/newsfirstlive-kannada/media/post_attachments/wp-content/uploads/2024/06/charu1.jpg)
ಕನ್ನಡದ ಕಿರುತೆರೆಯ ಬ್ಯೂಟಿಫುಲ್ ನಟಿಯರಲ್ಲಿ ಚಾರು ಕೂಡ ಒಬ್ಬರು. ರಾಮಾಚಾರಿನ ಅರಸಿ ಚಾರು ಕೆಲವೊಮ್ಮೆ ತುಂಬಾ ಮುದ್ದು, ಕೆಲವೊಮ್ಮೆ ತುಂಬಾ ಕೋಪಿಷ್ಟೇ. ತನ್ನ ರಾಮಾಚಾರಿಗೋಸ್ಕರ ಚಾರು ಏನ್ಬೇಕಾದರೂ ಮಾಡ್ತಾಳೆ. ಇದು ಸೀರಿಯಲ್​​ ಕತೆಯಾದ್ರೆ ಚಾರು ಪಾತ್ರ ನಿರ್ವಹಿಸುತ್ತಿರುವ ನಟಿ ಮೌನ ಗುಡ್ಡೆಮನೆ ಅವ್ರು ಕೋಪಿಷ್ಟೆನೂ ಅಲ್ಲ, ಮುಖದ ತುಂಬಾ ಸಿಟ್ಟು ಇರೋ ಹುಡ್ಗಿನೂ ಅಲ್ಲ.. ಬರೀ ಸಿಹಿ ತುಂಬಿರೋ ಜೇನಿನಂಥ ಹುಡುಗಿ ಮೌನ.
/newsfirstlive-kannada/media/post_attachments/wp-content/uploads/2024/06/charu.jpg)
ಇದನ್ನೂ ಓದಿ:VIDEO: ಏರ್‌ಪೋರ್ಟ್‌ನಲ್ಲಿ ಕಂಗನಾ ರನೌತ್‌ಗೆ ಕಪಾಳ ಮೋಕ್ಷ; ಅಸಲಿಗೆ ಆಗಿದ್ದೇನು?
ಇದೀಗ ನಟಿ ಮೌನ ಗುಡ್ಡೆಮನೆ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬಹಳ ವರ್ಷಗಳ ಆಸೆಯನ್ನು ನಟಿ ಇದೀಗ ಈಡೇರಿಸಿಕೊಂಡಿದ್ದಾರೆ. ಹೌದು, ರಾಮಾಚಾರಿ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ಮೌನಾ ಗುಡ್ಡೇಮನೆ ಹೊಸ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹೊಸ ಕಾರಿಗೆ ಪೂಜೆ ಮಾಡಿಸಿದ್ದಾರೆ. ಆ ಸುಂದರ ಫೋಟೋಗಳನ್ನು ಅವರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ನಟಿ ಮೌನಾ ಗುಡ್ಡೇಮನೆ ಖರೀದಿಸಿದ ಐಷಾರಾಮಿ ಕಿಯಾ ಕಾರಿನ ಬೆಲೆ ಬರೋಬ್ಬರಿ 13 ಲಕ್ಷದಿಂದ 24 ಲಕ್ಷ ರೂಪಾಯಿವರೆಗೂ ಇದೆ. ಇನ್ನು ಮತ್ತೊಂದು ವಿಶೇಷ ಎಂದರೆ ನಟಿ ಮೌನಾ ಗುಡ್ಡೇಮನೆ ಅವರು ಹುಟ್ಟುಹಬ್ಬದ ದಿನವೇ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಹೊಸ ಕಾರಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು, ಚಾರು ನಿಮ್ಮ ಕನಸೆಲ್ಲ ನನಸಾಗಲಿ, ನಿಮ್ಮ ಮುಖದಲ್ಲಿ ನಗು ಯಾವಾಗಲೂ ಹೀಗೆ ಇರಲಿ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಚಾರು, ನಿಮ್ಮ ಕನಸ್ಸು ನಿಜವಾಗಲಿ, ಖುಷಿಯಾಗಿರಿ ಯಾವಾಗಲೂ ಅಂತ ಕಾಮೆಂಟ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us