newsfirstkannada.com

ರಾಮೇಶ್ವರಂ ಕೆಫೆ ಕೇಸ್​; ಮುಖಕ್ಕೆ ಮಾಸ್ಕ್, ತಲೆಗೆ ಟೋಪಿ.. ಸ್ಫೋಟಕ ವಸ್ತು ಇಟ್ಟು ಹೋದ ವ್ಯಕ್ತಿ ಇವರೇನಾ..?

Share :

Published March 2, 2024 at 8:32am

Update March 2, 2024 at 8:39am

    ಕೆಫೆಯಿಂದ ಹೊರ ಬಂದು ರಸ್ತೆಯಲ್ಲಿ ವೇಗವಾಗಿ ಹೋಗ್ತಿದ್ದಾನೆ

    ಸಿಲಿಕಾನ್​ ಸಿಟಿಯನ್ನೇ ಬೆಚ್ಚಿ ಬೀಳಿಸಿದೆ ರಾಮೇಶ್ವರಂ ಕೆಫೆ ಸ್ಫೋಟ

    ಶಂಕಿತ ಆರೋಪಿಯು ಕೆಫೆಯಲ್ಲೇ ಎಷ್ಟು ಗಂಟೆ ಓಡಾಡಿದ್ದ?

ಬೆಂಗಳೂರು: ಕುಂದನಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟವು ಇಡೀ ಸಿಲಿಕಾನ್​ ಸಿಟಿ ಮಂದಿಯನ್ನು ಆತಂಕಕ್ಕೆ ತಳ್ಳಿದೆ. ಸರ್ಕಾರ ಇದನ್ನು ಗಂಭಿರವಾಗಿ ಪರಿಗಣಿಸಿದ್ದು ಆರೋಪಿ ಪತ್ತೆಗಾಗಿ 8 ತಂಡಗಳನ್ನು ರಚನೆ ಮಾಡಿದೆ. ತನಿಖಾ ದಳವು ಆರೋಪಿಯ ಜಾಡು ಹಿಡಿದು ಹೊರಟಿದ್ದು, ಶಂಕಿತ ಆರೋಪಿಯೊಬ್ಬನ ಸಿಸಿಟವಿ ದೃಶ್ಯಾವಳಿ ವೈರಲ್ ಆಗಿದೆ.

ಶಂಕಿತ ಆರೋಪಿಯು ಕೆಫೆಯೊಳಗೆ ಹೋಗಿ ಸುಮಾರು ಒಂದು ಗಂಟೆ ಕಾಲ ಓಡಾಟ ನಡೆಸಿದ್ದಾನೆ. 11:15 ಗಂಟೆಯೊಳಗೆ ಒಳ ಪ್ರವೇಶ ಮಾಡಿ 12:10 ಒಳಗೆ ಅಲ್ಲೇ ತಿರುಗಾಡಿದ್ದಾನೆ. ಸೈಡ್ ಬ್ಯಾಗ್ ಹಾಕಿಕೊಂಡು ಅನುಮಾನಾಸ್ಪದವಾಗಿ ತಿರುಗಾಡುತ್ತಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೈಡ್ ಬ್ಯಾಗ್​​ ಒಳಗೆ ಇನ್ನೊಂದು ಬ್ಯಾಗ್ ಇಟ್ಟುಕೊಂಡಿದ್ದ. ಅದರಲ್ಲಿ ಸ್ಫೋಟಕ ಇತ್ತು ಎನ್ನಲಾಗಿದೆ. ಕೆಫೆಗೆ ಬಂದಿರುವ ಶಂಕಿತ ಜನರ ಕಣ್ಣಿಗೆ ಮತ್ತು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗದ ಜಾಗ ಹುಡುಕಾಟ ನಡೆಸಿ ಕೊನೆಗೆ ಕೈ ತೊಳೆಯುವ ಜಾಗದಲ್ಲಿದ್ದ ಡೆಸ್ಟ್ ಬಿನ್​ನಲ್ಲಿ ಬ್ಯಾಗ್ ಬಿಸಾಡಿ ಎಸ್ಕೇಪ್ ಪರಾರಿಯಾಗಿದ್ದಾನೆ.

ಸಿಸಿಟಿವಿ ದೃಶ್ಯದಲ್ಲಿ ಶಂಕಿತನು ಕೆಫೆಯಿಂದ ಹೊರ ಬಂದ ಬಳಿಕ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದಾನೆ. ಆದರೆ ಗುರುತು ಸಿಗಬಾರದು ಎಂದು ಆರೋಪಿಯು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದು ತಲೆಗೆ ಟೋಪಿ ಧರಿಸಿದ್ದಾನೆ. ಕೆಫೆ ಜಾಗದಲ್ಲಿ ಅನುಮಾನಸ್ಪದವಾಗಿ ಓಡಾಡಿ ಹೊರ ಬಂದಿದ್ದಾನೆ. ಹೀಗಾಗಿ ಇದೇ ವ್ಯಕ್ತಿ ಸ್ಫೋಟಕ ವಸ್ತುಗಳನ್ನು ಇಟ್ಟಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರಂ ಕೆಫೆ ಕೇಸ್​; ಮುಖಕ್ಕೆ ಮಾಸ್ಕ್, ತಲೆಗೆ ಟೋಪಿ.. ಸ್ಫೋಟಕ ವಸ್ತು ಇಟ್ಟು ಹೋದ ವ್ಯಕ್ತಿ ಇವರೇನಾ..?

https://newsfirstlive.com/wp-content/uploads/2024/03/RAMESHWARA_KEFE.jpg

Load More