/newsfirstlive-kannada/media/post_attachments/wp-content/uploads/2025/04/sheela.jpg)
ರಾಮಾಚಾರಿ ಧಾರಾವಾಹಿ ಶ್ರುತಿ ಪಾತ್ರ ಬದಲಾಗಿರೋದು ನಿಮಗೆಲ್ಲಾ ಗೊತ್ತೇ ಇದೆ. ಮೊದಲಿದ್ದ ಶ್ರುತಿ ಯಾಕೆ ಧಾರಾವಾಹಿಯಿಂದ ಹೊರಬಂದ್ರು ಎಂಬುದಕ್ಕೆ ಉತ್ತರ ಸಿಕ್ಕಿದೆ. ಹೌದು, ನಟಿ ಶೀಲಾ ಅವರಿಗೆ ಕಂಕಣಭಾಗ್ಯ ಕೂಡಿಬಂದಿದೆ.
ಇದನ್ನೂ ಓದಿ: 9 ಸಾವಿರಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆಗಳು.. SSLC ಪಾಸ್ ಆಗಿದ್ರೆ ಸಾಕು…!
ಹೌದು, ರಾಮಾಚಾರಿ ಮುದ್ದಿನ ತಂಗಿ ಶ್ರುತಿ ಪಾತ್ರಕ್ಕೆ ಬಣ್ಣ ಹಚ್ಚಿದ್ರು ನಟಿ ಶೀಲಾ ಹೆಚ್. ಇದ್ದಕ್ಕಿದ್ದಹಾಗೆ ಸೀರಿಯಲ್ನಿಂದ ಹೊರಬಂದಿದ್ರು ನಟಿ. ಆದ್ರೆ ಈ ಹಿಂದಿನ ಕಾರಣ ಮಾತ್ರ ಏನು ಅಂತ ಸ್ಪಷ್ಟವಾಗಿರಲಿಲ್ಲ. ಈಗ ಅದಕ್ಕೆ ಉತ್ತರ ಸಿಕ್ಕಿದೆ. ನಟಿ ಶೀಲಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ನಟಿ ಶೀಲಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಜರುಗಿದೆ. ಚಿರಂತ್ ಎಂಬುವವರನ್ನ ವರಿಸಿಲಿದ್ದಾರೆ ಶೀಲಾ. ನಟಿ ಬದುಕಿನ ಶುಭ ಘಳಿಗೆಗೆ ಸಾಕ್ಷಿಯಾಗಿದ್ದಾರೆ ರಾಮಾಚಾರಿ ತಂಡ.
View this post on Instagram
ಐಶ್ವರ್ಯಾ ವಿನಯ್, ರಿತ್ವಿಕ್ ಕೃಪಾಕರ್, ನಟಿ ಮೌನ ಗುಡ್ಡೆಮನೆ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದರು. ಮದುವೆ, ನಿಶ್ಚಿತಾರ್ಥದ ಸಂಭ್ರಮದ ಜೊತೆಗೆ ಹೊಸ ಕಾರು ಖರೀದಿಸಿದ್ದಾರೆ ನಟಿ ಶೀಲಾ. ಅಂದಹಾಗೆ ನಟಿ ಖರೀದಿಸಿದ್ದ ಕಾರು 13 ಲಕ್ಷ ಬೆಲೆಯದ್ದಾಗಿದೆ.
ರಾಮಾಚಾರಿ ಪಾತ್ರ ಮಾಡ್ತಿರೋ ರಿತ್ವಿಕ್ ಹಾಗೂ ಶೀಲಾ ಸ್ಪೆಷಲ್ ಬಾಂಡಿಂಗ್ ಹೊಂದಿದ್ದಾರೆ. ತೆರೆಮೇಲೆ ಅಷ್ಟೇ ಅಲ್ಲದೇ ನಿಜ ಜೀವನದಲ್ಲೂ ಅಣ್ಣ-ತಂಗಿಯ ಬಾಂಧವ್ಯ ಹೊಂದಿದ್ದಾರೆ. ಪ್ರತಿ ವರ್ಷ ರಕ್ಷಾ ಬಂಧನಕ್ಕೆ ತಪ್ಪದೇ ಅಣ್ಣನಿಗೆ ರಾಕಿ ಕಟ್ಟುತಾರೆ ನಟಿ ಶೀಲಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ