ನ್ಯೂಸ್​ಫಸ್ಟ್​​ ಚೀಫ್​​ ಪ್ರೊಡ್ಯೂಸರ್​​​ ರಮೇಶ್​ ಬಾಬು & ಸ್ಪೋರ್ಟ್ಸ್​​​​​ ಬ್ಯೂರೋ ಹೆಡ್​​ ಗಂಗಾಧರ್​ಗೆ ಪ್ರೆಸ್ ಕ್ಲಬ್ ಪ್ರಶಸ್ತಿ

author-image
Ganesh Nachikethu
Updated On
ನ್ಯೂಸ್​ಫಸ್ಟ್​​ ಚೀಫ್​​ ಪ್ರೊಡ್ಯೂಸರ್​​​ ರಮೇಶ್​ ಬಾಬು & ಸ್ಪೋರ್ಟ್ಸ್​​​​​ ಬ್ಯೂರೋ ಹೆಡ್​​ ಗಂಗಾಧರ್​ಗೆ ಪ್ರೆಸ್ ಕ್ಲಬ್ ಪ್ರಶಸ್ತಿ
Advertisment
  • ಕನ್ನಡಿಗರ ಹೆಮ್ಮೆಯ ಸುದ್ದಿವಾಹಿನಿ ನ್ಯೂಸ್​ಫಸ್ಟ್​​
  • ನ್ಯೂಸ್​ಫಸ್ಟ್ ಹಿರಿಯ ಪತ್ರಕರ್ತರಿಗೆ​​ ಪ್ರತಿಷ್ಠಿತ ಪ್ರಶಸ್ತಿ
  • 2024ನೇ ಸಾಲಿನ ಪ್ರೆಸ್‌ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಗೌರವ

ಬೆಂಗಳೂರು: ಕನ್ನಡಿಗರ ಹೆಮ್ಮೆಯ ಸುದ್ದಿವಾಹಿನಿ ನ್ಯೂಸ್​ಫಸ್ಟ್​​ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ನ್ಯೂಸ್​ಫಸ್ಟ್​​ ಚೀಫ್​​ ಪ್ರೊಡ್ಯೂಸರ್​​​ ಬಿ. ರಮೇಶ್​ ಬಾಬು ಮತ್ತು ಸ್ಪೋರ್ಟ್ಸ್​​​​​ ಬ್ಯೂರೋ ಹೆಡ್​​ ಗಂಗಾಧರ್​​​ ಜಿ.ಎಸ್​ ಅವರಿಗೆ 2024ನೇ ಸಾಲಿನ ಪ್ರೆಸ್‌ ಕ್ಲಬ್ ವಾರ್ಷಿಕ ಪ್ರಶಸ್ತಿ ಒಲಿದು ಬಂದಿದೆ.

publive-image

ಇಂದು ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನ್ಯೂಸ್​ಫಸ್ಟ್​​ ಚೀಫ್​​ ಪ್ರೊಡ್ಯೂಸರ್​​​ ಬಿ. ರಮೇಶ್​ ಬಾಬು ಮತ್ತು ಸ್ಪೋರ್ಟ್ಸ್​​​​​ ಬ್ಯೂರೋ ಹೆಡ್​​ ಗಂಗಾಧರ್​​​ ಜಿ.ಎಸ್​ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ರು. ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಅನೇಕ ಗಣ್ಯರು ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೇದಿಕೆ ಮೇಲಿದ್ದರು.

publive-image

ಮಾಧ್ಯಮ ಕ್ಷೇತ್ರದಲ್ಲಿ ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇಬ್ಬರೂ ಹಲವು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿದ್ದು, ಅಪಾರವಾದ ಕೊಡುಗೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment