4:05pm

Update January 15, 2024 at 4:34pm

    ಅಯೋಧ್ಯೆಗೆ ಅರುಣ್ ಯೋಗಿರಾಜ್ ಕೆತ್ತನೆಯ ಮೂರ್ತಿ ಆಯ್ಕೆ

    ಅಯೋಧ್ಯೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ ಚಂಪತ್ ರಾಯ್

    15 ದಿನದ ಹಿಂದೆಯೇ ಮೊಟ್ಟ ಮೊದಲಿಗೆ ವರದಿ ಮಾಡಿದ್ದೇ ನ್ಯೂಸ್ ಫಸ್ಟ್

ಅಯೋಧ್ಯೆ ರಾಮ ಮಂದಿರದಲ್ಲಿ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮ ಲಲ್ಲಾ ಮೂರ್ತಿಯೇ ಪ್ರತಿಷ್ಠಾಪನೆಗೆ ಆಯ್ಕೆ ಆಗಿದೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಚಂಪತ್ ರಾಯ್, ಕರ್ನಾಟಕದ ಅರುಣ್ ಯೋಗಿರಾಜ್ ಅವರು 15-20 ದಿನಗಳ ಕಾಲ ಮನೆಗೆ ಕರೆ ಮಾಡದೇ ಏಕಾಗ್ರತೆಯಿಂದ ರಾಮ ಲಲ್ಲಾ ಮೂರ್ತಿಯನ್ನ ಕೆತ್ತಲಾಗಿದೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಒಟ್ಟು 11 ಜನರ ಈ ಮೂರ್ತಿಯನ್ನ ಒಪ್ಪಿದ್ದಾರೆ. ಟ್ರಸ್ಟ್ ಕಮಿಟಿಯ 15 ರಲ್ಲಿ 11 ಸದಸ್ಯರು ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಮೂರ್ತಿಯನ್ನೇ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ರಾಮನೂರಿಗೆ ಕರುನಾಡಿನ ಮೂರ್ತಿ.. ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್​ಗೆ ಶುಭಾಶಯಗಳ ಮಹಾಪೂರ

ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ದೇಶದ ಮೂವರು ಪ್ರಖ್ಯಾತ ಶಿಲ್ಪಿಗಳಿಗೆ ಮೂರ್ತಿ ಕೆತ್ತನೆ ಕಾಯಕ ಒಲಿದು ಬಂದಿದೆ. ಮೂರರಲ್ಲಿ ಒಂದು ರಾಮ ಲಲ್ಲಾ ಮೂರ್ತಿಯ ಕೆತ್ತನೆಯನ್ನು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಪೂರ್ಣಗೊಳಿಸಿದ್ದಾರೆ. ಮೈಸೂರಿನ ಅರುಣ್ ಯೋಗಿರಾಜ್ ಕೈಯಲ್ಲಿ ರಾಮ ಲಲ್ಲಾ ಮೂರ್ತಿ ಮೂಡಿಬಂದಿದೆ.

ನ್ಯೂಸ್‌ ಫಸ್ಟ್ ವರದಿಯೇ ನಿಜವಾಯ್ತು!

ಅಯೋಧ್ಯೆಯಲ್ಲಿ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮ ಲಲ್ಲಾ ಮೂರ್ತಿಯೇ ಪ್ರತಿಷ್ಠಾಪನೆಯಾಗಲಿದೆ. ಈ ಸುದ್ದಿಯನ್ನು ಮೊದಲು ಪ್ರಸಾರ ಮಾಡಿದ್ದೇ ನ್ಯೂಸ್‌ ಫಸ್ಟ್ ಚಾನೆಲ್. ಕಳೆದ 15 ದಿನಗಳ ಹಿಂದೆಯೇ ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿಯೇ ಪ್ರತಿಷ್ಠಾಪನೆ ಆಗಲಿದೆ ಎಂದು ನ್ಯೂಸ್ ಫಸ್ಟ್ ವರದಿ ಮಾಡಿತ್ತು. ಇಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಮಾಹಿತಿಯನ್ನು ಖಚಿತಪಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIG BREAKING: ಅಯೋಧ್ಯೆಯಲ್ಲಿ ಕನ್ನಡಿಗ ಕೆತ್ತಿದ ರಾಮ ಲಲ್ಲಾ ಮೂರ್ತಿಯೇ ಪ್ರತಿಷ್ಠಾಪನೆ

https://newsfirstlive.com/wp-content/uploads/2023/12/arun.jpg

Load More