newsfirstkannada.com

Rameshwaram Cafe; ಅಮ್ಮ ಮಾಡಿದ ಫೋನ್​ ಕಾಲ್ ​ನನ್ನ ಜೀವ ಉಳಿಸಿತು.. ಯುವಕ ಹೇಳಿದ್ದೇನು?

Share :

Published March 3, 2024 at 7:09am

Update March 3, 2024 at 7:12am

    ರಾಮೇಶ್ವರ ಕೆಫೆಯಲ್ಲಿ ಬಾಂಬ್​ನಲ್ಲಿ IED ಸುಧಾರಿತ ಡಿವೈಸ್ ಬಳಕೆ

    ತಿಂಡಿ ತಿನ್ನಬೇಕು ಎನ್ನುವಷ್ಟರಲ್ಲಿ ಬಂದ ಫೋನ್​ ಕರೆ ನನ್ನ ಬದುಕಿಸಿದ್ದು!

    ರಾಮೇಶ್ವರಂ ಕೆಫೆ ಬ್ಲಾಸ್ಟ್​ನಿಂದ ಪಾರಾಗಿದ್ದ ಯುವಕ ಹೇಳಿದ್ದೇನು?

ಬೆಂಗಳೂರು: ರಾಮೇಶ್ವರಂ ಕೆಫೆ ಫುಡ್ ​​ಪ್ರಿಯರ ಅಚ್ಚುಮೆಚ್ಚಿನ ತಾಣ. ಹೋಟೆಲ್​ನ ಘೀ ಮಸಾಲೆ, ಪುಡಿ ಇಡ್ಲಿಗೆ ಪ್ರತ್ಯೇಕ ಫ್ಯಾನ್‌ ಬೇಸ್‌ ಇದೆ. ಹೀಗೆ ಗರಿ ಗರಿ ದೋಸೆ ತಿನ್ನಬೇಕೆಂದು ಓರ್ವ ಯುವಕ ರಾಮೇಶ್ವರಂ ಕೆಫೆಗೆ ಹೋಗಿದ್ದಾರೆ. ಆರ್ಡರ್​ ಮಾಡಿ ತಮಗಿಷ್ಟವಾದ ತಿಂಡಿ ತಿನ್ನಬೇಕು ಎನ್ನುವಷ್ಟರಲ್ಲಿ ತಾಯಿ ಮಾಡಿದ ಫೋನ್​ ಕರೆ ಆತನ ಜೀವವನ್ನೇ ಉಳಿಸಿದೆ.

ಇದನ್ನು ಓದಿ: Rameshwaram Cafe Blast: ಏನಿದು IED ಡಿವೈಸ್? ಬಾಂಬ್ ಬ್ಲಾಸ್ಟ್​​ಗೆ ಇದನ್ನು ಬಳಕೆ ಮಾಡಿದ್ರಾ?

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ಸಾವಿರ ವರ್ಷ ಆಯಸ್ಸು ಎಂಬ ಗಾದೆ ಮಾತು ಇಲ್ಲಿ ಅಕ್ಷರ ಸಹ ಸತ್ಯವಾಗಿದೆ. ಮಾರ್ಚ್​ 1 ರಂದು ಮಧ್ಯಾಹ್ನ 1 ಗಂಟೆ 9 ನಿಮಿಷಯಕ್ಕೆ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಫೋಟಗೊಂಡಿತ್ತು. ಅಪರಿಚಿತ ವ್ಯಕ್ತಿ ಇಟ್ಟು ಹೋಗಿರುವ ಬ್ಯಾಗ್‌ನಿಂದ ಸ್ಫೋಟ ಸಂಭವಿಸಿದ್ದು, 9 ಜನ ಗಾಯಗೊಂಡಿದ್ದಾರೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಕುಮಾರ್ ಅಲಂಕೃತ್ ಎಂಬ ಯುವಕ ರಾಮೇಶ್ವರಂ ಕೆಫೆ ಬ್ಲಾಸ್ಟ್​ನಿಂದ ಪಾರಾಗಿದ್ದ ಬಗ್ಗೆ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾನೆ. ನಾನು ಆರ್ಡರ್ ಮಾಡಿದ್ದ ಫುಡ್​ ತೆಗೆದುಕೊಂಡ ಕೂಡಲೇ ನನ್ನ ತಾಯಿ ಕರೆ ಮಾಡಿದರು. ನನ್ನ ತಾಯಿ ಜೊತೆ ಮಾತನಾಡುತ್ತಾ ಹೋಟೆಲ್‌ನಿಂದ 10 ರಿಂದ 15 ಮೀಟರ್‌ ಅಂತರದ ದೂರಕ್ಕೆ ಬಂದಿದ್ದೆ. ಕೆಲವೇ ಸೆಕೆಂಡ್‌ಗಳಲ್ಲಿ ನನಗೆ ಜೋರಾದ ಶಬ್ಧ ಕೇಳಿಸಿತು. ಎತ್ತ ನೋಡಿದರೂ ಹೊಗೆ ತುಂಬಿ ಕೊಂಡಿತ್ತು. ಹಿಂದೆಂದೂ ಇಂತಹ ಪರಿಸ್ಥಿತಿ ನಾನು ಎದುರಿಸಿರಲಿಲ್ಲ ಎಂದು ತನ್ನ ಟ್ವಿಟ್​​ನಲ್ಲಿ ಯುವಕ ಬರೆದುಕೊಂಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rameshwaram Cafe; ಅಮ್ಮ ಮಾಡಿದ ಫೋನ್​ ಕಾಲ್ ​ನನ್ನ ಜೀವ ಉಳಿಸಿತು.. ಯುವಕ ಹೇಳಿದ್ದೇನು?

https://newsfirstlive.com/wp-content/uploads/2024/03/rameshwaram-cafe-blast.jpg

Load More