newsfirstkannada.com

ಹಾಡಹಗಲೇ ಯುವತಿಗೆ ಚಾಕು ಇರಿದು ಕಿಡ್ನಾಪ್.. ಸಿನಿಮೀಯ ಶೈಲಿಯಲ್ಲಿ ಎತ್ತಾಕಿಕೊಂಡು ಹೋದ ಕಿಡಿಗೇಡಿಗಳು​

Share :

Published August 28, 2023 at 11:43am

Update August 28, 2023 at 1:53pm

  ಇನ್ನೋವಾ ಕಾರಿನಲ್ಲಿ ಬಂದ ಕಿಡಿಗೇಡಿಗಳು

  ಸಿನಿಮೀಯ ಶೈಲಿಯಲ್ಲಿ ಯುವತಿಯ ಅಪಹರಣ

  ಕೈ ಹಾಗೂ ಭುಜದ ಭಾಗಕ್ಕೆ ಚಾಕು ಇರಿದ ದುಷ್ಕರ್ಮಿಗಳು

ರಾಮನಗರ: ಹಾಡಹಗಲೇ ಯುವತಿಗೆ ಚಾಕು ಹಾಕಿ ಕಿಡ್ನಾಪ್ ಮಾಡಿದ ಘಟನೆ ರಾಮನಗರದ ಸರ್ಕಾರಿ ಮಹಿಳಾ ಕಾಲೇಜು ಬಳಿ ನಡೆದಿದೆ. ಕಿಡಿಗೇಡಿ ಇನ್ನೋವಾ ಕಾರಿನಲ್ಲಿ ಬಂದು ಸಿನಿಮೀಯ ಶೈಲಿಯಲ್ಲಿ ಯುವತಿಯನ್ನು ಅಪಹರಿಸಿದ್ದಾನೆ. ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಸಂಜನಾ(17) ಎಂಬಾಕೆಯನ್ನ ಕಿಡ್ನಾಪ್ ಮಾಡಿದ್ದಾನೆ.

ಕನಕಪುರದ ತಾಲೂಕಿನ ದಾಳಿಂಬ ಗ್ರಾಮದ GC ಸುಮಂತ್ (28) ಎಂಬಾತ ಈ ಕೃತ್ಯವೆಸಗಿದ್ದಾನೆ. ಕಾರಿನಲ್ಲಿ ಬಂದು ಮೊದಲು ಸಂಜನಾಳ ಕೈ ಹಾಗೂ ಭುಜದ ಭಾಗಕ್ಕೆ ಚಾಕು ಇರಿದ್ದಾನೆ. ಬಳಿಕ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಎಸ್ಕೇಪ್ ಆಗಿದ್ದಾನೆ.

ಚಾಕು ಇರಿದ ಬಳಿಕ ಸಂಜನಾಗೆ ವಿಪರೀತ ರಕ್ತಸ್ರಾವವಾಗಿದೆ. ಬಳಿಕ ಸುಮಂತ್ ಆಸ್ಪತ್ರೆಗೆ ಸೇರಿಸಿದ್ದಾನೆ. ರಾಮನಗರ ಟೌನ್ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾನೆ. ಸದ್ಯ ಯುವಕನ್ನು ಪೊಲೀಸರು ವಶಕ್ಕೆ ಪಡೆದಿಕೊಂಡಿದ್ದಾರೆ.

ಇನ್ನು ಸುಮಂತ್​ ಮತ್ತು ಸಂಜನಾ ಒಂದೆ ಊರಿನವರಾಗಿದ್ದು, ಆಕೆಯನ್ನು ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಇದೇ ಕಾರಣಕ್ಕೆ ಕಿಡ್ನಾಪ್​ ಮಾಡಿ ಚಾಕು ಇರಿದಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಸಂಜನಾ ರಾಮನಗರ ಖಾಸಗಿ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಇನ್ನು ಯುವತಿ ಕಿಡ್ನಾಪ್​​ ಆದ ಸ್ಥಳಕ್ಕೆ ರಾಮನಗರ ಟೌನ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧಿಸಿ ಪೊಲೀಸರು ಸ್ಥಳೀಯರಿಂದ ಮಾಹಿತಿ ಕಲೆಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಡಹಗಲೇ ಯುವತಿಗೆ ಚಾಕು ಇರಿದು ಕಿಡ್ನಾಪ್.. ಸಿನಿಮೀಯ ಶೈಲಿಯಲ್ಲಿ ಎತ್ತಾಕಿಕೊಂಡು ಹೋದ ಕಿಡಿಗೇಡಿಗಳು​

https://newsfirstlive.com/wp-content/uploads/2023/08/Kidnap.jpg

Load More