ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರಾಮೇಶ್ವರಂ ಕೆಫೆ ಬ್ಲಾಸ್ಟ್​ ಕೇಸ್​​; ಉಗ್ರರು ಸಿಕ್ಕಿಬಿದ್ದಿದ್ದೇ ರೋಚಕ

author-image
Veena Gangani
Updated On
ರಾಮೇಶ್ವರಂ ಕೆಫೆ ಬಾಂಬ್​​​ ಬ್ಲಾಸ್ಟ್​​ ಕೇಸ್​​; ರಾಜ್ಯ ಬಿಜೆಪಿ ಕಚೇರಿಯನ್ನೇ ಉಡಾಯಿಸಲು ಪ್ಲಾನ್​ ಮಾಡಿದ್ದ ಆರೋಪಿಗಳು!
Advertisment
  • ಪಶ್ಚಿಮ ಬಂಗಾಳದಲ್ಲಿ ಇಬ್ಬರನ್ನೂ ಬಂಧಿಸಿದ ಎನ್ಐಎ ತಂಡ
  • ಬಾಂಬರ್ ಮುಸಾವೀರ್, ಮಾಸ್ಟರ್‌ ಮೈಂಡ್‌ ಮತೀನ್ ಬಂಧನ
  • ಇಬ್ಬರು ರಕ್ತ ಪಿಪಾಸುಗಳ ಸುಳಿವು ಸಿಕ್ಕಿದ್ದೇ ಬಲು ರಣರೋಚಕ

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್‌. ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಗ್ರ ಕೃತ್ಯ. ಹೋಟೆಲ್‌ನಲ್ಲಿ ಊಟಕ್ಕೆ ಹೋದವರು ಒಂದು ಕ್ಷಣ ನರಕವನ್ನೇ ನೋಡಿದ್ದ ಪ್ರಕರಣ. ಇದೀಗ ಬಾಂಬ್‌ ಹಾಕಿ ಬಿಲದಲ್ಲಿ ಇಲಿಗಳಂತೆ ಅಡಗಿ ಕೂತಿದ್ದ ನರ ರಕ್ಕಸರು ಅಂದರ್ ಆಗಿದ್ದಾರೆ. ಕೆಫೆಯಲ್ಲಿ ಸ್ಫೋಟಿಸಿ ತಲೆಮರೆಸಿಕೊಂಡಿದ್ದ ನರಹಂತಕರನ್ನ ಎನ್‌ಐಎ ಖೆಡ್ಡಾಕ್ಕೆ ಬೀಳಿಸಿದೆ.

ಇದನ್ನೂ ಓದಿ:ಕೂಲ್‌.. ಕೂಲ್‌.. ರಾಜ್ಯದಲ್ಲಿ ಇಂದು ಗುಡುಗು ಸಿಡಿಲು ಸಹಿತ ಭಾರೀ ಮಳೆ; ಎಲ್ಲೆಲ್ಲಿ ವರ್ಷಧಾರೆ?

ಫೆಬ್ರವರಿ 29 ಮಟ ಮಟ ಮಧ್ಯಾಹ್ನದ ವೇಳೆ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಸ್ಫೋಟ ಇಡೀ ಸಿಲಿಕಾನ್ ಸಿಟಿಯನ್ನೇ ಶೇಕ್ ಮಾಡಿತ್ತು. ಜನರ ವಾಸಕ್ಕೆ ಬೆಂಗಳೂರು ಸೇಫಾ ಎಂಬ ಅನುಮಾನ ಹುಟ್ಟಿಸಿತ್ತು. ಕರುನಾಡ ರಾಜಧಾನಿ ರಕ್ತಪಿಪಾಸುಗಳ ತಾಣವಾಗಿದ್ಯಾ ಎಂಬ ಪ್ರಶ್ನೆ ಹುಟ್ಟಿಸಿತ್ತು. ಹೀಗೆ ರಾಜ್ಯದ ಜನರಿಗೆ ಭಯೋತ್ಪಾದನೆಯೆಂಬ ಭೀತಿ ಹುಟ್ಟಿಸಿದ್ದ ಯಮಧೂತರು ಬಲೆಗೆ ಬಿದ್ದಿದ್ದಾರೆ.

publive-image

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದು ಇದೇ ಮುಸಾವೀರ್ ಶಾಜಿನ್‌. ಬಾಂಬ್‌ ಬ್ಲಾಸ್ಟ್ ಆಗುತ್ತಿದ್ದಂತೆ ತನಿಖಾ ತಂಡಗಳ ದಿಕ್ಕು ತಪ್ಪಿಸಿ ಎಸ್ಕೇಪ್ ಆಗಿದ್ದ ಉಗ್ರ. ಹೀಗೆ ತಲೆ ಮರೆಸಿಕೊಂಡು ಇಲಿಯಂತೆ ಬಿಲದಲ್ಲಿ ಅಡಗಿ ಕೂತಿದ್ದ ಉಗ್ರ ಮುಸಾವೀರ್ ಶಾಜಿನ್‌ಗಾಗಿ ಎನ್‌ಎಐ ಅಧಿಕಾರಿಗಳು ಹುಡುಕಾಟ ನಡೆಸಿದ್ರು. ಸುಳಿವು ಕೊಟ್ಟವರಿಗೆ ಬಹುಮಾನ ನೀಡೋದಾಗಿ ಘೋಷಿಸಿ ಮಾನವ ಕುಲಕ್ಕೆ ಕಂಟಕವಾಗಿರೋ ಕ್ರಿಮಿಗಳಿಗೆ ಬಲೆ ಬೀಸಿದ್ರು. ಹೀಗೆ ಉಗ್ರರ ಜಾಡು ಹಿಡಿದು ಹೊರಟಿದ್ದ ರಾಷ್ಟ್ರೀಯ ತನಿಖಾ ತಂಡದ ಕೈಗೆ ಬಾಂಬ್ ಬ್ಲಾಸ್ಟ್ ಕ್ರಿಮಿ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಲ್ಲಿ ಬ್ಲಾಸ್ಟ್ ಮಾಡಿ ಕೊಲ್ಕತ್ತಾದಲ್ಲಿ ಅಡಗಿ ಕೂತಿದ್ದ ಉಗ್ರನನ್ನ ಎನ್‌ಐಎ ಅಧಿಕಾರಿಗಳು ಹೆಡೆಮುರಿಕಟ್ಟಿದ್ದಾರೆ. ಜೊತೆಗೆ ಮೋಸ್ಟ್ ವಾಂಟೆಡ್‌ ಉಗ್ರ, ಮಾಸ್ಟರ್‌ ಮೈಂಡ್ ಅಬ್ದುಲ್ ಮತೀನ್ ತಾಹಾ ಕೂಡಾ ಅರೆಸ್ಟ್ ಆಗಿದ್ದಾನೆ. ಉಗ್ರರ ಬೆನ್ನುಬಿದ್ದಿದ್ದ ಎನ್‌ಐಎ ಹಲವು ಆಯಾಮಗಳಲ್ಲಿ ತನಿಖೆ ನಡೆಸಿತ್ತು. ಹೀಗೆ ತನಿಖಾ ಹಾದಿಯಲ್ಲಿ ಸಾಗಿದ್ದ ಅಧಿಕಾರಿಗಳಿಗೆ ರಕ್ತಪಿಪಾಸುಗಳ ಸುಳಿವು ಸಿಕ್ಕಿದ್ದೇ ರಣರೋಚಕ.

publive-image

ತಮ್ಮ ಮೂಲ ಹೆಸರನ್ನ ಬದಲಿಸಿಕೊಂಡಿದ್ದ ಉಗ್ರರು ಕೊಲ್ಕತ್ತಾದಲ್ಲಿ ವಾಸ್ತವ್ಯ ಹೂಡಿರೋ ಮಾಹಿತಿ ಎನ್‌ಐಎಗೆ ಸಿಕ್ಕಿತ್ತು. ಬಾಂಬರ್‌ ಮುಸಾವೀರ್ ಜೊತೆ ಉಗ್ರ ಮಾಸ್ಟರ್‌ ಮೈಂಡ್‌ ಅಬ್ದುಲ್ ಮತೀನ್ ತಾಹಾ ನಕಲಿ ದಾಖಲೆ ನೀಡಿ ಪೂರ್ವ ಮಿಡ್ನಾಪುರ ದಿಘಾದಲ್ಲಿ ವಾಸ್ತವ್ಯ ಹೂಡಿರೋದು ತನಿಖೆಯಲ್ಲಿ ಗೊತ್ತಾಗಿತ್ತು. ಹೀಗೆ ಉಗ್ರರ ಮಾಹಿತಿ ತಿಳಿಯುತ್ತಿದ್ದಂತೆ ನಿನ್ನೆ ಬೆಳಗ್ಗೆ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ರು. ಹೀಗೆ ಬೆಳಗಿನ ಜಾವ 2.30ರ ಸುಮಾರಿಗೆ ಉಗ್ರರು ವಾಸವಿದ್ದ ಮನೆಯ ಮೇಲೆ ಎನ್‌ಐಎ ತಂಡ ದಾಳಿ ನಡೆಸಿದೆ.

ಇದನ್ನೂ ಓದಿ:6,6,6,6,4,4,4,4,4; ಬಿಸಿಸಿಐಗೆ ಖಡಕ್​​ ವಾರ್ನಿಂಗ್​ ಕೊಟ್ಟ ಸೂರ್ಯಕುಮಾರ್​ ಯಾದವ್​​!

ಈ ವೇಳೆ ನಿದ್ದೆಯಲ್ಲಿದ್ದ ಇಬ್ಬರು ಉಗ್ರರನ್ನ ಎನ್‌ಐಎ ತಂಡ ಬಂಧನ ಮಾಡಿದೆ. ಬಾಂಬ್ ಸ್ಫೋಟದ ಆರೋಪಿ ಮುಸಾವೀರ್ ಜೊತೆ ಮಾಸ್ಟರ್‌ ಮೈಂಡ್ ಮತೀನ್ ತಾಹಾನನ್ನೂ ಅರೆಸ್ಟ್ ಮಾಡಿದೆ. ಇನ್ನೂ ಉಗ್ರ ಬಂಧಿಸುವಲ್ಲಿ ಯಶಸ್ವಿಯಾಗಿರೋ ಎನ್‌ಐಎ ತಂಡಕ್ಕೆ ಇಂಟಲಿಜೆನ್ಸ್‌ ಬ್ಯುರೋ, ಪಶ್ಚಿಮ ಬಂಗಾಳ, ತೆಲಂಗಾಣ, ಕೇರಳ ಮತ್ತು ಪ್ರಮುಖವಾಗಿ ಕರ್ನಾಟಕ ಪೊಲೀಸರು ಕೂಡಾ ಸಹಕಾರ ನೀಡಿದ್ರು ಅಂತ ತಿಳಿದು ಬಂದಿದೆ. ಇನ್ನೂ, ಬಂಧನದ ಬಳಿಕ ಇಬ್ಬರೂ ಉಗ್ರರನ್ನ ಎನ್‌ಐಎ ಅಧಿಕಾರಿಗಳು ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ರು. ಬಳಿಕ ಎನ್‌ಐಎ ಕೋರ್ಟ್‌ಗೆ ಹಾಜರುಪಡಿಸಿದ್ರು. ಇನ್ನೂ ಮುಸಾವೀರ್ ಮತ್ತು ಮತೀನ್ ತಾಹಾನ ಬೆಂಗಳೂರಿಗೆ ಕರೆತಂದು ಎನ್‌ಎಐ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಒಟ್ಟಾರೆ, ಉಗ್ರರು ಚಾಪೆ ಕೆಳಗೆ ತೂರಿದ್ರೆ, ಎನ್‌ಐಎ ಅಧಿಕಾರಿಗಳು ರಂಗೋಲಿ ಕೆಳಗೆ ತೂರಿ ಬಂಧನ ಮಾಡಿದೆ. ಇದೀಗ ವಿಷಜಂತುಗಳಿಗೆ ಬೆಂಡೆತ್ತಿ ಉಗ್ರವಾದದ ಬೇರಿಗೆ ಎನ್‌ಐಎ ಕೈ ಹಾಕೋದಂತೂ ಪಕ್ಕಾ.

publive-image

ಬಂಧಿತರ ‘ಉಗ್ರ’ ಚರಿತ್ರೆ ಇಲ್ಲಿದೆ..

1. ಮುಸಾವಿರ್ ಹುಸೇನ್ ಶಾಜಿಬ್
ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಮುಸಾವಿರ್ ಹುಸೇನ್‌
ಕೆಫೆಯಲ್ಲಿ ಬಾಂಬ್‌ ಇಟ್ಟು ಪರಾರಿಯಾಗಿದ್ದ ಮುಸಾವಿರ್‌
ಪಶ್ಚಿಮ ಬಂಗಾಳದಲ್ಲಿ ಉಗ್ರನ ಬಂಧಿಸಿರುವ ಎನ್‌ಐಎ

2. ಅಬ್ದುಲ್ ಮತೀನ್ ತಾಹಾ
ಯುವಕರ ಮನಪರಿವರ್ತನೆ ಹಿಂದಿನ ಮಾಸ್ಟರ್ ಮೈಂಡ್
ಮಂಗಳೂರು ಗೋಡೆ ಬರಹ ಕೇಸ್‌ಗೂ ಪ್ರೇರೇಪಣೆ ನೀಡಿದ್ದ
ಪಶ್ಚಿಮ ಬಂಗಾಳದಲ್ಲಿ ಉಗ್ರ ಮಾಸ್ಟರ್‌ ಮೈಂಡ್‌ನ ಬಂಧನ

3. ಅರಾಫತ್ ಅಲಿ
ಅರಾಫತ್ ಅಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನು
ಕೀನ್ಯಾದಿಂದ ಬರುವಾಗ ದೆಹಲಿ ಏರ್ಪೋರ್ಟ್‌ನಲ್ಲಿ ಬಂಧನ

4. ಮೊಹಮ್ಮದ್ ಶಾರಿಕ್
ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ ಕೇಸ್‌ನ ಆರೋಪಿ
ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಮೊಹಮ್ಮದ್ ಶಾರಿಕ್

5. ಸೈಯದ್ ಯಾಸಿನ್
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಕೇಸ್‌ನ ಆರೋಪಿ
ತೀರ್ಥಹಳ್ಳಿ ನಿವಾಸಿ ಯಾಸಿನ್ ಮೇಲೆ ಟ್ರಯಲ್ ಬ್ಲಾಸ್ಟ್ ಕೇಸ್‌

6. ಮಾಜ್ ಮುನೀರ್
ಶಿವಮೊಗ್ಗ ತೀರ್ಥಹಳ್ಳಿ ಮೂಲದ ಮಾಜ್ ಮುನೀರ್
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಸಂಬಂಧ ಬಂಧಿಸಿದ್ದ NIA

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment