newsfirstkannada.com

ಟ್ಯೂಷನ್​ ಮುಗಿಸಿ ಬರುವಾಗ ಪಿಕಪ್​ ವಾಹನ ಡಿಕ್ಕಿ; 2 ಮಕ್ಕಳು ಸಾವು, ಮೂವರು ಗಂಭೀರ 

Share :

10-08-2023

    ಪಿಕಪ್​ ಚಾಲಕನ ಬೇಜವಾಬ್ದಾರಿತನ

    ಜವರಾಯನ ಅಟ್ಟಹಾಸಕ್ಕೆ ಇಬ್ಬರು ಮಕ್ಕಳು ಬಲಿ

    ಅಪಘಾತದ ಬಳಿಕ ಪಿಕಪ್​ ವಾಹನ ಎಸ್ಕೇಪ್​

ಅವರು ಏನೂ ಅರಿಯದ ಮುಗ್ದ ಮಕ್ಕಳು. ಪೋಷಕರ ಬಾಳಿಗೆ ಬೆಳಕಾಗಿ ಉಜ್ವಲ ಭವಿಷ್ಯವನ್ನ ಕಟ್ಟಿಕೊಳ್ಳಬೇಕಿದ್ದವರು. ಆದರೆ ಈ ಮಕ್ಕಳಿಗೆ ಏಕಾಏಕಿ ಎದುರಾದ ಯಮರಾಯ ಅವರ ಸುಂದರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾನೆ. ಇಬ್ಬರನ್ನ ಬಲಿ ಪಡೆದು, ಮೂವರನ್ನ ಸಾವು ಬದುಕಿನ ಮಧ್ಯೆ ಸೆಣಸಾಡುವಂತೆ ಮಾಡಿಬಿಟ್ಟಿದ್ದಾನೆ.

ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸೋದು ಸಹಜ, ಆದ್ರೆ ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆಯಾದ್ರೆ ಅದು ದುರಂತ. ಇಲ್ಲಾಗಿದ್ದು ಅದೇ ಪಿಕಪ್​ ಚಾಲಕನೋರ್ವನ ಬೇಜವಬ್ದಾರಿತನಕ್ಕೆ ಬಾಳಿ ಬದುಕಬೇಕಿದ್ದ ಕಂದಮ್ಮಗಳು ಬಾರದ ಲೋಕದತ್ತ ಹೆಜ್ಜೆಹಾಕಿವೆ. ಉಜ್ವಲ ಭವಿಷ್ಯಕ್ಕಾಗಿ ಟ್ಯೂಷನ್​ ಸೇರಿದ್ದ ಮಕ್ಕಳಿಗೆ ನಿನ್ನೆ ಟ್ಯೂಷನ್ ಮುಗಿಸಿ ಮನೆ ಸೇರುವ ಹೊತ್ತಲ್ಲಿ ಜಲವರಾಯನ ದರ್ಶನವಾಗಿದೆ.

ಮಕ್ಕಳ ಪಾಲಿಗೆ ಯಮನಾದ ಪಿಕಪ್​ ವಾಹನ

ರಾಮನಗರದ ಲಕ್ಷ್ಮಿಪುರ ಗ್ರಾಮದಲ್ಲಿ ನಿನ್ನೆ ಸಂಜೆ ಎಂದಿನಂತೆ ಈ 5 ಜನ ಮಕ್ಕಳು ಟ್ಯೂಷನ್ ಮುಗಿಸಿ ಮನೆಗೆ ತೆರಳ್ತಾ ಇದ್ರು. ಆದ್ರೆ ಈ ವೇಳೆ ಮಕ್ಕಳು ಸಾಗುತ್ತಿದ್ದ ರಸ್ತೆಯಲ್ಲೇ ಯಮನಂತೆ ಬಂದ ಪಿಕಪ್​ ವಾಹನವೊಂದು ಮಕ್ಕಳ ಮೇಲೆ ಎರಗಿತ್ತು. ಪಿಕಪ್ ವಾಹನದ ಅಟ್ಟಹಾಸಕ್ಕೆ ನಲುಗಿದ 5 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ರು.

 ರಾಮಕೃಷ್ಣ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ರೋಹಿತ್ ಎಂಬ 5 ವರ್ಷದ ಮಗುವನ್ನ ಆದಿಚುಂಚನಗಿರಿಯ ರಾಮಕೃಷ್ಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ರೋಹಿತ್​ ಸಾವನ್ನಪ್ಪಿದ್ದಾನೆ. ಇನ್ನೂ ಶಾಲಿನಿ ಎಂಬ 8 ವರ್ಷದ ಬಾಲಕಿಯನ್ನ ರಾಮನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆ ಮಗು ಸಹ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಗೌತಮಿ ಎಂಬ 12 ವರ್ಷದ ಬಾಲಕಿ ಸ್ಥಿತಿ ಸಹ ಗಂಭೀರವಾಗಿದ್ದು ಆಕೆಯನ್ನ ಬೆಂಗಳೂರಿನ ನಿಮ್ಹಾನ್ಸ್​​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಸುಚಿತ್ ಮತ್ತು ಲೇಖನ ಎಂಬ ಮಕ್ಕಳಿಗೆ ಆದಿಚುಂಚನಗಿರಿಯ ರಾಮಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಠಾಣೆಗೆ ಬಂದು ಶರಣಾದ ಚಾಲಕ ವರದರಾಜ್

ಇಂತದ್ದೊಂದು ಭೀಕರ ಅಪಘಾತಕ್ಕೆ ಕಾರಣವಾದ ಪಿಕಪ್​ ಚಾಲಕ ವರದರಾಜ್​ ಘಟನೆ ಬಳಿಕ ಸ್ಥಳದಿಂದ ವಾಹನ ಸಮೇತ ಎಸ್ಕೇಪ್ ಆಗಿದ್ದ. ಅಪಘಾತವಾದ ಕೆಲ ದೂರದಲ್ಲಿ ವಾಹನವನ್ನ ರಸ್ತೆ ಪಕ್ಕದಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದ. ಬಳಿಕ ಅಪಘಾತದ ತೀವ್ರತೆಯನ್ನ ಅರಿತ ಆತ ತಂದೆಯೊಂದಿಗೆ ರಾಮನಗರ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ. ಲಕ್ಷ್ಮಿಪುರ ಗ್ರಾಮದ ಪಕ್ಕದ ಊರಿನವನೇ ಆಗಿರೋ ಈ ವರದರಾಜ್​ ಸದ್ಯ ಇಬ್ಬರು ಮಕ್ಕಳ ದುರಂತ ಅಂತ್ಯಕ್ಕೆ ಕಾರಣವಾಗಿದ್ದಾನೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರಾಮನಗರ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಎಎಸ್ಪಿ ಸುರೇಶ್ ಘಟನೆ ಬಗ್ಗೆ ಮಾಹಿತಿ ಪಡೆದ್ರು. ಆಸ್ಪತ್ರೆಯಲ್ಲಿ ಮಕಳನ್ನ ಪರಿಸ್ಥಿಯನ್ನ ಕಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಮುದ್ದು ಮುದ್ದಾಗಿ ಮಾತನಾಡುತ್ತ ಮನೆಗೆ ಬೆಳಕಾಗಬೇಕಿದ್ದ ಮಕ್ಕಳು ರಕ್ತದ ಮಡುವಿನಲ್ಲಿ ಆಸ್ಪತ್ರೆ ಬೆಡ್​ ಮೇಲೆ ನರಳಾಡುವುದನ್ನ ಕಂಡು ಹೆತ್ತ ಕರುಳು ಕಣ್ಣೀರಿಟ್ಟಿತ್ತು.

ಒಟ್ನಲ್ಲಿ ಪಿಕಪ್​ ಚಾಲಕನೋರ್ವನ ಬೇಜಬ್ದಾರಿತನ ಏನೂ ಅರಿಯದ ಇಬ್ಬರು ಮಕ್ಕಳ ಬಾಳನ್ನ ಬಲಿಪಡೆದಿದೆ.. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಮೂವರು ಮಕ್ಕಳು ಸಾವನ್ನ ಗೆದ್ದು ಬರಲಿ ಅಂತ ಲಕ್ಷ್ಮಿಪುರ ಗ್ರಾಮದ ಜನತೆ ಪ್ರಾರ್ಥಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ಯೂಷನ್​ ಮುಗಿಸಿ ಬರುವಾಗ ಪಿಕಪ್​ ವಾಹನ ಡಿಕ್ಕಿ; 2 ಮಕ್ಕಳು ಸಾವು, ಮೂವರು ಗಂಭೀರ 

https://newsfirstlive.com/wp-content/uploads/2023/08/ramanagar-Accident.jpg

Load More