newsfirstkannada.com

ನಾಳೆಯೇ ರಾಮೇಶ್ವರಂ ಕೆಫೆ ಸ್ಫೋಟ ಕೇಸ್​ ಎನ್ಐಎಗೆ; ಇದರ ಹಿಂದಿದ್ಯಾ ಉಗ್ರರ ಕೈವಾಡ..?

Share :

Published March 1, 2024 at 8:52pm

  ರಾಮೇಶ್ವರ ಕೆಫೆಯಲ್ಲಿ ಸ್ಫೋಟ; ತನಿಖೆ ಚುರುಕು

  FIR ದಾಖಲಿಸಲು NIA ಅಧಿಕಾರಿಗಳು ಸಿದ್ಧತೆ..!

  ಉಗ್ರರ ಕರಿನೆರಳಿನ ಬಗ್ಗೆ ಪೊಲೀಸರಿಂದ ಮಾಹಿತಿ

ಬೆಂಗಳೂರು: ರಾಮೇಶ್ವರ ಕೆಫೆಯಲ್ಲಿ ಸ್ಫೋಟ ಸಂಬಂಧ ತನಿಖೆ ಚುರುಕುಗೊಂಡಿದೆ. ಎನ್​ಐಎ ಅಧಿಕಾರಿಗಳು ತನಿಖೆ ನಡೆಸ್ತಿದ್ದು ಎಫ್​ಐಆರ್​ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ. ಉಗ್ರರ ಕರಿನೆರಳಿನ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಬ್ಯಾಟರಿ, ನಟ್, ಬೋಲ್ಟ್ ಪತ್ತೆಯಾಗಿದ್ದು ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿರುವ ಅನುಮಾನ ದಟ್ಟವಾಗಿದೆ.

ರಾಮೇಶ್ವರ ಕೆಫೆಯಲ್ಲಿ ನಿಗೂಢ ವಸ್ತು ಸ್ಫೋಟ..!
FIR ದಾಖಲಿಸಲು NIA ಅಧಿಕಾರಿಗಳು ಸಿದ್ಧತೆ

ರಾಮೇಶ್ವರ ಕೆಫೆಯಲ್ಲಿ ನಿಗೂಢ ವಸ್ತು ಸ್ಫೋಟ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ. ಸದ್ಯ ಘಟನಾ ಸ್ಥಳದಲ್ಲಿ ಎಫ್​ಎಸ್​​ಎಲ್ ಅಧಿಕಾರಿಗಳು ಶೋಧಕಾರ್ಯ ನಡೆಸ್ತಿದ್ದು ಮಾಹಿತಿ ಕಲೆ ಹಾಕ್ತಿದ್ದಾರೆ. ಎನ್​ಐಎ ಅಧಿಕಾರಿಗಳು ತನಿಖೆ ನಡೆಸ್ತಿದ್ದು ಎಫ್​ಐಆರ್​ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಐಇಡಿ ಸ್ಫೋಟಗೊಂಡ ಮಾಹಿತಿ ದೊರಕಿದ್ದು ರಾಷ್ಟ್ರೀಯ ಭದ್ರತಾ ವಿಚಾರ ಆಗಿರೋದ್ರಿಂದ ತೀವ್ರ ತನಿಖೆ ನಡೆಸ್ತಿದ್ದಾರೆ.

ಉಗ್ರರ ಕರಿನೆರಳಿನ ಬಗ್ಗೆಯೂ ಪೊಲೀಸರಿಂದ ಮಾಹಿತಿ

ಇನ್ನು ಸ್ಫೋಟ ನಡೆದ ಸ್ಥಳದಲ್ಲಿ ಕೆಲ ಐಡಿ ಕಾರ್ಡ್​ಗಳೂ ಸಹ​ ಪತ್ತೆಯಾಗಿದ್ದು, ಹೆಚ್​ಎಎಲ್​ ಪೊಲೀಸರು ಸಿಸಿಟಿವಿ, ಡಿವಿಆರ್​ ವಶಕ್ಕೆ ಪಡೆದಿದ್ದಾರೆ.. ಹೋಟೆಲ್​ಗೆ ಬ್ಯಾಗ್​ ತಂದಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದಾರೆ.. ನಾಳೆ ಎನ್​ಐಎಗೆ ಕೇಸ್ ವರ್ಗಾವಣೆ ಮಾಡಲಿದ್ದಾರೆ.. ಉಗ್ರರ ಕೆರಿನೆರಳಿನ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಸ್ಫೋಟ ಸ್ಥಳದಲ್ಲಿ ಬ್ಯಾಟರಿ, ನಟ್‌, ಬೋಲ್ಟ್‌​ ಪತ್ತೆ!
ವಿಧ್ವಂಸಕ ಕೃತ್ಯ ನಡೆಸಲು ಸಂಚಿನ ಬಗ್ಗೆ ಅನುಮಾನ!

ರಾಮೇಶ್ವರ ಕೆಫೆಯಲ್ಲಿ ಬ್ಲಾಸ್ಟ್ ಆಗಿರೋ ಜಾಗದಲ್ಲಿ ಪತ್ತೆಯಾಗಿರೋ ನಟ್ ಬೋಲ್ಟ್​​​​ಗಳು, ಬ್ಯಾಟರಿಗಳು ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.. ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ತನಿಖೆ ಮುಂದುವರಿದಿದೆ.

ಇನ್ನು ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಸಿದ್ದರಾಮಯ್ಯ ತನಿಖೆ ನಡೀತಿದೆ.. ಸಣ್ಣ ಪ್ರಮಾಣದಲ್ಲಿ ಸ್ಫೋಟ ಆಗಿದ್ರೂ ಪರಿಣಾಮಕಾರಿಯಾಗಿದೆ. ಶೀಘ್ರವೇ ಆರೋಪಿಗಳನ್ನ ಪತ್ತೆ ಹಚ್ಚಲಾಗುವುದು ಎಂದಿದ್ದಾರೆ. ಇನ್ನು ಬ್ಲಾಸ್ಟ್ ಆಗಿರೋ ಬಗ್ಗೆ ಯಾರೂ ಆತಂಕ ಪಡೋದು ಬೇಕಿಲ್ಲ ಡಿಸಿಎಂ ಡಿಕೆಶಿ ಭರವಸೆ ನೀಡಿದ್ದಾರೆ.

ಇನ್ನು ಬ್ಲಾಸ್ಟ್ ಬಗ್ಗೆ ಪ್ರತಿಕ್ರಿಯಿಸಿರೋ ಗೃಹಸಚಿವ ಡಾ. ಜಿ ಪರಮೇಶ್ವರ್ ಘಟನೆಯಲ್ಲಿ ಒಂಬತ್ತು ಜನರಿಗೆ ಗಾಯಗಳಾಗಿವೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಯಾರಿಗೂ ಗಂಭೀರ ಗಾಯ ಆಗಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಒಟ್ಟಿನಲ್ಲಿ ನಿಗೂಢ ಸ್ಫೋಟದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದ್ದು ತನಿಖೆ ಬಳಿಕ ಸ್ಫೋಟದ ನಿಗೂಢತೆ ಬಯಲಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆಯೇ ರಾಮೇಶ್ವರಂ ಕೆಫೆ ಸ್ಫೋಟ ಕೇಸ್​ ಎನ್ಐಎಗೆ; ಇದರ ಹಿಂದಿದ್ಯಾ ಉಗ್ರರ ಕೈವಾಡ..?

https://newsfirstlive.com/wp-content/uploads/2024/03/NIA.jpg

Load More