newsfirstkannada.com

Breaking News: ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಆರೋಪಿ ಸೇರಿ ಒಟ್ಟು ನಾಲ್ವರು ವಶಕ್ಕೆ

Share :

Published March 2, 2024 at 9:31am

  ಮಾಸ್ಕ್​ ಹಾಕಿಕೊಂಡು, ಟೋಪಿ ಧರಿಸಿ ಓಡಾಡಿದ್ದ ಶಂಕಿತ ವಶಕ್ಕೆ

  ಕೆಫೆಯಿಂದ ಹೊರ ಬಂದು ರಸ್ತೆಯಲ್ಲಿ ವೇಗವಾಗಿ ಹೋಗಿದ್ದ ವ್ಯಕ್ತಿ

  ಉದ್ಯಾನ ನಗರಿಯನ್ನು ಬೆಚ್ಚಿ ಬೀಳಿಸಿದ್ದ ಕೆಫೆಯಲ್ಲಿನ ಸ್ಫೋಟ..!

ಬೆಂಗಳೂರು: ಕುಂದಲಹಳ್ಳಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಯನ್ನು ಇಂಟೆಲಿಜೆನ್ಸ್ ತಂಡ ವಶಕ್ಕೆ ಪಡೆದಿದೆ. ಈ ಶಂಕಿತ ಸೇರಿ ಇನ್ನು ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಸಿಟಿವಿ ದೃಶ್ಯದಲ್ಲಿ ಸೆರೆಯಾದಂತೆ ಮುಖಕ್ಕೆ ಮಾಸ್ಕ್​ ಹಾಗೂ ತಲೆಗೆ ಟೋಪಿ ಹಾಕಿ ಕೊಂಡಿದ್ದ ವ್ಯಕ್ತಿಯೇ ಶಂಕಿತನೆಂದು ಪತ್ತೆ ಹಚ್ಚಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಇಂಟೆಲಿಜೆನ್ಸ್ ತಂಡ ವಶಕ್ಕೆ ಪಡೆದುಕೊಂಡಿದೆ. ಶಂಕಿತ ಆರೋಪಿಗಳು ಇದೆನ್ನೆಲ್ಲ ಏಕೆ ಮಾಡಿದ್ದಾರೆ ಎಂದು ವಿಚಾರಣೆ ನಂತರ ತಿಳಿದು ಬರಲಿದೆ.

ದೂರುದಾರ ರಾಜೇಶ್ ಅವರು ಕೆಫೆಯ ಬೆಸಿನ್ ಬಳಿ ಆರೋಪಿ ಬ್ಯಾಗ್ ಇಡೋದನ್ನ ಗಮನಿಸಿದ್ದರು. ಹೋಟೆಲ್​ಗೆ ಬಂದವನೇ ಆತುರ ಆತುರವಾಗಿ 11.30ಗೆ ರವೆ ಇಡ್ಲಿ ತಿಂದು ಬ್ಯಾಗ್ ಇಟ್ಟು ಹೋಗಿದ್ದಾನೆ. ಹೀಗಾಗಿ ರಾಜೇಶ್ ಅವರೇ ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಐಪಿಸಿ ಸೆಕ್ಷನ್​ 324 ಪ್ರಕಾರ ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯವನ್ನು ಉಂಟುಮಾಡುವುದು. 307 ಕೊಲೆ ಯತ್ನ, 120B ಕ್ರಿಮಿನಲ್ ಪಿತೂರಿಯಡಿ ಕೇಸ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಆರೋಪಿ ಸೇರಿ ಒಟ್ಟು ನಾಲ್ವರು ವಶಕ್ಕೆ

https://newsfirstlive.com/wp-content/uploads/2024/03/RAMESHWARA_KEFE_ACCUSED.jpg

Load More