ಕೆಂಪು ಸೀರೆಯಲ್ಲಿ ಅಪ್ಸರೆಯಂತೆ ಮಿಂಚಿದ ರಾಮಾಚಾರಿ ಸೀರಿಯಲ್​ ​ನಟಿ; ದೇವಿಕಾ ಭಟ್ ಬ್ಯೂಟಿಗೆ ಫ್ಯಾನ್ಸ್ ಫಿದಾ!

author-image
Veena Gangani
Updated On
ಕೆಂಪು ಸೀರೆಯಲ್ಲಿ ಅಪ್ಸರೆಯಂತೆ ಮಿಂಚಿದ ರಾಮಾಚಾರಿ ಸೀರಿಯಲ್​ ​ನಟಿ; ದೇವಿಕಾ ಭಟ್ ಬ್ಯೂಟಿಗೆ ಫ್ಯಾನ್ಸ್ ಫಿದಾ!
Advertisment
  • ರಾಮಾಚಾರಿ ಸೀರಿಯಲ್​ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ನಟಿ
  • ಮುದ್ದಾದ ಅಭಿನಯದ ಮೂಲಕವೇ ವೀಕ್ಷಕರ ಮನಸ್ಸು ಗೆದ್ದಿದ್ದ ದೇವಿಕಾ
  • ಕೆಂಪು ಬಣ್ಣದ ಸೀರೇಲಿ ದೇವಿಕಾ ಭಟ್​ನನ್ನು ನೋಡಿದ ಫ್ಯಾನ್ಸ್​ ಏನಂದ್ರು?

ಕನ್ನಡ ಕಿರುತೆರೆಯ ವೀಕ್ಷಕರ ನೆಚ್ಚಿನ ಧಾರಾವಾಹಿ ಎಂದರೆ ರಾಮಾಚಾರಿ. ಇದೇ ರಾಮಾಚಾರಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು ದೇವಿಕಾ ಭಟ್. ಆದರೆ ಇದೇ ಸೀರಿಯಲ್​ಗೆ ಎಂಟ್ರಿ ಕೊಟ್ಟು ವೀಕ್ಷಕರ ಗಮನ ಸೆಳೆದಿದ್ದ ನಟಿ ದೇವಿಕಾ ಭಟ್ ಏಕಾಏಕಿ ಆಚೆ ಬಂದಿದ್ದರು.

ಇದನ್ನೂ ಓದಿ:ಕರ್ನಾಟಕ ಹೈಕೋರ್ಟ್​ ಇಂದ ಮಹತ್ವದ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಆಯ್ಕೆ ಪ್ರಕ್ರಿಯೆ ಹೇಗಿದೆ?

publive-image

ರುಕ್ಮಿಣಿ ಪಾತ್ರದ ಮೂಲಕ ರಾಮಾಚಾರಿ ಸೀರಿಯಲ್​ಗೆ ಎಂಟ್ರಿ ಕೊಟ್ಟಿದ್ದ ದೇವಿಕಾ ಭಟ್ ಇದೀಗ ಹೊಸ ಲುಕ್​ನಲ್ಲಿ ಕಾಣಿಸಿದ್ದಾರೆ. ಹೌದು, ನಟಿ ದೇವಿಕಾ ಭಟ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹೊಚ್ಚ ಹೊಸ ಫೋಟೋಶೂಟ್​ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋದಲ್ಲಿ ನಟಿ ದೇವಿಕಾ ಭಟ್ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.

ಇನ್ನೂ, ದೇವಿಕಾ ಭಟ್​ ಬ್ಯೂಟಿಫುಲ್ ಫೋಟೋಸ್ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದೇ ಫೋಟೋಗೆ ಅಭಿಮಾನಿಗಳು ಭಿನ್ನ ವಿಭಿನ್ನ ಕಾಮೆಂಟ್​ ಹಾಕಿದ್ದಾರೆ. ಅದರಲ್ಲೂ ಒಬ್ಬ ಅಭಿಮಾನಿ ನೀವು ಸೀರೆ ಉಟ್ಟುಕೊಂಡುದಾಗ ತುಂಬಾನೇ ಸುಂದರವಾಗಿ ಕಾಣುತೀರಿ, ಬ್ಯೂಟಿ ಇನ್ನೊಂದು ಹೆಸರೇ ನಮ್ಮ ದೇವಿಕಾ, ಕೈ ಎತ್ತಿ ಮುಗಿಬೇಕು ಅನೋ ಅಷ್ಟು ಲಕ್ಷಣವಾಗಿ ಇದ್ದೀರಾ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment