Mouna Guddemane: ರಾಮಾಚಾರಿ ಚಾರು ತಲೆ ಬೋಳಿಸಿಕೊಂಡಿದ್ದೇಕೆ? ಫ್ಯಾನ್ಸ್ ಫುಲ್​ ಶಾಕ್​!

author-image
Veena Gangani
Updated On
Mouna Guddemane: ರಾಮಾಚಾರಿ ಚಾರು ತಲೆ ಬೋಳಿಸಿಕೊಂಡಿದ್ದೇಕೆ? ಫ್ಯಾನ್ಸ್ ಫುಲ್​ ಶಾಕ್​!
Advertisment
  • ಯಾರು ಊಹಿಸಲಾಗದ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ ಟಾಪ್​ ಸೀರಿಯಲ್​
  • ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ನಟಿ ಫೋಟೋಸ್​
  • ದೊಡ್ಡ ಮಟ್ಟದಲ್ಲಿ ಮಿಂಚುತ್ತಿದ್ದಾರೆ ಕಿರುತೆರೆ ಸ್ಟಾರ್​ ನಟಿ ಮೌನ ಗುಡ್ಡೆಮನೆ

ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಫೇವರೆಟ್​ ಆಗಿ ಉಳಿದುಕೊಂಡಿದೆ ರಾಮಾಚಾರಿ ಸೀರಿಯಲ್. ರಾಮಾಚಾರಿ ಧಾರಾವಾಹಿಗೆ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. ಟಿಆರ್​ಪಿಯಲ್ಲೂ ರಾಮಾಚಾರಿ ಉತ್ತಮ ಸ್ಥಾನ ಕಾಯ್ದುಕೊಂಡು ಮುನ್ನುಗ್ಗುತ್ತಿದೆ. ಇದೇ ಸೀರಿಯಲ್​ ಮೂಲಕ ದೊಡ್ಡ ಮಟ್ಟದಲ್ಲಿ ಮಿಂಚುತ್ತಿದ್ದಾರೆ ನಟಿ ಮೌನ ಗುಡ್ಡೆಮನೆ. ಆದರೆ ಇದರ ಮಧ್ಯೆ ಸೀರಿಯಲ್​ನಲ್ಲಿ ಯಾರು ಊಹಿಸಲಾರದ ಟ್ವಿಸ್ಟ್ ಒಂದು ಎದುರಾಗಿದೆ.

ಇದನ್ನೂ ಓದಿ:BIGG BOSS; ಅಮ್ಮನನ್ನು ತಬ್ಬಿಕೊಂಡು ಭವ್ಯ ಕಣ್ಣೀರು.. ತ್ರಿವಿಕ್ರಮ್ ಅತ್ತಿದ್ದು ಯಾಕೆ?

publive-image

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್​ ಪಡೆದುಕೊಂಡು ಮುನ್ನುಗ್ಗುತ್ತಿದೆ. ಆದರೆ ಚಾರು ಪಾತ್ರದಲ್ಲಿ ಅಭಿನಯಿಸುತ್ತಿರೋ ಮೌನ ಗುಡ್ಡೆಮನೆ ಹೊಸ ಅವತಾರಕ್ಕೆ ವೀಕ್ಷಕರು ಹಾಗೂ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ. ನಾರಾಯಣ ಆಚಾರ್ಯರ ಹಿರಿಯ ಸೊಸೆ ವೈಶಾಖಳ ಕುಂತತ್ರಕ್ಕೆ ಚಾರು ಮೋಸ ಹೋಗಿದ್ದಾರೆ.

publive-image

ವೈಶಾಖ ಹೇಗಿದ್ದಾಳೆ ಅಂತ ಗೊತ್ತಿದ್ದರು ಆಕೆಯ ಮಾತನ್ನು ನಂಬಿ ಮತ್ತೆ ಮೋಸ ಹೋಗಿದ್ದಾಳೆ ಚಾರು. ಕಾಲಿಗೆ ಸ್ವಾಧೀನವಿಲ್ಲ ಎಂದು ನಾಟಕ ಮಾಡುತ್ತಿರುವ ವೈಶಾಖಾ ದೇವರಲ್ಲಿ ಹರಿಕೆ ಹೊತ್ತಿದ್ದೆ ಈಗ ಪಾಲಿಸಲು ನನಗೆ ಶಕ್ತಿ ಇಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾರೆ. ಅಯ್ಯೋ ಅಕ್ಕ ಹರಕೆ ಏನೇ ಇದ್ದರೂ ನಾನು ಮಾಡುತ್ತೀನಿ ಎಂದು ಮಾತು ಕೊಟ್ಟುಬಿಡುತ್ತಾಳೆ. ಮಾತು ಕೊಟ್ಟ ಮೇಲೆ ತಲೆ ಬೋಳಿಸಿಕೊಳ್ಳಬೇಕು, ಉಪವಾಸವಿದ್ದು ದೇವರ ಪೂಜೆ ಮಾಡಬೇಕು ಎಂದು ವೈಶಾಖಾ ಹೇಳುತ್ತಾಳೆ. ಮನೆ ಮಂದಿ ಹೆದರಿಕೊಂಡರೂ ಚಾರು ಗಟ್ಟಿತನದಿಂದ ಹರಿಕೆ ತೀರಿಸಲು ತಲೆ ಬೋಳಿಸಿಕೊಳ್ಳುತ್ತಾರೆ.


ವೈಶಾಖ ಮಾತನ್ನು ನಂಬಿ ಚಾರು ಇಷ್ಟು ಬೇಗ ಮೋಸ ಹೋಗದ್ದು ಹೇಗೆ ಅಂತ ಫ್ಯಾನ್ಸ್​ ಬೇಸರ ಹೊರ ಹಾಕಿದ್ದಾರೆ. ಆದೆ ನಿಜವಾಗಲೂ ಚಾರು ತಲೆ ಬೋಳಿಸಿಕೊಂಡಿಲ್ಲ. ಬದಲಾಗಿ ತಲೆ ಬೋಳಿಸಿಕೊಂಡ ಹಾಗೆ ಚಾರುಗೆ ಮೇಕಪ್ ಮತ್ತು ಹೇರ್‌ ಸ್ಟೈಲ್ ಮಾಡಲಾಗಿದೆ. ನಟಿ ಮೌನ ಅವರು ಇದೇ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಹೃದಯದಲ್ಲಿ ಕೃಪೆ, ಆತ್ಮದಲ್ಲಿ ಶಕ್ತಿ. ಹೊಸ ವರ್ಷ ಮುಂಗಡ ಶುಭಾಶಯಗಳು.
ನಿಮ್ಮ ಜೀವನದಲ್ಲಿ ಹೊಸ ಆರಂಭ, ಹೊಸ ಆಶಯಗಳು ಮತ್ತು ಹೊಸ ಯಶಸ್ಸುಗಳು ಪ್ರತಿ ಹಂತದಲ್ಲೂ ಬೆಳಗುಹೊರಿಸಲಿ. ಈ ಹೊಸ ವರ್ಷವು ನಿಮಗೆ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಹೊಸ ವರ್ಷ ನಿಮಗೆ ಸಂತೋಷಕರವಾಗಲಿ ಅಂತ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment