newsfirstkannada.com

ಹೆಸರು ಚೇಂಜ್ ಮಾಡಿ ಓಡಾಟ, ಕೆಫೆ ಸ್ಫೋಟದ ಮಾಸ್ಟರ್​ಮೈಂಡ್​ ಬಗ್ಗೆ ಸುಳಿವು ಸಿಕ್ಕಿದ್ದು ಹೇಗೆ ಗೊತ್ತಾ..?

Share :

Published April 13, 2024 at 7:07am

    ಬಾಂಬರ್ ಮುಸಾವೀರ್, ಮಾಸ್ಟರ್‌ ಮೈಂಡ್‌ ಮತೀನ್ ಬಂಧನ

    ಇಂದು ಉಗ್ರರನ್ನು ವಿಚಾರಣೆ ನಡೆಸಲಿರುವ ಎನ್​ಐಎ ಅಧಿಕಾರಿಗಳು

    ಬಿಜೆಪಿ-ಟಿಎಂಸಿ ನಡುವೆ ಟಾಕ್ ವಾರ್​​, ಕಾರಣ ಏನು ಗೊತ್ತಾ?

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್‌ ಕೇಸ್​ ಸಿಲಿಕಾನ್ ಸಿಟಿ ಮಾತ್ರವಲ್ಲ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲೂ ಸಂಚಲನ ಸೃಷ್ಟಿಸಿತ್ತು. ಉಗ್ರರಿಗಾಗಿ ದೇಶಾದ್ಯಂತ ತಲಾಶ್ ಮಾಡ್ತಿದ್ದ ಎನ್​ಐಎ ಅಧಿಕಾರಿಗಳಿಗೆ ಪಶ್ಚಿಮ ಬಂಗಾಳದ ಬಿಲದಲ್ಲಿ ಇಲಿಗಳಂತೆ ಅಡಗಿ ಕೂತಿದ್ದ ನರರಕ್ಕಸರು ಲಾಕ್ ಆಗಿದ್ದಾರೆ.

ಫೆಬ್ರವರಿ 29.. ಒಂದು ಕ್ಷಣ ಸಿಲಿಕಾನ್ ಸಿಟಿ ಬೆಚ್ಚಿ ಬಿದ್ದಿತ್ತು. ನೋಡ ನೋಡ್ತಿದ್ದಂತೆ ಎರಡು ಬಾಂಬ್​ಗಳು ಮಟ ಮಟ ಮಧ್ಯಾಹ್ನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಗೊಂಡಿದ್ದವು. ಮಹಿಳೆ ಸೇರಿದಂತೆ ಹಲವರಿಗೆ ಬ್ಲಾಸ್ಟ್​ನಲ್ಲಿ ಗಾಯವಾಗಿದ್ದವು. ಬಾಂಬರ್ ಮಾತ್ರ ಕೆಲಸ ಮುಗಿಸಿ ಎಸ್ಕೇಪ್ ಆಗಿದ್ದ. ಸದ್ಯ ಬಾಂಬ್ ಇಟ್ಟು ಬಿಲ ಸೇರಿದ್ದ ರಕ್ತದಾಹಿಗಳನ್ನು ಎನ್​ಐಎ ಅಧಿಕಾರಿಗಳು ನಿನ್ನೆ ಪಶ್ಚಿಮ ಬಂಗಾಳದಲ್ಲಿ ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರಾಮೇಶ್ವರಂ ಕೆಫೆ ಬ್ಲಾಸ್ಟ್​ ಕೇಸ್​​; ಉಗ್ರರು ಸಿಕ್ಕಿಬಿದ್ದಿದ್ದೇ ರೋಚಕ

ಬೆಂಗಳೂರಲ್ಲಿ ಬ್ಲಾಸ್ಟ್ ಮಾಡಿ ಕೊಲ್ಕತ್ತಾದಲ್ಲಿ ಅಡಗಿ ಕೂತಿದ್ದ ಉಗ್ರ ಮುಸಾವೀರ್ ಶಾಜಿನ್‌ನನ್ನ ಎನ್‌ಐಎ ಅಧಿಕಾರಿಗಳು ಹೆಡೆಮುರಿಕಟ್ಟಿದ್ದಾರೆ. ಜೊತೆಗೆ ಮೋಸ್ಟ್ ವಾಂಟೆಡ್‌ ಉಗ್ರ, ಮಾಸ್ಟರ್‌ ಮೈಂಡ್, ಬಾಂಬ್ ಮಾರ್ಗದರ್ಶಕ ಅಬ್ದುಲ್ ಮತೀನ್ ತಾಹಾ ಕೂಡ ಅರೆಸ್ಟ್ ಆಗಿದ್ದಾನೆ. ತೀರ್ಥಹಳ್ಳಿ ಮೂಲದ ಮತೀನ್, ತುಂಗಾತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ್ದ. ಉಗ್ರ ಶಾರಿಕ್‌ಗೆ ಕುಕ್ಕರ್‌ ಕೊಟ್ಟು ಮಂಗಳೂರಿನಲ್ಲೂ ಸ್ಫೋಟ ಮಾಡಿಸಿದ್ದ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಡಲು ಮಸಲತ್ತು ಮಾಡಿದ್ದ ಮತೀನ್ ಲಾಕ್ ಆಗಿದ್ದಾನೆ. ನಿನ್ನೆ ತಡರಾತ್ರಿಯೇ ಇಬ್ಬರು ರಕ್ಕಸರನ್ನು ಕೋಲ್ಕತಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಕರೆತರಲಾಗಿದೆ. ಇಬ್ಬರು ಶಂಕಿತರನ್ನು 3 ದಿನಗಳ ಕಾಲ ಎನ್​ಐಎ ಕಸ್ಟಡಿಗೆ ಪಡೆದಿದ್ದು ಬೆಂಗಳೂರಿನ ಆಡುಗೋಡಿ ಟೆಕ್ನಿಕ್​ಲ್ ಸೆಂಟರ್​ನಲ್ಲಿ ವಿಚಾರಣೆ ಮಾಡಲಾಗುತ್ತದೆ. ಉಗ್ರರ ಬೆನ್ನುಬಿದ್ದಿದ್ದ ಎನ್‌ಐಎ ಹಲವು ಆಯಾಮಗಳಲ್ಲಿ ತನಿಖೆ ನಡೆಸಿತ್ತು.. ಹೀಗೆ ತನಿಖಾ ಹಾದಿಯಲ್ಲಿ ಸಾಗಿದ್ದ ಅಧಿಕಾರಿಗಳಿಗೆ ರಕ್ತಪಿಪಾಸುಗಳ ಸುಳಿವು ಸಿಕ್ಕಿದ್ದೇ ರಣರೋಚಕ..

ಎನ್‌ಐಎ ‘ಉಗ್ರ’ರ ಬೇಟೆ
ತಮ್ಮ ಮೂಲ ಹೆಸರನ್ನ ಬದಲಿಸಿಕೊಂಡಿದ್ದ ಉಗ್ರರು ಕೊಲ್ಕತ್ತಾದಲ್ಲಿ ವಾಸ್ತವ್ಯ ಹೂಡಿರೋ ಮಾಹಿತಿ ಎನ್‌ಐಎಗೆ ಸಿಕ್ಕಿತ್ತು. ಬಾಂಬರ್‌ ಮುಸಾವೀರ್ ಜೊತೆ ಉಗ್ರ ಮಾಸ್ಟರ್‌ ಮೈಂಡ್‌ ಅಬ್ದುಲ್ ಮತೀನ್ ತಾಹಾ ನಕಲಿ ದಾಖಲೆ ನೀಡಿ ಪೂರ್ವ ಮಿಡ್ನಾಪುರ ದಿಘಾದಲ್ಲಿ ವಾಸ್ತವ್ಯ ಹೂಡಿರೋದು ತನಿಖೆಯಲ್ಲಿ ಗೊತ್ತಾಗಿತ್ತು. ಹೀಗೆ ಉಗ್ರರ ಮಾಹಿತಿ ತಿಳಿಯುತ್ತಿದ್ದಂತೆ ನಿನ್ನೆ ಬೆಳಗ್ಗೆ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ರು. ಹೀಗೆ ಬೆಳಗಿನ ಜಾವ 2.30ರ ಸುಮಾರಿಗೆ ಉಗ್ರರು ವಾಸವಿದ್ದ ಮನೆಯ ಮೇಲೆ ಎನ್‌ಐಎ ತಂಡ ದಾಳಿ ನಡೆಸಿದೆ. ಈ ವೇಳೆ ನಿದ್ದೆಯಲ್ಲಿದ್ದ ಇಬ್ಬರು ಉಗ್ರರನ್ನ ಎನ್‌ಐಎ ತಂಡ ಬಂಧನ ಮಾಡಿದೆ. ಬಾಂಬ್ ಸ್ಫೋಟದ ಆರೋಪಿ ಮುಸಾವೀರ್ ಜೊತೆ ಮಾಸ್ಟರ್‌ ಮೈಂಡ್ ಮತೀನ್ ತಾಹಾನನ್ನೂ ಅರೆಸ್ಟ್ ಮಾಡಿದೆ. ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರೋ ಎನ್‌ಐಎ ತಂಡಕ್ಕೆ ಇಂಟಲಿಜೆನ್ಸ್‌ ಬ್ಯುರೋ, ಪಶ್ಚಿಮ ಬಂಗಾಳ, ತೆಲಂಗಾಣ, ಕೇರಳ ಮತ್ತು ಪ್ರಮುಖವಾಗಿ ಕರ್ನಾಟಕ ಪೊಲೀಸರು ಕೂಡ ಸಹಕಾರ ನೀಡಿದ್ದರು.

ಉಗ್ರರನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದು ಬಿಜೆಪಿ ಮತ್ತು ಟಿಎಂಸಿ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳ ಉಗ್ರಗಾಮಿಗಳ ಅಡಗುದಾಣವಾಗಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ. ಈ ಹೇಳಿಕೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಬ್ಬರು ಶಂಕಿತ ಉಗ್ರರಾದ ಮುಸ್ಸಾವಿರ್ ಹಾಗೂ ಅಬ್ದುಲ್ ಮತೀನ್ ಇಬ್ಬರನ್ನು ಕೋಲ್ಕತಾದಲ್ಲಿ ಬಂಧಿಸಲು ಎನ್​ಐಎಗೆ ಕೋಲ್ಕತಾ ಪೊಲೀಸ್ ನೆರವಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ತಮ್ಮನ ಗೆಲ್ಲಿಸಲು ಅಣ್ಣನ ಮಿಡ್ ನೈಟ್ ಆಪರೇಷನ್, ಕುಮಾರಸ್ವಾಮಿಗೆ ಕೊಟ್ರು ಬಿಗ್​ ಶಾಕ್..!

ಈ ರಾಜಕೀಯ ಕೆಸರೆರಚಾಟ ಏನೇ ಇರಲಿ, ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಮಾಡಿದ ಉಗ್ರರು ಸಿಕ್ಕಿಬಿದ್ದಿದ್ದಾರೆ. ಈ ಸುದ್ದಿ ತಿಳಿದು ಬೆಂಗಳೂರಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಈ ರಕ್ತಪಿಪಾಸುಗಳು ಅಮಾಯಕರ ನರಮೇಧ ಮಾಡಿ ಚಾಪೆ ಕೆಳಗೆ ತೂರಿದ್ರೆ, ಎನ್‌ಐಎ ಅಧಿಕಾರಿಗಳು ರಂಗೋಲಿ ಕೆಳಗೆ ತೂರಿ ಅವರನ್ನು ಬಂಧಿಸಿದ್ದಾರೆ. ಇವರನ್ನು ವಿಚಾರಣೆ ನಡೆಸಿ ಇವರ ಹಿಂದೆ ಮತ್ಯಾರಿದ್ದಾರೆ.. ಈ ಉಗ್ರವಾದದ ಬೇರಿಗೆ ಎನ್‌ಐಎ ಅಧಿಕಾರಿಗಳು ಕೈ ಹಾಕಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಸರು ಚೇಂಜ್ ಮಾಡಿ ಓಡಾಟ, ಕೆಫೆ ಸ್ಫೋಟದ ಮಾಸ್ಟರ್​ಮೈಂಡ್​ ಬಗ್ಗೆ ಸುಳಿವು ಸಿಕ್ಕಿದ್ದು ಹೇಗೆ ಗೊತ್ತಾ..?

https://newsfirstlive.com/wp-content/uploads/2024/04/RAMESHAR-CAFE.jpg

Load More