ಬೆಂಗಳೂರಿನಲ್ಲಿ 2ನೇ ಕೆಂಪೇಗೌಡ ಪ್ರತಿಮೆ ಮಾಡಿದ್ದೇ ನಾನು -ರಾಮಲಿಂಗಾ ರೆಡ್ಡಿ

author-image
Veena Gangani
Updated On
ಬೆಂಗಳೂರಿನಲ್ಲಿ 2ನೇ ಕೆಂಪೇಗೌಡ ಪ್ರತಿಮೆ ಮಾಡಿದ್ದೇ ನಾನು -ರಾಮಲಿಂಗಾ ರೆಡ್ಡಿ
Advertisment
  • ಬೃಹತ್‌ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಜಯಂತಿ
  • ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಾರಿಗೆ ಸಚಿವ
  • ಅಶ್ವಾರೂಡ ಮಾದರಿಯಲ್ಲಿ ನಿರ್ಮಿಸಲಾದ ಎರಡನೇ ಕೆಂಪೇಗೌಡ ಪ್ರತಿಮೆ

ಬೆಂಗಳೂರು: ಇಂದು ನಾಡಪ್ರಭು ಕೆಂಪೇಗೌಡ ಜಯಂತಿ. ಈ ಹಿನ್ನೆಲೆಯಲ್ಲಿ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಮಾವಳ್ಳಿಯಲ್ಲಿರುವ ಕೆಂಪೇಗೌಡ ಪ್ರತಿಮೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಲಾರ್ಪಣೆ ಮಾಡಿದ್ದಾರೆ.

publive-image

ಬೆಂಗಳೂರನಲ್ಲಿ ಅಶ್ವಾರೂಡ ಮಾದರಿಯಲ್ಲಿ ನಿರ್ಮಿಸಲಾಗಿರುವ ಎರಡನೇ ಕೆಂಪೇಗೌಡ ಪ್ರತಿಮೆ ಇದಾಗಿದೆ. ಇದು 2006ರಲ್ಲಿ ಅನಾವರಣಗೊಂಡಿರುವ ಕೆಂಪೇಗೌಡ ಪ್ರತಿಮೆಯಾಗಿದೆ. ಕಾರ್ಯಕ್ರಮದಲ್ಲಿ ಕೆಂಪೇಗೌಡ ಜಯಂತಿ ಪ್ರಯುಕ್ತ ಸಹಿ ಹಂಚಿ ಈ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಮಾತಾಡಿದ್ದಾರೆ.

ಇದನ್ನೂ ಓದಿ:ಪತಿ ಜತೆ ನಟಿ ವೈಷ್ಣವಿ ಗೌಡ ಫುಲ್​ ಮಸ್ತಿ.. ಹೋಗಿದ್ದು ಎಲ್ಲಿಗೆ ಗೊತ್ತಾ..? PHOTOS

publive-image

ಅವರ ಕಾಲದಲ್ಲಿ ಬೆಂಗಳೂರು ದಾಟಬಾರದು ಅಂತ ನಾಲ್ಕು ಗೋಪುರ ಕಟ್ಟಿದ್ದರು. ಆದರೆ ಇಂದು ಬೆಂಗಳೂರು ಬೃಹತ್ ಆಕಾರದಲ್ಲಿ ಬೆಳೆದಿದೆ. ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗಿದೆ. ಬೆಂಗಳೂರಿನ ಮೊದಲನೇ ಕೆಂಪೇಗೌಡ ಪ್ರತಿಮೆ ಬಿಬಿಎಂಪಿಯಲ್ಲಿ ಇತ್ತು. ಇದು ಬೆಂಗಳೂರಿಗೆ ಎರಡನೇ ಪ್ರತಿಮೆ. ಬೆಂಗಳೂರಿನ ಎರಡನೇ ಅಶ್ವಾರೂಡ ಕೆಂಪೇಗೌಡ ಪ್ರತಿಮೆ ನಾನು ಜಯನಗರ ಶಾಸಕರಿದ್ದಾಗ ಮಾಡಿದ್ದು. ಆವತ್ತು ಕೆಂಪೇಗೌಡ ದಿನಾಚರಣೆ ಆಚರಣೆ ಮಾಡುತ್ತಿರಲಿಲ್ಲ. ಆವಾಗ ನಾವು ಅಶ್ವಾರೂಡ ಪ್ರತಿಮೆ ನಿರ್ಮಾಣ ಮಾಡಿದ್ವಿ. ಸಿಎಂ‌ ಆಗಿದ್ದಾಗ ಧರ್ಮಸಿಂಗ್ ಉದ್ಘಾಟನೆ ಮಾಡಿದ್ರು. ಆಡಳಿತಕ್ಕೆ ಕೆಂಪೇಗೌಡರು ಹೆಚ್ಚು ಒತ್ತು ನೀಡಿದ್ರು. ಪ್ರತಿಮೆ ಆಗಲು ಉದಯ್ ಶಂಕರ್ ಸೇರಿದಂತೆ ಗ್ರಾಮಸ್ಥರು ಬಹಳಷ್ಟು ಶ್ರಮಿಸಿದ್ದಾರೆ. ಈಗ ಬೇಕಾದಷ್ಟು ಪ್ರತಿಮೆ ಇದೆ ಆದರೆ ಆವತ್ತು ಎರಡನೇ ಪ್ರತಿಭಟನೆ ನಿರ್ಮಾಣ ಮಾಡಿದ್ವಿ.

publive-image

ಕೆಂಪೇಗೌಡರು ದೂರ ದೃಷ್ಟಿ ಇರುವವರು. ಇಂತವರನ್ನ ಸ್ಮರಣೆ ಮಾಡುವುದು ಬಹಳ ಒಳ್ಳೆಯ ಕೆಲಸ. ಆ ಕಾಲದಲ್ಲಿ ಇಷ್ಟೊಂದು ಬೆಂಗಳೂರು ಬೆಳೆದಿರಲಿಲ್ಲ. ಈ ಬೃಹತ್‌ ಆಗಿ ಬೆಂಗಳೂರು ಬೆಳೆದಿದೆ. ಬೆಂಗಳೂರಿನಲ್ಲಿ ಸಮಸ್ಯೆಗಳು ಜಾಸ್ತಿ ಇದೆ. ಬೆಂಗಳೂರು ಸುಂದರವಾದ ನಗರ ಆಗಿತ್ತು. ಕಸದ ಸಮಸ್ಯೆ ಇರ್ಲಿಲ್ಲ, ನಾವೆಲ್ಲರೂ ಕಾಲೇಜು ದಿನಗಳಲ್ಲಿ ಸತತ ಮೂರ್ನಾಲ್ಕು ಗಂಟೆಗಳ ಮಳೆ ಬರ್ತಿತ್ತು. ಟ್ರಾಫಿಕ್ ಸಮಸ್ಯೆ ಇರ್ಲಿಲ್ಲ, ನಾನು ಪಾಲಿಕೆ ಸದಸ್ಯ ಇದ್ದಾಗ 15 ಲಕ್ಷ ಅಷ್ಟೇ ಜನ ಸಂಖ್ಯೆ ಇತ್ತು. ಬಹಳ ಸುಂದರವಾದ ನಗರ ಇತ್ತು. ಜನಸಂಖ್ಯೆ ಬೆಳೆಯುತ್ತಾ ಸಮಸ್ಯೆ ಜಾಸ್ತಿ ಆಗಿದೆ. ಇದಕ್ಕೆ ಸರ್ಕಾರ ಪರಿಹಾರ ಮಾಡಬೇಕು. ಈಗಾಗಲೇ ಬೇಕಾದಷ್ಟು ಪ್ರತಿಮೆ ಇದೆ. ಮೊದಲು ಬಿಬಿಎಂಪಿ ‌ಮಾಡಿತ್ತು, ಎರಡನೇ ಪ್ರತಿಮೆ ನಾವು ಮಾಡಿದ್ವಿ. ಕೆಂಪೇಗೌಡರ ಕನಸು ಈಗ ನನಸಾಗಿದೆ. ಬೆಂಗಳೂರಿನ ವಾತಾವರಣ ದೇಶದಲ್ಲಿ ಎಲ್ಲೂ ಸಿಗಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment