/newsfirstlive-kannada/media/post_attachments/wp-content/uploads/2025/02/RAMADEV-BABA-1.jpg)
ಯೋಗ ಗುರು, ಪಜಂಲಜಿಯ ಸಂಸ್ಥಾಪಕ ರಾಮದೇವ್ ಬಾಬಾ ಯುಎಸ್ನ ಕೋಟ್ಯಾಧೀಪತಿ ಬರ್ಯಾನ್ ಜಾನ್ಸನ್ ಅವರನ್ನ ಎಕ್ಸ್ ಖಾತೆಯಲ್ಲಿ ಬ್ಲಾಕ್ ಮಾಡಿದ್ದಾರೆ. ಉದ್ಯಮಿ ವಯಸ್ಸು ಹಿಮ್ಮುಖ ಚಲನೆಯ ಬಗ್ಗೆ ಹಾಗೂ ಭಾರತದಲ್ಲಿ ವಾಯುಮಾಲಿನ್ಯದ ಬಗ್ಗೆ ಮಾತನಾಡಿದ್ದಕ್ಕೆ ಬ್ಲಾಕ್ ಮಾಡಲಾಗಿದೆ. ಈ ಒಂದು ವಾಗ್ವಾದಗಳು ಶುರುವಾಗಿದ್ದು ರಾಮದೇವ್ ಬಾಬಾ ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿದ ಒಂದು ವಿಡಿಯೋದಿಂದಾಗಿ. ರಾಮದೇವ ಬಾಬಾ ಒಂದು ಕಡೆ ಕುದುರೆ ಓಡುತ್ತಿದ್ದರೆ ಮತ್ತೊಂದು ಕಡೆ ಅದರ ಜೊತೆಗೆ ಸ್ಪರ್ಧೆಗೆ ಬಿದ್ದವರಂತೆ ತಾವು ಕೂಡ ಅದಕ್ಕೆ ಸಮನಾಗಿ ಓಡುತ್ತಿದ್ದರು. ಈ ಒಂದು ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ರಾಮದೇವ್ ಬಾಬಾ ಪೋಸ್ಟ್ ಮಾಡಿಕೊಂಡಿದ್ದಾರೆ.
घोड़े की तरह तेज़ दौड़ने की ताक़त, Strong Immunity, Anti-aging और Power चाहिए तो Swarn Shilajit व Immunogrit Gold खाइए#immunity#antiaging#shilajitpic.twitter.com/VGzLrFt776
— स्वामी रामदेव (@yogrishiramdev)
घोड़े की तरह तेज़ दौड़ने की ताक़त, Strong Immunity, Anti-aging और Power चाहिए तो Swarn Shilajit व Immunogrit Gold खाइए#immunity#antiaging#shilajitpic.twitter.com/VGzLrFt776
— स्वामी रामदेव (@yogrishiramdev) February 18, 2025
">February 18, 2025
ಅದು ಮಾತ್ರವಲ್ಲಿ ಸ್ಟಾಂಗ್ ಇಮ್ಯುನಿಟಿ ಹಾಗೂ ಆ್ಯಂಟಿ ಏಜಿಂಗ್ ಮತ್ತು ಶಕ್ತಿ ಬೇಕಾದಲ್ಲಿ ಸ್ವರ್ಣ ಶೀಲಾಜಿತ್ ಇಮ್ಮುನುಗ್ರಿತ್ ಗೋಲ್ಡ್ನ್ನು ಸೇವಿಸಿ ಎಂದು ಬರೆದುಕೊಂಡಿದ್ದರು. ಈ ಎರಡು ಉತ್ಪನ್ನಗಳು ಪತಂಜಲಿ ಆಯುರ್ವೇದ ಸಂಸ್ಥೆಯಿಂದಲೇ ಉತ್ಪಾದನೆಯಾಗುತ್ತವೆ. ಇದನ್ನು ರಾಮದೇವ ಬಾಬಾ ಹಾಗೂ ಬಾಲಕೃಷ್ಣ ಸೇರಿ 2006ರಲ್ಲಿ ಆರಂಭಿಸಿದರು.
ಇದನ್ನೂ ಓದಿ:ನಾಗಪುರವನ್ನೇ ಕಾಶ್ಮೀರವನ್ನಾಗಿ ಬದಲಾಯಿಸಿದ ದಂಪತಿ; ಕೇಸರಿ ಬೆಳೆದು ವರ್ಷಕ್ಕೆ ಗಳಿಸಿದ್ದು ಎಷ್ಟು ಲಕ್ಷ?
ಈ ಒಂದು ಪೋಸ್ಟ್ಗೆ ಜಾನ್ಸನ್ ಪ್ರತಿಕ್ರಿಯಿಸಿದ್ದರು. ವಯಸ್ಸು ಹಿಮ್ಮುಖ ಚಲನೆಯ ವಿಚಾರದಲ್ಲಿ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿರುವ ಜಾನ್ಸನ್ ರಾಮದೇವ್ ಬಾಬಾರನ್ನು ಪ್ರಶ್ನಿಸಿದ್ದಾರೆ. ಹರಿದ್ವಾರದಲ್ಲಿ ಕಳಪೆ ವಾಯುಮಾಲಿನ್ಯವಿದೆ. ಈ ರಾಜ್ಯದಲ್ಲಿ ಉಸಿರಾಡುವವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ. ಹರಿದ್ವಾರದಲ್ಲಿ ಸದ್ಯದ ವಾಯುವಿನ ಗುಣಮಟ್ಟ ಸದ್ಯ 36 µg/m³ ರಷ್ಟು ಇದೆ ಇದು 1.6 ಸಿಗರೇಟ್ಗೆ ಸಮ ಎಂದು ಜಾನ್ಸನ್ ಪ್ರತಿಕ್ರಿಯಿಸಿದ್ದಾರೆ.
I replied with this comment and he hid it and blocked me:
Air quality in Haridwar right now is
PM₂.₅ 36 µg/m³ which is equal to smoking 1.6 cigarettes a day. This raises risks of heart disease by 40–50%, lung cancer by 3x, Chronic Obstructive Pulmonary Disease, and early death… pic.twitter.com/z99RZDjXar— Bryan Johnson /dd (@bryan_johnson)
I replied with this comment and he hid it and blocked me:
Air quality in Haridwar right now is
PM₂.₅ 36 µg/m³ which is equal to smoking 1.6 cigarettes a day. This raises risks of heart disease by 40–50%, lung cancer by 3x, Chronic Obstructive Pulmonary Disease, and early death… pic.twitter.com/z99RZDjXar— Bryan Johnson (@bryan_johnson) February 19, 2025
">February 19, 2025
ಇದರ ಜೊತೆಗೆ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಶೇಕಡಾ 40 ರಿಂದ 50 ರಷ್ಟು ಹೆಚ್ಚುತ್ತಿವೆ. ಲಂಗ್ಸ್ ಕ್ಯಾನ್ಸರ್ ಅಪಾಯ ಮೂರು ಪಟ್ಟು ಹೆಚ್ಚುತ್ತಿದೆ ಸಿಒಪಿಡಿ ಮತ್ತು ಅಕಾಲಿಕ ಮರಣಗಳು ಸಂಭವಿಸುತ್ತಿವೆ. ಪ್ರತಿಯೊಬ್ಬರ ಆಯಸ್ಸು 5 ರಿಂದ 7 ವರ್ಷದಷ್ಟು ಕಡಿಮೆಯಾಗುತ್ತಿದೆ ಎಂದು ಬರೆದಿದ್ದರು
ಜಾನ್ಸನ್ ಪ್ರತಿಕ್ರಿಯಿಸಿದ ನಿಮಿಷದ ಬೆನ್ನಲ್ಲೇ ರಾಮದೇವ್ ಬಾಬಾ ಎಕ್ಸ್ ಖಾತೆ ಅವರನ್ನು ಬ್ಲಾಕ್ ಮಾಡಿದೆ. ಅದರ ಸ್ಕ್ರೀನ್ ಶಾಟ್ನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ ಜಾನ್ಸ್ನ್ ತಾವು ಕೇಳಿದ ಪ್ರಶ್ನೆಗಳನ್ನು ಅಲ್ಲಿ ಉಲ್ಲೇಖಿಸಿ ನನ್ನನ್ನು ಬ್ಲಾಕ್ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಚೀನಾ-ಭಾರತ ಅಲ್ಲವೇ ಅಲ್ಲ! ಜಗತ್ತಿನಲ್ಲೇ ಅತ್ಯಂತ ಚಿಕ್ಕ ರಾಷ್ಟ್ರಗೀತೆ ಹೊಂದಿರುವ ರಾಷ್ಟ್ರ ಯಾವುದು?
ಜಾನ್ಸನ್ ಇದೇ ಮೊದಲ ಬಾರಿ ಭಾರತದ ವಾಯುಮಾಲಿನ್ಯದ ಬಗ್ಗೆ ಪ್ರಶ್ನಿಸಿಲ್ಲ. ನಿಖಿಲ್ ಕಾಮತ್ ಪೊಡ್ಕಾಸ್ಟ್ ಮಿಡ್ವೇನಲ್ಲಿ ಮಾತನಾಡಿದಾಗ ಅವರು ಮುಂಬೈ ಹಾಗೂ ಬೆಂಗಳೂರಿನ ಶುದ್ಧ ಗಾಳಿಯ ಗುಣಮಟ್ಟದ ಬಗ್ಗೆ ಮಾತನಾಡಿದ್ದರು. ಈಗ ಯೋಗ ಗುರು ರಾಮದೇವ್ ಬಾಬಾಗೆ ಈ ಪ್ರಶ್ನೆ ಮಾಡಿದ್ದಕ್ಕೆ ರಾಮದೇವ್ ಬಾಬಾ ಅವರನ್ನು ಎಕ್ಸ್ ಖಾತೆಯಲ್ಲಿ ಬ್ಲಾಕ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ