ರಾಮನಗರದಲ್ಲಿ ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸರ ಗನ್.. ಇಬ್ಬರು ಆರೋಪಿಗಳಿಗೆ ಬಿತ್ತು ಗುಂಡೇಟು

author-image
Gopal Kulkarni
Updated On
ರಾಮನಗರದಲ್ಲಿ ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸರ ಗನ್.. ಇಬ್ಬರು ಆರೋಪಿಗಳಿಗೆ ಬಿತ್ತು ಗುಂಡೇಟು
Advertisment
  • ರಾಮನಗರ ಜಿಲ್ಲೆಯಲ್ಲಿ ಆರೋಪಿಗಳ ಮೇಲೆ ಘರ್ಜಿಸಿದ ಪೊಲೀಸರ ಗನ್
  • ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗಳಿಗೆ ಬಿತ್ತು ಗುಂಡೇಟು
  • ಕೆಲವು ದಿನಗಳ ಹಿಂದೆ ಓರ್ವನ ಕೈ ಕತ್ತರಿಸಿದ ಎಸ್ಕೇಪ್ ಆಗಿದ್ದ ನೀಚರು

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಇಂದು ಬೆಳ್ಳಂ ಬೆಳಗ್ಗೆ ಪೊಲೀಸರ ಗನ್ ಘರ್ಜಿಸಿದೆ. ಮೂರು ದಿನಗಳ ಹಿಂದೆ, ಕನಕಪುರ ತಾಲೂಕಿನ ಮಳಗಾಳು ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿ ಓರ್ವನ ಕೈ ಕತ್ತರಿಸಿ ಎಸ್ಕೇಪ್ ಆಗಿದ್ದರು ಆರೋಪಿಗಳು. ಅವರನ್ನು ಕೂಡಲೇ ಬಂಧಿಸಬೇಕು ಎಂದು ದಲಿತ ಸಂಘಟನೆಗಳು ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡಿದ್ದರು. ಹೀಗಾಗಿ ಹರ್ಷ ಅಲಿಯಾಸ್ ಕೈಮ, ಕರಣೇಶ್ ಅಲಿಯಾಸ್ ಎಂಬ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಇಂದು ಬೆಳಗ್ಗೆ ಆರೋಪಿಗಳ ಹೆಡೆಮುರಿ ಕಟ್ಟಲು ಅಂತ ಕನಕಪುರ ಟೌನ್​ನ ಸಿಪಿಐ ಮಿಥುನ್ ಶಿಲ್ಪಿ ನೇತೃತ್ವದ ತಂಡ ಹೋಗಿತ್ತು.

ಇದನ್ನೂ ಓದಿ:ದರ್ಶನ್​ರನ್ನ ಜೈಲಿಗೆ ಹಾಕಿದ ಕರ್ನಾಟಕ ಪೊಲೀಸರಿಗೆ ಅಭಿನಂದನೆ.. ಕಮಿಷನರ್​ಗೆ ಸ್ಪೆಷಲ್ ಥ್ಯಾಂಕ್ಸ್

publive-image

ಕಗ್ಗಲಿಪುರದ ವ್ಯಾಲಿ ಸ್ಕೂಲ್ ಬಳಿ ಆರೋಪಿಗಳನ್ನು ಬಂಧಿಸುವ ವೇಳೆ ಹರ್ಷ ಹಾಗೂ ಕರುಣೇಶ್ ಪೊಲೀಸರ ಮೇಲೆಯೇ ಹಲ್ಲೆಗೆ ಮುಮದಾಗಿದ್ದಾರೆ. ಈ ವೇಳೆ ಆರೋಪಿಗಳ ಮೇಲೆ ಫೈರ್ ಮಾಡಿದ್ದಾರೆ. ಫೈರಿಂಗ್ ವೇಳೆ ಪೊಲೀಸ್ ಸಿಬ್ಬಂದಿಗಳಾದ ರಾಜಶೇಖರ್, ಶಿವಕುಮಾರ್​ಗೂ ಕೂಡ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಹೇಳಿರುವ ಪ್ರಕಾರ ಕೊಲೆ ಆರೋಪವನ್ನು ಎದುರಿಸುತ್ತಿರುವ ಹರ್ಷ ಹಾಗೂ ಕರುಣೇಶ್ ಮೇಲೆ ಐದಕ್ಕೂ ಹೆಚ್ಚು ಕೇಸ್​ಗಳಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment