newsfirstkannada.com

ರಾಮನಗರ ವಕೀಲರು, ಪೊಲೀಸರ ಸಂಘರ್ಷಕ್ಕೆ ಹೊಸ ತಿರುವು; D.K.ಬ್ರದರ್ಸ್​ ವಿರುದ್ಧ ಭಾರೀ ಆಕ್ರೋಶ..!

Share :

Published February 20, 2024 at 8:52am

    ಜ್ಞಾನವಾಪಿ ತೀರ್ಪು ನೀಡಿದ್ದ ನ್ಯಾಯಾಧೀಶರ ನಿಂದಿಸಿದ್ಕೆ ಶುರುವಾದ ಕೇಸ್

    ಪೊಲೀಸರು vs ವಕೀಲರ ಕೇಸ್​ನಲ್ಲಿ ಜೆಡಿಎಸ್​-ಬಿಜೆಪಿ ದೋಸ್ತಿ ಎಂಟ್ರಿ

    ಮಿಡ್​ನೈಟ್ ಪ್ರತಿಭಟನೆ ವೇಳೆ ಕುಮಾರಸ್ವಾಮಿ, ಅಶೋಕ್ ಭೇಟಿ

ಕೋರ್ಟ್​ನಿಂದ ತೀರ್ಪು ಬಂದಿದೆ ಅಂದ್ರೆ ಅದನ್ನ ಯಾರೇ ಆದ್ರೂ ಸ್ವಾಗತಿಸಲೇಬೇಕು. ನ್ಯಾಯದೇವತೆಯ ತೀರ್ಪಿಗೆ ತಲೆಬಾಗಲೇಬೇಕು. ಆದ್ರೆ ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಕೊಟ್ಟ ಜಡ್ಜ್​ಗೆ ವಕೀಲರಿಂದಲೇ ಅವಾಚ್ಯವಾಗಿ ನಿಂದಿಸಲಾಗಿದೆ. ಇದು ರಾಮನಗರದಲ್ಲಿ ಪೊಲೀಸರ ಹಾಗೂ ವಕೀಲರ ಮಧ್ಯೆ ಸಮರಕ್ಕೆ ನಾಂದಿ ಹಾಡಿದೆ.

40 ವಕೀಲರ ವಿರುದ್ಧ ಸುಳ್ಳು ಕೇಸ್ ಹಾಕಿದ್ದಕ್ಕೆ ವಕೀಲರ ಆಕ್ರೋಶ
40 ವಕೀಲರ ವಿರುದ್ಧ ಎಫ್​ಐಆರ್ ದಾಖಲಿಸಿರುವ ಐಜೂರು ಠಾಣೆಯ ಪಿಎಸ್​​ಐ ತನ್ವೀರ್ ಅಮಾನತಿಗೆ ಆಗ್ರಹಿಸಿ ವಕೀಲರು ತಡರಾತ್ರಿವರೆಗೂ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಕಚೇರಿಗೆ ಮುತ್ತಿಗೆ ಹಾಕಿ ದಿಗ್ಬಂಧನ ಹಾಕಿದ್ದಾರೆ. ಗೇಟ್​ ಎದುರು ಕುಳಿತು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ತನಿಖೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟರೂ ಕೇಳದೇ ಮಂಡ್ಯ, ಮೈಸೂರು ಸೇರಿ ಹಲವೆಡೆಯಿಂದ ರಾಮನಗರಕ್ಕೆ ಬಂದ ವಕೀಲರು ಹೋರಾಟ ನಡೆಸಿದ್ದಾರೆ. ವಕೀಲರು ಪಿಎಸ್​​ಐ ತನ್ವೀರ್​ನ್ನ ಅಮಾನತು ಮಾಡದಿದ್ರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕೆ ರೊಚ್ಚಿಗೆದ್ದು ವಕೀಲರು ತಡರಾತ್ರಿ ಹೋರಾಟ ಮಾಡಿದ್ದಾರೆ. ಸ್ಥಳೀಯ ಶಾಸಕರ ಒತ್ತಡದಿಂದ ಜಿಲ್ಲಾಡಳಿತ ಹೀಗೆ ಮಾಡುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡಿದ ಜಡ್ಜ್​ಗೆ ನಿಂದನೆ
ಇಷ್ಟೆಲ್ಲ ಗದ್ದಲ ಗಲಾಟೆಗೆ ಕಾರಣವಾಗಿದ್ದು ವಕೀಲ ಹಾಗೂ SDPI ರಾಮನಗರ ಜಿಲ್ಲಾ ಉಪಾಧ್ಯಕ್ಷ ಚಾನ್ ಪಾಷ ಮಾಡಿದ ಆ ಒಂದು ಪೋಸ್ಟ್​.. ಜ್ಞಾನವಾಪಿ ಮಸೀದಿ ಕೇಸ್​​ನಲ್ಲಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿದ್ದಕ್ಕೆ ಚಾನ್ ಪಾಷ, ನ್ಯಾಯಾಧೀಶರನ್ನೇ ಅವಾಚ್ಯವಾಗಿ ನಿಂದಿಸಿ ಫೇಸ್​​ಬುಕ್​​ನಲ್ಲಿ ಪೋಸ್ಟ್​ ಹಾಕಿದ್ದಾರೆ. ಜಡ್ಜ್ ನಿವೃತ್ತಿಯಾಗುವ ಒಂದು ದಿನ ಮುನ್ನ ತೀರ್ಪು ನೀಡಿದ್ದಾನೆ. RSS, BJP ಎಂಜಲು ಕಾಸಿಗೆ ಕೈ ಹಾಕಿ ಈ ತೀರ್ಪು ನೀಡಿದ್ದಾನೆ ಅಂತ ಅವಾಚ್ಯ ಶಬ್ಧಗಳನ್ನು ಬಳಸಿ ಪೋಸ್ಟ್ ಹಾಕಿದ್ದ. ಈ ಬಗ್ಗೆ ರಾಮನಗರ ನಗರ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಫೆಬ್ರವರಿ 3ರಂದು ಚಾನ್ ಪಾಷ ನಾಪತ್ತೆಯಾಗಿದ್ದ. ಬಳಿಕ ಪಾಷನನ್ನು ಪೊಲೀಸರು ಬಂಧಿಸಿದ್ದರು. ಇಷ್ಟಕ್ಕೆ ಸುಮ್ಮನಾಗದೆ ಆ ಒಂದು ಕೇಸ್ ಹಾಕಿದ್ದು ಅಲ್ಲೋಲ-ಕಲ್ಲೋಲವನ್ನೇ ಎಬ್ಬಿಸಿದೆ.

ಚಾನ್ ಪಾಷ ಪರ ವ್ಯಕ್ತಿಯೊಬ್ಬನಿಂದ ಸುಳ್ಳು ದೂರು ದಾಖಲಾಗಿತ್ತು. ದೂರನ್ನು ಆಧರಿಸಿ 40 ವಕೀಲರ ವಿರುದ್ಧ ರಾಮನಗರ ಠಾಣೆ ಪಿಎಸ್​​ಐ ತನ್ವೀರ್​ ಹುಸೇನ್​ ಎಫ್​ಐಆರ್ ಹಾಕಿದ್ರು. ಈ ಎಫ್​ಐಆರ್​ನ ವಾಪಸ್​ ತೆಗೆದುಕೊಳ್ಳುವಂತೆ ಹೀಗೆ ವಕೀಲರು ಪ್ರತಿಭಟನೆ ನಡೆಸಿದ್ದಾರೆ. ಮಾತ್ರವಲ್ಲದೇ ಪಿಎಸ್​ಐನ್ನ ಅಮಾನತು ಮಾಡುವಂತೆ ವಕೀಲರು ರೊಚ್ಚಿಗೆದ್ದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಹೆಚ್​ಡಿಕೆ, ಆರ್.ಅಶೋಕ್ ಭೇಟಿ
ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್​ ಅಶೋಕ್ ಭೇಟಿ ನೀಡಿದ್ರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಚಾನ್ ಪಾಷಾ ಎಂಬ ವ್ಯಕ್ತಿ ನ್ಯಾಯಾಂಗ ನಿಂದನೆ ಪೋಸ್ಟ್ ಹಾಕಿದ್ದ. ಆತನ ಮೇಲೆ ಯಾವ ಸೆಕ್ಷನ್ ಹಾಕಿದ್ರಿ. ಇದರಲ್ಲಿ ಸ್ಥಳೀಯ ಶಾಸಕನ ಕೈವಾಡ ಏನು ಎಂಬುದು ನನಗೆ ಗೊತ್ತು. ಈ ವಿಚಾರದಲ್ಲಿ ಕೇವಲ ಪಿಎಸ್ಐ ಅಲ್ಲ, ಎಸ್ಪಿಯನ್ನೇ ಸಸ್ಪೆಂಡ್ ಮಾಡಬೇಕು ಅಂತ ಆಗ್ರಹಿಸಿದ್ದಾರೆ. ಮಾತ್ರವಲ್ಲದೇ ಆರ್​ ಅಶೋಕ್ ಕೂಡ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ.

ಒಟ್ಟಾರೆ ಜ್ಞಾನವಾಪಿ ಬಗ್ಗೆ ತೀರ್ಪು ಕೊಟ್ಟ ಜಡ್ಜ್ ಬಗ್ಗೆ ಓರ್ವ ವಕೀಲರೇ ಅವಾಚ್ಯವಾಗಿ ನಿಂದಿಸಿದ್ದು ದುರಂತ. ವಕೀಲರೇ ನ್ಯಾಯಾಧೀಶರಿಗೆ ಗೌರವ ಕೊಡದಿದ್ರೆ ಜನಸಾಮಾನ್ಯರು ಹೇಗೆ ಕೊಡ್ತಾರೆ. ಈ ಬಗ್ಗೆ ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮನಗರ ವಕೀಲರು, ಪೊಲೀಸರ ಸಂಘರ್ಷಕ್ಕೆ ಹೊಸ ತಿರುವು; D.K.ಬ್ರದರ್ಸ್​ ವಿರುದ್ಧ ಭಾರೀ ಆಕ್ರೋಶ..!

https://newsfirstlive.com/wp-content/uploads/2024/02/DK-BROTHERS.jpg

Load More