newsfirstkannada.com

ರಂಭಾಪುರಿ ಜಗದ್ಗುರು ಕಾರ್​ಗೆ ಚಪ್ಪಲಿ ಎಸೆತ; 59 ಜನರ ಮೇಲೆ ದೂರು ದಾಖಲು

Share :

Published February 19, 2024 at 8:50am

Update February 19, 2024 at 9:41am

  ಗುರುಲಿಂಗೇಶ್ವರ ಮಠದ ಉತ್ತರಾಧಿಕಾರಿ ವಿವಾದ ಪ್ರಕರಣ

  ಕಲಾದಗಿ ಮಾರ್ಗವಾಗಿ ಸಾಗುತ್ತಿದ್ದ ರಂಭಾಪುರಿ ಜಗದ್ಗುರು

  ಕಾರ್​ಗೆ ಮುತ್ತಿಗೆ ಹಾಕಿ ಚಪ್ಪಲಿ ಎಸೆದ ಜನರು

ಬಾಗಲಕೋಟೆ: ಕಲಾದಗಿ ಗ್ರಾಮದ ಸಾಯಿ ಗುರುಲಿಂಗೇಶ್ವರ ಮಠದ ಉತ್ತರಾಧಿಕಾರಿ ವಿವಾದ ಪ್ರಕರಣ ಸಂಬಂಧ, ಕಲಾದಗಿ ಗ್ರಾಮದ 59 ಜನರ ಮೇಲೆ ಕೇಸ್ ದಾಖಲಾಗಿದೆ.

ನಿನ್ನೆ ರಂಭಾಪುರಿ ಜಗದ್ಗುರುಗಳು ಕಲಾದಗಿ ಮಾರ್ಗವಾಗಿ ಉದಗಟ್ಟಿಗೆ ತೆರಳುವ ವೇಳೆ ಕಾರ್​ಗೆ ಮುತ್ತಿಗೆ ಹಾಕಿ ಚಪ್ಪಲಿ ಎಸೆದ ಘಟನೆ ಜರುಗಿತ್ತು. ಇದರ ಹಿನ್ನಲೆ ಕಲಾದಗಿ ಪೊಲೀಸ್​ ಠಾಣೆಯಲ್ಲಿ 59 ಜನರ ಮೇಲೆ ದೂರು ದಾಖಲಿಸಲಾಗಿದೆ. ಕಲಂ 143,147,341, 355,511,149 ನಡಿ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ವಿವಾದ?

ಕಳೆದ 2015 ರಲ್ಲಿ ಕಲಾದಗಿಯ ಶ್ರೀ ಗುರುಲಿಂಗೇಶ್ವರ ಮಠದ ಅಂದಿನ ಪೀಠಾಧಿಪತಿ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಲಿಂಗೈಕ್ಯರಾದ ಬಳಿಕ, ನೂತನ ಪೀಠಾಧಿಪತಿ ನೇಮಕ ವಿವಾದ ಭುಗಿಲೇಳುತ್ತೆ. ಗ್ರಾಮಸ್ಥರು ವಿದ್ವತ್ ಇರುವಂತಹ ಸ್ವಾಮೀಜಿಯವರನ್ನ ಪೀಠಾಧಿಪತಿಯನ್ನಾಗಿ ನೇಮಿಸಲು ಪಟ್ಟು ಹಿಡಿತಾರೆ. ಆದ್ರೆ ರಂಭಾಪುರಿ ಜಗದ್ಗುರುಗಳು ಲಿಂಗೈಕ್ಯರಾಗಿದ್ದ ಶ್ರೀ ಚಂದ್ರಶೇಖರ್ ಸ್ವಾಮೀಜಿಯವರ ಸಂಬಂಧಿ(ತಂಗಿಯ ಮಗ) ಕೆ.ಎಂ.ಗಂಗಾಧರ ಅವರನ್ನ ಪೀಠಾಧಿಪತಿಯನ್ನಾಗಿ ನೇಮಿಸ್ತಾರೆ. ಹೀಗಾಗಿ ವಿವಾದ ದೊಡ್ಡ ಮಟ್ಟಕ್ಕೆ ತಿರುಗಿ ಗದ್ದಲ ಗಲಾಟೆ ಮಾರಾಮಾರಿಗಳು ನಡೆಯುತ್ತವೆ.

ಇದಾದ ಬಳಿಕ ಮಠದ ಪೀಠಾಧಿಪತಿ ವಿವಾದ ನ್ಯಾಯಲಯದ ಮೆಟ್ಟಿಲೇರುತ್ತೆ. ಇನ್ನೂ ಕೂಡ ವಿವಾದ ಜಿಲ್ಲಾ ನ್ಯಾಯಾಲಯದಲ್ಲಿದೆ. ಹೀಗಿರುವಾಗ ಸದ್ಯದ ಪೀಠಾಧಿಪತಿ ಕೆ.ಎಂ.ಗಂಗಾಧರ ಅವರು ಮಠವನ್ನ ದುರಸ್ತಿ ಮಾಡಿಸುವುದಿ,ಮಠಕ್ಕೆ ಸಂಭಂಧಿಸಿದ ಹೊಲದಲ್ಲಿ ಉಳುಮೆ ಮಾಡಿಸುವುದು ಹಾಗೂ ಇತರೇ ಚಟುವಟಿಕೆಗಳನ್ನ ನಡೆಸುತ್ತಿರುವುದರಿಂದ ಗ್ರಾಮಸ್ಥರು ತೀರ್ಪು ಬರುವ ವರೆಗೆ ಮಠದ ಆಸ್ತಿ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ರಂಭಾಪುರಿ ಜಗದ್ಗುರುಗಳಯಲು ಕಲಾದಗಿ ಮಾರ್ಗವಾಗಿ ಉದಗಟ್ಟಿಗೆ ತೆರಳುವ ವೇಳೆ ಚಪ್ಪಲಿ ಎಸೆತದ ಘಟನೆ ಜರುಗಿದೆ.ಇನ್ನು ಬಾಗಲಕೋಟೆ ನಗರದಲ್ಲಿ ಮಾತನಾಡಿರುವ ರಂಭಾಪುರಿ ಜಗದ್ಗುರುಗಳು ನ್ಯಾಯಾಲಯದಿಂದ ಬರುವ ತೀರ್ಪಿಗೆ ಬದ್ಧನಾಗಿರುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಂಭಾಪುರಿ ಜಗದ್ಗುರು ಕಾರ್​ಗೆ ಚಪ್ಪಲಿ ಎಸೆತ; 59 ಜನರ ಮೇಲೆ ದೂರು ದಾಖಲು

https://newsfirstlive.com/wp-content/uploads/2024/02/Rambapuri-Jagadguru.jpg

Load More