ಬುಡುಬುಡಿಕೆ ವೇಷದಲ್ಲಿ ಕಿರುತೆರೆ ಸ್ಟಾರ್​ ನಟಿ ದಿಢೀರ್ ಪ್ರತ್ಯಕ್ಷ.. ಈಕೆ ಯಾರು?

author-image
Veena Gangani
Updated On
ಬುಡುಬುಡಿಕೆ ವೇಷದಲ್ಲಿ ಕಿರುತೆರೆ ಸ್ಟಾರ್​ ನಟಿ ದಿಢೀರ್ ಪ್ರತ್ಯಕ್ಷ.. ಈಕೆ ಯಾರು?
Advertisment
  • ಹೊಸ ಅವತಾರದಲ್ಲಿ ಕಾಣಿಸಿಕೊಂಡ ಕನ್ನಡದ ಬ್ಯೂಟಿ
  • ದೊಡ್ಡ ಮಟ್ಟದಲ್ಲಿ ಮಿಂಚುತ್ತಿದ್ದಾರೆ ಕಿರುತೆರೆ ಸ್ಟಾರ್​ ನಟಿ
  • ನಟಿಯನ್ನ ಬುಡುಬುಡಿಕೆ ವೇಷದಲ್ಲಿ ನೋಡಿ ಫ್ಯಾನ್ಸ್​ ಶಾಕ್​​

ರಾಮಾಚಾರಿ ಕಥೆಯಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಮನೆಯ ಸಮಸ್ಯೆ ಬಗ್ಗೆ ಅರಿವಿಲ್ಲದೇ ದಾರಿ ಕಾಣದೇ ಕೂತಿದ್ದ ಚಾರು ಸಿಡಿದೆದ್ದಿದ್ದಾಳೆ. ಸಿಡಿಗುಂಡಿನಂತೆ ಸಿಡಿದೆದ್ದಿರೋ ಚಾರು ವೈಶಾಖಾ ಕುತಂತ್ರಕ್ಕೆ ತೆರೆ ಎಳಿದಿದ್ದಾಳೆ. ಅಲ್ಲದೇ ಚಾರು ಹತ್ರಾನೇ ಚಾರು ಮೇಲೆ ಚಾಡಿ ಹೇಳ್ತಿದಾಳೆ ವೈಶಾಖಾ.

ಇದನ್ನೂ ಓದಿ: ಐಶ್ವರ್ಯಾ ಸಿಂಧೋಗಿ ಮನೆಗೆ ಮೋಕ್ಷಿತಾ ಪೈ ಸರ್‌ಪ್ರೈಸ್‌ ಎಂಟ್ರಿ; ಅಸಲಿಗೆ ಬಂದಿದ್ದು ಯಾರಿಗೋಸ್ಕರ ಗೊತ್ತಾ?

publive-image

ಹೌದು, ರಾಮಾಚಾರಿ ಸೀರಿಯಲ್​​ನಲ್ಲಿ ಹೊಸ ಅವತಾರ ತಾಳಿದ್ದಾಳೆ ಚಾರು. ಬುಡುಬುಡಿಕೆ ವೇಷದಲ್ಲಿ ವೈಶಾಖಾ ಮುಂದೆ ಪ್ರತ್ಯಕ್ಷವಾಗಿದ್ದಾಳೆ ಚಾರು. ಆದ್ರೆ, ಬುಡುಬುಡಿಕೆ ವೇಷದಲ್ಲಿ ಬಂದಿದ್ದು ಚಾರು ಅಂತ ಗೊತ್ತಾಗದೇ ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದಿದ್ದಾಳೆ.

publive-image

ಇನ್ನೂ, ಇದೇ ಮೊದಲ ಬಾರಿಗೆ ಚಾರು ಅಂದ್ರೆ ಮೌನ ಗುಡ್ಡೆಮನೆ ಬುಡುಬುಡಿಕೆ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಖುಷಿಯಲ್ಲಿ ತಮ್ಮ ಇನ್​ಸ್ಟಾ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ನಾನು ಚಿಕ್ಕವಳ ಆಗಿದ್ದಾಗಾ, ಇದು ನನ್ನ ಫೇವರೆಟ್ ಹಾಡು. ನಿಮ್ಮದು ಯಾವುದು? ಕಾಮೆಂಟ್ ಮಾಡಿ ಅಂತ ಬರೆದುಕೊಂಡಿದ್ದಾರೆ.

ಇದೇ ಪೋಸ್ಟ್​ ನೋಡಿದ ಅಭಿಮಾನಿಗಳು ಕುಳ್ಳು ಮುನಿ ಬುಡುಬುಡಿಕೆ, ಪುಟ್ಟ ಮಗು ತರ ಕಾಣ್ತಾ ಇದ್ದೀರಾ, ವಾರೆ ವಾ ಚಾರು ಯಾವ್ ಪಾತ್ರ ಕೊಟ್ರು ತುಂಬಾ ಚೆನ್ನಾಗಿ ಅಭಿನಯ ಮಾಡ್ತೀಯಾ ಸೂಪರ್ ಅಂತೆಲ್ಲಾ ಕಾಮೆಂಟ್ಸ್​ ಹಾಕಿ ಹಾಡಿ ಹೊಗಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment