/newsfirstlive-kannada/media/post_attachments/wp-content/uploads/2025/01/Ramachari-Serial-Director-3.jpg)
ಬೆಂಗಳೂರು: ರಾಮಾಚಾರಿ ಸೇರಿದಂತೆ ಮಂಗಳಗೌರಿ ಮದುವೆ, ನಾಗಿಣಿ 2 ಸೇರಿ 16 ಸೀರಿಯಲ್ ನಿರ್ದೇಶನ ಮಾಡಿರುವ ಕೆ.ಎಸ್ ರಾಮ್ ಜೀ ಮೇಲೆ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ವೈರಲ್ ಆಗಿದೆ.
/newsfirstlive-kannada/media/post_attachments/wp-content/uploads/2025/01/Ramachari-Serial-Director-2.jpg)
ರಾಮಾಚಾರಿ ಸೀರಿಯಲ್ ನಿರ್ದೇಶಕ ಕೆ.ಎಸ್ ರಾಮ್ ಜೀ ವಿರುದ್ಧ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾಗಿದ್ದು, ಯುವತಿಯರಿಗೆ ಲೈಗಿಂಕ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ. ನಕಲಿ ಖಾತೆಯಿಂದ ಲೈಂಗಿಕ ಕಿರುಕುಳದ ಪೋಸ್ಟ್ ಮಾಡಿದ್ದು, ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ನಿರ್ದೇಶಕ ರಾಮ್ ಜೀ ಅವರೇ ದೂರು ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2025/01/Ramachari-Serial-Director-1.jpg)
ಮಂಗಳಗೌರಿ ಮದುವೆ, ನಾಗಿಣಿ 2 ಸೇರಿ 16 ಸೀರಿಯಲ್ ನಿರ್ದೇಶನ ಮಾಡಿರುವ ರಾಮ್ ಜೀ ಸದ್ಯ ರಾಮಾಚಾರಿ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದಾರೆ. ರಾಮ್​ಜೀ ಹೆಜ್ಜಾರು ಎಂಬ ಕನ್ನಡ ಸಿನಿಮಾಗೂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/01/Ramachari-Serial-Director.jpg)
ಕಳೆದ ಜನವರಿ 24ರಂದು Exposing_Ram_ji ಇನ್​​ಸ್ಟಾ ಖಾತೆ ಕ್ರಿಯೇಟ್ ಮಾಡಲಾಗಿದೆ. ಆ ಪೇಜ್‌ನಲ್ಲಿ ರಾಮ್ ಜೀ ಫೋಟೋ ಬಳಸಿಕೊಂಡು ಯುವತಿಯರಿಗೆ ನಿರ್ದೇಶಕರಿಂದ ಲೈಂಗಿಕ ಕಿರುಕುಳ ಅಂತ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಸೀರೆಯಲ್ಲಿ ಅಪ್ಸರೆಯಂತೆ ಕಂಡ ಮೋಕ್ಷಿ.. ಫೋಟೋ ಹಂಚಿಕೊಂಡು LOVE ಸ್ಟೋರಿ ಹೇಳಿದ ಚೆಲುವೆ..!
ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳ ಅಂತ ಪೋಸ್ಟ್​ ಮಾಡಿದ್ದು, ಆರೋಪಗಳನ್ನ ರಾಮ್ ಜೀ ನಿರಾಕರಿಸಿದ್ದಾರೆ. ನನ್ನ ಬೆಳವಣಿಗೆ ಸಹಿಸದೆ ಹೀಗೆ ಮಾಡ್ತಿದ್ದಾರೆ. ಅಪರಿಚಿತ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ನಿರ್ದೇಶಕ ರಾಮ್ ಜೀ ಎಫ್ಐಆರ್ ದಾಖಲು ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us