newsfirstkannada.com

ಕೊತ್ವಾಲನ ಶಿಷ್ಯ ಸಿಎಂ ಆಗಿದ್ದರೆ ವಿಷಕನ್ಯೆ ಜೊತೆ ಬೆಳಗಾವಿ ಮಾರಿಬಿಡ್ತಿದ್ದರು -ರಮೇಶ ಜಾರಕಿಹೊಳಿ

Share :

Published January 23, 2024 at 9:24am

Update January 23, 2024 at 9:26am

  ಮತ್ತೆ ಡಿ.ಕೆ.ಶಿವಕುಮಾರ್ ವಿರುದ್ಧ ಸಾಹುಕಾರ ವಾಗ್ದಾಳಿ

  ಕಾಗವಾಡ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಗುಡುಗು

  ಕೊತ್ವಾಲನ ಶಿಷ್ಯ DCM ಆಗಿದ್ದಾರೆ, ಸಿದ್ದರಾಮಯ್ಯಗೆ ಬೆಲೆ ಇಲ್ಲ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆದಾಗಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸೈಲೆಂಟ್ ಆಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾಗವಾಡ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿತು.

ಈ ಪ್ರತಿಭಟನೆಯಲ್ಲಿ ಮಾತನಾಡಿದ ರಮೇಶ ಜಾರಕಿಹೋಳಿ.. ಡಿಸಿಎಂ ಡಿ‌.ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ ನನ್ನ ಮೇಲೆ 420 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಈ ಪ್ರಕರಣದಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಡಿ.ಕೆ ಶಿವಕುಮಾರ್ ಅಪ್ಪ ಬಂದರು ಎನೂ ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಹಿಂದೆ CD ಕೇಸಿನಲ್ಲಿ ನನಗೆ ಶಿಕ್ಷೆ ನೀಡಬೇಕೆಂದು ಡಿ.ಕೆ.ಶಿವಕುಮಾರ್ ಪ್ರಯತ್ನ ಪಟ್ಟಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಈಗ ತಮ್ಮ ಸರ್ಕಾರದ ಅವಧಿಯಲ್ಲಿ ನನ್ನ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. ಈ ಪ್ರಕರಣ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಡಿ.ಕೆ ಶಿವಕುಮಾರ್ ಅಪ್ಪ ಬಂದರೂ ನಾನು ಹಿಂದೆ ಸರಿಯುವುದಿಲ್ಲ. ನಾನು ಗಟ್ಟಿಯಾಗಿ ಇದ್ದೇನೆ, ಎದುರಿಸುತ್ತೇನೆ ಎಂದರು.

ಸಿಎಂ ಸಿದ್ದರಾಮಯ್ಯ ಎಂದೆಂದಿಗೂ ನಮಗೆ ಗುರು, ಸಿದ್ದರಾಮಯ್ಯ ಮೊದಲು ಹೇಗಿದ್ದರೋ ಈಗ ಹಾಗೆಯೇ ಇಲ್ಲ. ಆದರೆ ಕೊತ್ವಾಲನ ಶಿಷ್ಯ ಡಿ.ಕೆ.ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಆಗಿದೆ. ನಮ್ಮ ಸುದೈವ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಸಿಎಂ ಆಗದೇ ಕೊತ್ವಾಲನ ಶಿಷ್ಯ ಡಿ.ಕೆ ಶಿವಕುಮಾರ್ ಆಗಿದ್ದರೆ ವಿಷಕನ್ಯೆ ಜೊತೆ ‌ಸೇರಿ ಬೆಳಗಾವಿ ಜಿಲ್ಲೆಯನ್ನು ಮಾರಾಟ ಮಾಡುತ್ತಿದ್ದರು –ರಮೇಶ್ ಜಾರಕಿಹೊಳಿ

ಕೊತ್ವಾಲ್ ಶಿಷ್ಯ ಇರುವುದರಿಂದ ಸಿಎಂ ಸಿದ್ದರಾಮಯ್ಯರ ಅಧಿಕಾರ ನಡೆಯುತ್ತಿಲ್ಲ. ನನ್ನ ಮೇಲೆ 420 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ವಿಷ ಕನ್ಯೆ ಮತ್ತು ಕೊತ್ವಾಲ್ ಶಿಷ್ಯ ಆಡಳಿತ ಮಾಡ್ತಿದ್ದಾರೆ. ಈ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ. ಅಥಣಿ, ಕಾಗವಾಡ, ಕುಡಚಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಮತ್ತೆ ಆಯ್ಕೆ ಆಗುತ್ತಾರೆ. ಯಾವತ್ತೂ ದ್ವೇಷದ ರಾಜಕಾರಣ ಮಾಡಬಾರದು, ಕಾಂಗ್ರೆಸ್ ಸರ್ಕಾರದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ ಎಂದು ಕಿಡಿಕಾರಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊತ್ವಾಲನ ಶಿಷ್ಯ ಸಿಎಂ ಆಗಿದ್ದರೆ ವಿಷಕನ್ಯೆ ಜೊತೆ ಬೆಳಗಾವಿ ಮಾರಿಬಿಡ್ತಿದ್ದರು -ರಮೇಶ ಜಾರಕಿಹೊಳಿ

https://newsfirstlive.com/wp-content/uploads/2024/01/RAMESH-JARAKIHOLI.jpg

Load More