ಅಯ್ಯೋ.. ರಾಮಾಚಾರಿ ಅತ್ತಿಗೆ ವೈಶಾಖಗೆ ಏನಾಯ್ತು? ತನ್ನ ಹಳ್ಳ ತಾನೇ ತೋಡಿಕೊಂಡಿದ್ದೇಕೆ?

author-image
Veena Gangani
Updated On
ಅಯ್ಯೋ.. ರಾಮಾಚಾರಿ ಅತ್ತಿಗೆ ವೈಶಾಖಗೆ ಏನಾಯ್ತು? ತನ್ನ ಹಳ್ಳ ತಾನೇ ತೋಡಿಕೊಂಡಿದ್ದೇಕೆ?
Advertisment
  • ಹೊಸ ತಿರುವು ಪಡೆದುಕೊಂಡ ರಾಮಾಚಾರಿ ಸೀರಿಯಲ್​
  • ಚೆನ್ನಾಗಿದ್ದ ವೈಶಾಖಗೆ ದಿಢೀರ್​ ಅಂತ ಏನಾಯ್ತು ಗೊತ್ತಾ?
  • ಬರೋಬ್ಬರಿ 4 ಮಿಲಿಯನ್​ ವೀವ್ಸ್​ ಪಡೆದುಕೊಂಡ ವಿಡಿಯೋ

ಕನ್ನಡ ಕಿರುತೆರೆಯಲ್ಲೇ ವಿಭಿನ್ನವಾಗಿ ಮೂಡಿ ಬರುತ್ತಿದೆ ಜನ ಮೆಚ್ಚದ ಸೀರಿಯಲ್​. ಸದ್ಯ ರಾಮಾಚಾರಿ ಕಥೆಯಲ್ಲಿ ಹೊಸ ತಿರುವು ತೆರೆದುಕೊಳ್ತಿದೆ. ಇಷ್ಟು ದಿನ ಮನೆಯ ಸಮಸ್ಯೆ ಬಗ್ಗೆ ಅರಿವಿಲ್ಲದೇ ದಾರಿ ಕಾಣದೇ ಕೂತಿದ್ದ ಚಾರು ಏಕಾಏಕಿ ಸಿಡಿದೆದ್ದಳು. ಸಿಡಿಗುಂಡಿನಂತೆ ಸಿಡಿದೆದ್ದಿರೋ ಚಾರು ವೈಶಾಖ ಕುತಂತ್ರಕ್ಕೆ ತೆರೆ ಎಳೆದಿದ್ದಳು.

ಇದನ್ನೂ ಓದಿ:ಫೋನ್ ನೀರಿಗೆ ಬಿದ್ದಾಗ ಈ ತಪ್ಪು ಮಾಡಿದ್ರೆ ಗೋವಿಂದ.. ಫಸ್ಟ್ ಏನು ಮಾಡಬೇಕು ಗೊತ್ತಾ?

publive-image

ರಾಮಾಚಾರಿ ಧಾರಾವಾಹಿಯಲ್ಲಿ ಈಗ ವೈಶಾಖಗೆ ಕೆಟ್ಟ ಘಳಿಗೆ ಶುರಿವಾಗಿದೆ. ಕಳೆದ ಸಂಚಿಕೆಯಲ್ಲಿ ರಾಮಾಚಾರಿಗೆ ವೈಶಾಖ ವಿಷ ಹಾಕಿದ್ಲೋ ಅವಾಗಿಂದ ಚಾರು ಅಕ್ಷರಶಃ ರೊಚ್ಚಿಗೆದ್ದಿದ್ದಾಳೆ. ವೈಶಾಖಗೆ ಚಾರುಲತಾ ವಿಷದ ಇಂಜೆಕ್ಷನ್ ಚುಚ್ಚಿದ್ದಳು. 72 ಗಂಟೆಗಳಲ್ಲಿ ವೈಶಾಖ ಸಾವನ್ನಪ್ಪೋದು ಗ್ಯಾರೆಂಟಿ ಅಂತ ಹೇಳಿದ್ದಳು. ಆಗ ಸಾವಿನಿಂದ ಪಾರಾಗಬೇಕು ಅಂದ್ರೆ, ಆಂಟಿ-ಡೋಸ್ ಬೇಕು. ಆಂಟಿ-ಡೋಸ್ ಬೇಕು ಅಂದ್ರೆ, ಚಾರು ಹೇಳಿದ ಹಾಗೆ ವೈಶಾಖ ಕೇಳಲೇಬೇಕು. ಪರಿಣಾಮ, ಬೇರೆ ದಾರಿ ಇಲ್ಲದೆ ವೈಶಾಖ ಭಿಕ್ಷೆ ಬೇಡುತ್ತಿದ್ದಳು. ವೈಶಾಖ ಭಿಕ್ಷೆ ಬೇಡೋದನ್ನ ರಾಮಾಚಾರಿ ಕಣ್ಣಾರೆ ನೋಡಿಬಿಟ್ಟಿದ್ದ.

publive-image

ಇದಾದ ಬಳಿಕ ವೈಶಾಖ ಈಗ ತನ್ನ ಹಳ್ಳ ತಾನೇ ತೋಡಿಕೊಂಡಿದ್ದಳು. ಹೀಗೆ ರಾಮಾಚಾರಿ ಧಾರಾವಾಹಿಯಲ್ಲಿ ವಿಷದ ಇಂಜೆಕ್ಷನ್ ತೆಗೆದುಕೊಂಡ ವೈಶಾಖ ಗುಂಡಿ ತೋಡಿ ಅದರಲ್ಲಿ ಕುಳಿತುಕೊಂಡಿವುದನ್ನು ವೀಕ್ಷಕರು ಈಗಾಗಲೇ ನೋಡಿದ್ದಾರೆ. ಆದರೆ, ನಿಜಕ್ಕೂ ವೈಶಾಖ ಮಣ್ಣಿನ ಅಡಿಯಲ್ಲಿ ಹೋಗಿದ್ದು ಹೇಗೆ ಎಂಬ ವಿಡಿಯೋ ಝಲಕ್ ವೈರಲ್ ಆಗಿದೆ. ವೈಶಾಖ ಪಾತ್ರದಲ್ಲಿ ಅಭಿನಯಿಸುತ್ತಿರೋ ನಟಿ ಐಶ್ವರ್ಯ ಸಾಲಿಮಠ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

publive-image

ನಟಿ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಒಂದು ಗುಂಡಿಯನ್ನು ತೋಡಿ ಅದರಲ್ಲಿ ಸ್ಟೂಲ್ ಹಾಕಿ ವೈಶಾಖಳನ್ನು ಕೂರಿಸಲಾಗಿದೆ. ವೈಶಾಖ ದೇಹದ ಸುತ್ತ ಕತ್ತರಿಸಿದ ಕಾರ್ಡ್ಬೋರ್ಡ್ ಆಕಾರದ ಕಟ್ಟಿಗೆಯನ್ನು ಇಡಲಾಗಿದೆ. ಸುಮಾರು ಏಳೆಂಟು ರಟ್ಟುಗಳನ್ನು ಮುಚ್ಚಿ ಆಕೆಯ ದೇಹದ ಮೇಲೆ ಮಣ್ಣು ಬೀಳದಂತೆ ಮುಚ್ಚುತ್ತಾರೆ. ನಂತರ ನಟಿಯ ಮೇಲೆ ತೆಳ್ಳಗೆ ಮಣ್ಣನ್ನು ಮುಚ್ಚಿ ಕೂರಿಸುತ್ತಾರೆ. ಸುಮಾರು ಒಂದೆರಡು ಗಂಟೆಗಳ ಕಾಲ ಹೀಗೆ ಮಣ್ಣಿನಲ್ಲಿ ಮುಚ್ಚಿ ಕೂರಿಸಿ ಈ ದೃಶ್ಯವನ್ನು ಮಾಡಲಾಗಿದೆ.

ಸದ್ಯ ಇದೇ ವಿಡಿಯೋ ನೋಡಿದ ಅಭಿಮಾನಿಗಳು ಒಂದು ಸೀನ್​ ಹಿಂದೆ ಇಷ್ಟೆಲ್ಲಾ ಸಾಹಸ ನಡಿಯುತ್ತಾ ಅಂತ ಶಾಕ್ ಆಗಿದ್ದಾರೆ. ವಿಶೇಷ ಎಂದರೆ ಈಗಾಗಲೇ ಈ ವಿಡಿಯೋಗೆ 4 ಮಿಲಿಯನ್​ ವೀವ್ಸ್​ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment