newsfirstkannada.com

Rameshwaram Cafe Blast: ಏನಿದು IED ಡಿವೈಸ್? ಬಾಂಬ್ ಬ್ಲಾಸ್ಟ್​​ಗೆ ಇದನ್ನು ಬಳಕೆ ಮಾಡಿದ್ರಾ?

Share :

Published March 2, 2024 at 10:44pm

    ಬೆಂಗಳೂರು ರಾಮೇಶ್ವರಂ ಕೆಫೆ ಬ್ಲಾಸ್ಟ್​ ಕೇಸ್

    ರಾಜ್ಯಾದ್ಯಂತ ಪೊಲೀಸರು ಅಲರ್ಟ್ ಆಗಿದ್ದಾರೆ

    ಕಚ್ಚಾ ವಸ್ತುಗಳನ್ನ ಬಳಸಿ ಬಾಂಬ್​ ಸಿದ್ಧಪಡಿಸಲಾಗಿದ್ಯಾ?

ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್​ನ ಪ್ರಕರಣದಲ್ಲಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಮಿಂಚಿನಂತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಪೋಟಕ್ಕೆ IED ಬಳಸಿದ್ರೂ ಹೇಗೆ ಬ್ಲಾಸ್ಟ್​ ಮಾಡಿದ್ರು ಅನ್ನೋ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಗಳಿಗಾಗಿ ಇಡೀ ಬೆಂಗಳೂರನ್ನು ಜಾಲಾಡುತ್ತಿದ್ದಾರೆ.

ಬೆಂಗಳೂರು ರಾಮೇಶ್ವರಂ ಕೆಫೆ ಬ್ಲಾಸ್ಟ್​ ಕೇಸ್​ ಸದ್ಯ ರಾಜ್ಯ ರಾಜಧಾನಿಯನ್ನ ಬೆಚ್ಚಿ ಬೀಳಿಸಿದೆ. ಇಡೀ ರಾಜ್ಯಾದ್ಯಂತ ಪೊಲೀಸರು ಅಲರ್ಟ್ ಆಗಿದ್ದಾರೆ. ಆರೋಪಿಗಳನ್ನು ಹೆಡೆಮುರಿಕಟ್ಟಲು ಎಲ್ಲೆಡೆ ತಪಾಸಣೆ ಶುರು ಮಾಡಿದ್ದಾರೆ. ಅದರಲ್ಲೂ ಬೆಂಗಳೂರಿನ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಈ ವೇಳೆ ಕೆಫೆಯಲ್ಲಿ ಆರೋಪಿಗಳು ಅದೇಗೆ ಬಾಂಬ್ ಬ್ಲಾಸ್ಟ್​ ಮಾಡಿದ್ರು ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಂಬ್​ನಲ್ಲಿ IED ಸುಧಾರಿತ ಸ್ಫೋಟಕ ಡಿವೈಸ್ ಬಳಕೆ

ನಿನ್ನೆ ರಾಮೇಶ್ವರ ಕೆಫೆಯಲ್ಲಿ ಬ್ಲಾಸ್ಟ್​​ ಆದ ಬಾಂಬ್​ನಲ್ಲಿ IED ಸುಧಾರಿತ ಸ್ಫೋಟಕ ಡಿವೈಸ್ ಬಳಸಿರುವುದು ಪತ್ತೆಯಾಗಿದೆ. ಕೃತ್ಯಕ್ಕೆ ಬಳಸಲಾದ ಡಿವೈಸ್ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಏನಿದು IED ಡಿವೈಸ್?

ಈ ಬಾಂಬ್​​ ಅನ್ನ ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳನ್ನ ಬಳಸಿ ಸಿದ್ಧಪಡಿಸಲಾಗುತ್ತದೆ. ಮೊಳೆಗಳು, ಗಾಜಿನ ಚೂರು, ಗನ್ ಪೌಡರ್ ಅಥವಾ ಬೆಂಕಿ ಕಡ್ಡಿಯ ಮದ್ದುಗಳನ್ನೂ ಬಳಸಿ ತಯಾರಿಸಬಹುದು. ಪ್ರೆಷರ್ ಆಗುವಂತೆ ಡಿವೈಸ್​ ಅನ್ನು ಸೃಷ್ಟಿಸಿ ಸ್ಫೋಟಿಸಬಹುದು. ಕಚ್ಚಾ ವಸ್ತುಗಳ ಪ್ರಮಾಣ ಹೆಚ್ಚಾದಂತೆ ತೀವ್ರತೆ ಪಡೆದುಕೊಳ್ಳುತ್ತೆ. ಜಿಲೇಟಿನ್​ಗಳನ್ನ ಬಳಸಿ ಈ ಪ್ಲಾಸ್ಟಿಕ್ ಸ್ಫೋಟಕ ತಯಾರಿಕೆ ಮಾಡಲಾಗಿದೆ. ಪುಟ್ಟಿ ಎಕ್ಸ್​ಪ್ಲೋಸಿವ್ ಅಂತಲೂ ಈ ಪ್ಲಾಸ್ಟಿಕ್ ಎಕ್ಸ್​ಪ್ಲೋಸಿವ್​ಗಳನ್ನ ಕರೆಯಲಾಗುತ್ತದೆ. ಈ ರೀತಿ ಮಾಡಿರುವ ಡಿವೈಸನ್ನು ಯಾವುದೇ ಮೆಟಲ್ ಡಿಟೆಕ್ಟರ್ ಕಂಡು ಹಿಡಿಯಲ್ಲ. ಭದ್ರತಾ ಸಿಬ್ಬಂದಿ ಕಣ್ಣುತಪ್ಪಿಸಿ ಸಲೀಸಾಗಿ ತೆಗೆದುಕೊಂಡು ಹೋಗಬಹುದು. ಆದ್ರೆ ಸ್ಲೀಪರ್ ಸೆಲ್​ಗಳಿಲ್ಲದೆ IED ಬಾಂಬ್ ತಯಾರಿಸುವುದು ಸುಲಭವಲ್ಲ. ಸ್ಲೀಪರ್ ಸೆಲ್​ ಪೂರೈಸುವ ಬಿಡಿ ವಸ್ತುಗಳಿಂದ ಬಾಂಬ್ ತಯಾರಿಕೆ ಮಾಡಲಾಗುತ್ತದೆ.

ಇನ್ನು ಬಾಂಬ್​ ಸ್ಫೋಟ ಮಾಡಿದ್ದು ಹೇಗೆ ಅನ್ನೋದನ್ನ ಕಂಡು ಹಿಡಿಯಲು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಟೈಮರ್ ಅಥವಾ ರಿಮೋಟ್​ ಮೂಲಕ ಸ್ಫೋಟಿಸಿದ್ರಾ ಅನ್ನೋ ಬಗ್ಗೆ ತನಿಖೆ

ಕೆಫೆ ಸ್ಪೋಟ ತನಿಖೆ ವೇಳೆ ಮತ್ತೊಂದು ಮಾಹಿತಿ ಲಭ್ಯವಾಗಿದೆ. ಸ್ಪೋಟದ ತೀವ್ರತೆ ನೋಡಿದ್ರೆ ಯಾರೋ ಟ್ರೈನಿಂಗ್ ಪಡೆದು ಕೃತ್ಯ ಎಸಗಿರೋದು ಸ್ಪಷ್ಟವಾಗಿದೆ. ಯೂಟೂಬ್ ನೋಡಿ ಸ್ಪೋಟಕ ತಯಾರಿಸಿರೋದು ತೀರಾ ಕಮ್ಮಿ. ಮೆಕ್ಯಾನಿಕ್, ಎಲೆಕ್ಟ್ರೀಷಿಯನ್, ಇಂಜಿನಿಯರ್​ಗಳಿಂದ ಬಾಂಬ್ ತಯಾರಾಗಿರುವ ಸಾಧ್ಯತೆ ಇದೆ. ಬ್ಯಾಟರಿ ಕನೆಕ್ಟ್ ಮಾಡಿ ಸ್ಪೋಟ ಮಾಡಿರೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದ್ರೆ ಯಾವ ರೀತಿ ಸ್ಪೋಟ ಮಾಡಿರಬಹುದು ಎಂಬ ಅನುಮಾನ ಮೂಡಿದ್ದು, ಬ್ಯಾಗ್ ಇಟ್ಟು ಹೋದ ಕೆಲವೇ ಕ್ಷಣಗಳಲ್ಲಿ ಸ್ಪೋಟವಾಯ್ತಾ ಅಥವಾ ಟೈಮರ್ ಇಲ್ಲ ರಿಮೋಟ್​ ಮೂಲಕ ಸ್ಫೋಟ ಮಾಡಲಾಗಿದ್ಯಾ ಅಂತ ತನಿಖೆ ನಡೆಸಲಾಗುತ್ತಿದೆ.

ಹೋಟೆಲ್​, ಐಟಿ ಕಂಪನಿಗಳು, ಪಿಜಿಗಳಲ್ಲೂ ತಲಾಶ್​

ನಿನ್ನೆಯಿಂದಲೇ ಅಲರ್ಟ್ ಆಗಿರುವ ಪೊಲೀಸರು ಬೆಂಗಳೂರಿನ ಎಲ್ಲಾ ಲಾಡ್ಜ್ ಮಾಲೀಕರಿಗೂ ಸ್ಟೇ ಆಗಿರುವವರ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಅಕ್ಕಪಕ್ಕದ 200 ಕ್ಕೂ ಹೆಚ್ಚು ಸಿಸಿಟಿವಿ ಡಿವಿಆರ್​ ವಶಕ್ಕೆ ಪಡೆದಿರುವ ಆಂತರಿಕ ಭದ್ರತಾದಳ, ಸಿಸಿಬಿ, ವೈಟ್ ಫೀಲ್ಡ್​​ ವಿಭಾಗದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಐಟಿ ಕಂಪನಿಗಳಿಂದ ಮಾಹಿತಿ ಸಂಗ್ರಹಿಸುತ್ತಿರುವ ಅಧಿಕಾರಿಗಳು ಹೊಸದಾಗಿ ಕೆಲಸಕ್ಕೆ ಸೇರಿಕೊಂಡವರು, ಇತ್ತಿಚೆಗೆ ಕೆಲಸ ಬಿಟ್ಟವರ ಮಾಹಿತಿಯನ್ನೂ ಕಲೆ ಹಾಕುತ್ತಿದ್ದಾರೆ. ಇನ್ನೂ ಐಟಿ ಹಬ್​ ಆಗಿರೋದ್ರಿಂದ ಪಿಜಿಗಳ ಬಳಿಯೂ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ.

ಸಾಮಾನ್ಯರಂತೆ ಬಿಎಂಟಿಸಿಯಲ್ಲಿ ಓಡಾಡಿದ್ದ ಬಾಂಬರ್

ಶಂಕಿತನ ಸುಳಿವು ಪೊಲೀಸರಿಗೆ ಸಿಕ್ಕಿದ್ದು ಬಿಎಂಟಿಸಿ ಬಸ್​ಗಳಿಂದ ಅಂತ ಹೇಳಲಾಗ್ತಿದೆ. ಯಾಕಂದ್ರೆ ಶಂಕಿತ ಬಿಎಂಟಿಸಿ ಬಸ್‌ನಲ್ಲಿ ಓಡಾಡಿದ್ದ. ಈ ಬಗ್ಗೆ ಬಿಎಂಟಿಸಿಯಿಂದಲೂ ಪೊಲೀಸರು ಮಾಹಿತಿ ಪಡೆದಿದ್ದಾರೆ. ಅಲ್ಲದೆ ಆತ ಓಡಾಡಿರುವ ಬಿಎಂಟಿಸಿ ಬಸ್‌ನ ಸಿಸಿಟಿವಿ ಫೂಟೇಜ್‌ ಕೂಡ ಕಲೆಕ್ಟ್ ಮಾಡಿದ್ದಾರೆ.

ಒಟ್ಟಾರೆ 2014ರಲ್ಲಿ ಚರ್ಚ್​ಸ್ಟ್ರೀಟ್​ನಲ್ಲಿ ನಡೆದಿದ್ದ ಬ್ಲಾಸ್ಟ್​ ಬಳಿಕ ಈಗ ಮತ್ತೆ ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್​ ಆಗಿದೆ. ಈ ಬಗ್ಗೆ ಪೊಲೀಸರು ಮಿಂಚಿನಂತೆ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rameshwaram Cafe Blast: ಏನಿದು IED ಡಿವೈಸ್? ಬಾಂಬ್ ಬ್ಲಾಸ್ಟ್​​ಗೆ ಇದನ್ನು ಬಳಕೆ ಮಾಡಿದ್ರಾ?

https://newsfirstlive.com/wp-content/uploads/2024/03/Blast-1.jpg

Load More