/newsfirstlive-kannada/media/post_attachments/wp-content/uploads/2024/10/RAMESH-JARKIHOLI-HOUSE.jpg)
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಬೆಂಗಳೂರಿನ ಸದಾಶಿವನಗರದಲ್ಲಿ ಖರೀದಿಸಿದ್ದ ಭವ್ಯ ಬಂಗಲೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಖರೀದಿಸಿದ್ದ ಭವ್ಯ ಭಾಗ್ಯಲಕ್ಷ್ಮಿ ಬಂಗಲೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂಬ Exclusive ಮಾಹಿತಿ ನ್ಯೂಸ್‌ಫಸ್ಟ್‌ಗೆ ಲಭ್ಯವಾಗಿದೆ. ಹಾಗಾದ್ರೆ ಪ್ರೈಮ್ ಏರಿಯಾದಲ್ಲಿರುವ ಬಂಗಲೆಯನ್ನು ಮಾರಾಟ ಮಾಡುತ್ತಿರುವುದೇಕೆ?
ಸಾಹುಕಾರ, ಬೆಳಗಾವಿಯ ಗೋಕಾಕ್ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಾ 2-3 ದಶಕಗಳಿಂದಲೂ ರಾಜಕಾರಣದಲ್ಲಿ ಗುರುತಿಸಿಕೊಂಡಿರೋರು. 2019 ರಲ್ಲಿ ಸಹೋದರರನ್ನೇ ಮಣಿಸಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ರು. ಆದ್ರೆ ಇಷ್ಟೆಲ್ಲ ಪ್ರಸಿದ್ಧಿ, ಪ್ರಬಲ ಖಾತೆ ಹೊಂದಿದ್ದ ರಮೇಶ್ ಜಾರಕಿಹೊಳಿ ಜಸ್ಟ್​ 3 ವರ್ಷಗಳಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಇಷ್ಟಕ್ಕೆಲ್ಲ ಕಾರಣವಾದ ವಸ್ತುವಿನಿಂದ ದೂರವಾಗಲು ಸಿದ್ಧವಾಗಿದ್ದಾರೆ.
ರಮೇಶ್ ಜಾರಕಿಹೊಳಿ ಅಂದು ಸಚಿವರಾಗಿದ್ದವರು ಇಂದು ಶಾಸಕರಾಗಿ ಹಿಂಬಡ್ತಿ ಪಡೆದಿದ್ದಾರೆ. 2019ರಲ್ಲಿ ಸಚಿವರಾಗಿದ್ದಾಗ ಬೆಂಗಳೂರಿನ ಸದಾಶಿವನಗರದಲ್ಲಿ ಬರೋಬ್ಬರಿ 37 ಕೋಟಿ ರೂಪಾಯಿಗೆ ಭವ್ಯ ಬಂಗಲೆ ಖರೀದಿಸಿದ್ರು. ಒಂದು ಕಡೆ ಡಿಕೆಶಿ ನಿವಾಸ ಹಿಂದಿನ ರಸ್ತೆಯಲ್ಲಿದ್ರೇ ಇನ್ನೊಂದೆಡೆ ಮುಂಭಾಗವೇ ಅಣ್ಣಾವ್ರ ನಿವಾಸ. ಇಂತ ಪ್ರೈಮ್ ಲೋಕೇಷನ್‌ನಲ್ಲಿ ಬಂಗಲೆ ಖರೀದಿಸಿದ್ದ ಸಾಹುಕಾರ ಅದ್ದೂರಿಯಾಗಿ ಗೃಹಪ್ರವೇಶ ಮಾಡಿದ್ದಲ್ಲದೆ ಅಲ್ಲಿಯೇ ವಾಸ್ತವ್ಯ ಹೂಡಲಾರಂಭಿಸಿದ್ರು. ಅಲ್ಲೇ ಅವರಿಗೆ ಕಂಟಕ ಶುರುವಾಗಿತ್ತಂತೆ.
/newsfirstlive-kannada/media/post_attachments/wp-content/uploads/2024/10/RAMESH-JARKIHOLI-HOUSE-1.jpg)
ಮನೆ ಮಾರಾಟಕ್ಕಿಟ್ಟ ಸಾಹುಕಾರ!
ಅದ್ಯಾವಾಗ ರಮೇಶ್ ಜಾರಕಿಹೊಳಿ ಈ ಭವ್ಯ ಬಂಗಲೆ ಖರೀದಿಸಿ ಅಲ್ಲಿಯೇ ವಾಸ ಮಾಡಲು ಶುರು ಮಾಡಿದ್ರೋ, ಅಲ್ಲಿಂದಾಚೆಗೆ ಅವರ ರಾಜಕಾರಣದ ಅವನತಿ ಆರಂಭವಾಯಿತು ಅನ್ನೋದು ಜ್ಯೋತಿಷ್ಯ ಶಾಸ್ತ್ರಜ್ಞರ ಅಭಿಮತ. ಆ ನಿವಾಸಕ್ಕೆ ಕಾಲಿಟ್ಟ ಘಳಿಗೆಯೋ ಏನೋ ಕೆಟ್ಟ ಕಾಲ ಶುರುವಾಗಿ ಬಿಡ್ತು. ಹನಿಟ್ರ್ಯಾಪ್​ಗೆ ಒಳಗಾಗಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದು ಮಾತ್ರವಲ್ಲದೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೇಸ್​ ಎದುರಿಸಲು ಆರಂಭಿಸಿದ್ರು. ಇಷ್ಟೆಲ್ಲಾ ಆಗಿದ್ದು ಈ ಮನೆಗೆ ಕಾಲಿಟ್ಟ ಮೇಲೆ ಎಂಬುದನ್ನು ಜ್ಯೋತಿಷ್ಯದ ಮೂಲಕ ಅರಿತ ಜಾರಕಿಹೊಳಿ ತಮ್ಮ ಭವ್ಯ ಬಂಗಲೆ ಮಾರಾಟಕ್ಕಿಟ್ಟಿದ್ದಾರೆ ಎಂಬ Exclusive ಮಾಹಿತಿ ನ್ಯೂಸ್‌ಫಸ್ಟ್‌ಗೆ ಲಭ್ಯವಾಗಿದೆ.
/newsfirstlive-kannada/media/post_attachments/wp-content/uploads/2024/05/RAMESH_JARAKIHOLI.jpg)
ಸದ್ಯ ಕುಟುಂಬಸ್ಥರು ಮನೆ ಮಾರಿಬಿಡೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಜೊತೆಗೆ ರಮೇಶ್ ಜಾರಕಿಹೊಳಿಗೆ ಆ ಮನೆಯತ್ತ ತಲೆ ಹಾಕಿಯೂ ಮಲಗದಂತೆ ಎಚ್ಚರಿಕೆ ನೀಡಿದ್ದಾರಂತೆ. ಇನ್ನು ಶಾಸಕ ರಮೇಶ್ ಜಾರಕಿಹೊಳಿಗೆ ಇದೊಂದೇ ನಿವಾಸವಲ್ಲದೇ ಮಲ್ಲೇಶ್ವರಂನ ಮಂತ್ರಿ ಮಾಲ್ ಪಕ್ಕದ ಮಂತ್ರಿ ಗ್ರೀನ್ಸ್‌ನಲ್ಲಿ ಫ್ಲಾಟ್ ಕೂಡ ಇದೆ. ಸದ್ಯ ಬೆಂಗಳೂರಿಗೆ ರಮೇಶ್ ಜಾರಕಿಹೊಳಿ ಬಂದ್ರೆ ಅದೇ ನಿವಾಸದಲ್ಲಿ ವಾಸವಿರುತ್ತಾರೆ. ಯಾವ ಮನೆ ತಮ್ಮ ರಾಜಕೀಯ ಜೀವನಕ್ಕೆ ಪೆಟ್ಟು ಕೊಡ್ತೋ ಆ ಮನೆಯನ್ನು ಈಗ ಮಾರಾಟಕ್ಕಿಟ್ಟಿದ್ದಾರೆ.
ಹನಿಟ್ರ್ಯಾಪ್, ಅಧಿಕಾರ ಕಳೆದುಕೊಂಡಿದ್ದು ಸೇರಿದಂತೆ ಅನೇಕ ಹಿನ್ನಡೆ ಅನುಭವಿಸಿದ ಮೇಲೆ ರಮೇಶ್ ಜಾರಕಿಹೊಳಿ ಸದಾಶಿವನಗರದ ಮನೆಯ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಈಗಾಗಲೇ ಕೆಲವರು ಮನೆ ನೋಡಿಕೊಂಡು ಹೋಗಿದ್ದು, ಆದಷ್ಟು ಬೇಗನೇ ಮನೆ ಮಾರಾಟವಾಗುವ ಸಾಧ್ಯತೆಗಳಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಒಟ್ಟಾರೆ ಈ ರಾಜಕಾರಣಿಗಳಿಗೂ ಜ್ಯೋತಿಷಿಗಳಿಗೂ ಅವಿನಾಭಾವ ನಂಟು. ಸದ್ಯ ಜ್ಯೋತಿಷಿಗಳ ಮಾತಿನ ಮೇರೆಗೆ ರಮೇಶ್ ತಮ್ಮ ನೆಚ್ಚಿನ ಮನೆ ಮಾರಾಟಕ್ಕೆ ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us