newsfirstkannada.com

ರಾಮೇಶ್ವರಂ ಕೆಫೆ ಸ್ಫೋಟದಲ್ಲಿ 9 ಮಂದಿಗೆ ಗಾಯ.. ಗಾಯಾಳುಗಳ ಸ್ಥಿತಿ ಹೇಗಿದೆ? ವೈದ್ಯರು ಏನಂದ್ರು..?

Share :

Published March 2, 2024 at 7:32am

    ಬ್ರೂಕ್ ಫೀಲ್ಡ್-ವೈದೇಹಿ ಆಸ್ಪತ್ರೆಯಲ್ಲಿ ಡಾಕ್ಟರ್ ಹೇಳಿರುವುದು ಏನು?

    ಗಾಯಾಳುಗಳನ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ

    ರಾಮೇಶ್ವರಂ ಕೆಫೆಯಲ್ಲಿನ ಬಾಂಬ್​ ಸ್ಫೋಟದಿಂದ ವಸ್ತುಗಳು ಛಿದ್ರ ಛಿದ್ರ

ಶಾಂತವಾಗಿದ್ದ ಬೆಂಗಳೂರು ನಿನ್ನೆ ಬೆಚ್ಚಿ ಬಿದ್ದಿದೆ. ವೈಟ್‌ ಫೀಲ್ಡ್‌ ಬಳಿಯ ಕುಂದನಹಳ್ಳಿಯಲ್ಲಿರೋ ರಾಮೇಶ್ವರಂ ಕೆಫೆಯಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಈ ನಿಗೂಢ ವಸ್ತುವಿನ ಸ್ಫೋಟದಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ರಾಜಕೀಯ ನಾಯಕರು ಹಾಸ್ಪಿಟಲ್‌ಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಕೇಸರಿ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನ ಕುಂದನಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿನ ಬಾಂಬ್​ ಸ್ಫೋಟದಿಂದ ವಸ್ತುಗಳು ಛಿದ್ರ ಛಿದ್ರವಾಗಿ ಬಿದ್ದಿವೆ. ಕಂಬಗಳು ಎಲ್ಲ ಮುರಿದು ಬಿದ್ದಿವೆ. ಜನ ಗಾಬರಿಗೊಂಡು ಓಡಿ ಹೋಗಿದ್ದಾರೆ.

ಬ್ರೂಕ್ ಫೀಲ್ಡ್-ವೈದೇಹಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ

ದುಷ್ಕರ್ಮಿಗಳ ಅಟ್ಟಹಾಸಕ್ಕೆ ಅಮಾಯಕರು ಆಸ್ಪತ್ರೆ ಸೇರುವಂತಾಗಿದೆ. 9 ಮಂದಿ ಬ್ಲಾಸ್‌ನ ಭೀಕರತೆಯಲ್ಲಿ ಬೆಂದು ಹಾಸ್ಪಿಟಲ್ ಬೆಡ್‌ ಮೇಲೆ ನರಳಾಡುತ್ತಿದ್ದಾರೆ. ಇದೀಗ ಗಾಯಾಳುಗಳ ಸಂಪೂರ್ಣ ಮಾಹಿತಿ ಲಭ್ಯವಾಗಿದೆ. ಜೊತೆಗೆ ಬ್ರೂಕ್‌ ಪೀಲ್ಡ್‌ ಮತ್ತು ವೈದೇಹಿ ಆಸ್ಪತ್ರೆಯಲ್ಲಿ ಎಲ್ಲ ಗಾಯಾಳುಗಳಿಗೆ ಚಿಕಿತ್ಸೆ ನಡೆಯುತ್ತಿದೆ. ಇನ್ನೂ ಬಾಂಬ್ ಬ್ಲಾಸ್ಟ್‌ನಲ್ಲಿ ಗಾಯಗೊಂಡವರ ಡಿಟೇಲ್ಸ್ ನೋಡೋದಾದ್ರೆ,

ಗಾಯಾಳುಗಳ ವಿವರ

  • ಅಸ್ಸಾಂ ಹಜೋರಿಯ 19 ವರ್ಷದ ಫಾರೂಖ್ ಹುಸೇನ್‌
  • ಐಟಿಪಿಎಲ್‌ನಲ್ಲಿ ಕೆಲಸ ಮಾಡ್ತಿರುವ ಫಾರೂಖ್ ಹುಸೇನ್
  • ಬಿಹಾರ ಮೂಲದ 23 ವರ್ಷದ ದೀಪಾಂಶು ಕುಮಾರ್‌
  • ಗ್ರೀನ್ ಅವಿನ್ಯೂ ಐಟಿಪಿಎಲ್‌ನಲ್ಲಿ ದೀಪಾಂಶು ವಾಸ
  • ಮೈಸೂರು ಮೂಲದ 45 ವರ್ಷದ ಸ್ವರ್ಣಾಂಭಗೆ ಗಾಯ
  • ವೈಟ್ ಫೀಲ್ಡ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ವಾಸವಿದ್ರು
  • ಈ ಮೂವರಿಗೆ ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ
  • 25 ವರ್ಷದ ನವ್ಯಾ, 67 ವರ್ಷದ ಶ್ರೀನಿವಾಸ್‌ಗೆ ಗಾಯ
  • 25 ವರ್ಷದ ನಾಗ ಶ್ರೀ, 34 ವರ್ಷದ ಬಾಲಮುರುಳಿ
  • 30 ವರ್ಷದ ಮೋನಿ, 41 ವರ್ಷದ ಶಂಕರ್‌ಗೆ ಚಿಕಿತ್ಸೆ
  • 6 ಮಂದಿ ಗಾಯಾಳುಗಳಿಗೆ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇನ್ನೂ ಮೈಸೂರು ಮೂಲದ ಸ್ವರ್ಣಾಂಭಗೆ 40 ಪರ್ಸೆಂಟ್ ಸುಟ್ಟ ಗಾಯಗಳಾಗಿದ್ದು, ಕಿವಿಯ ಭಾಗಕ್ಕೆ ಪೆಟ್ಟಾಗಿದೆ ಅಂತ ಬ್ರೂಕ್‌ ಫೀಲ್ಡ್ ಆಸ್ಪತ್ರೆಯ ಎಂಡಿ ಪ್ರದೀಪ್ ಕುಮಾರ್ ಮಾಹಿತಿ ನೀಡಿದ್ದಾರೆ. ಇನ್ನಿಬ್ಬರ ಸ್ಥಿತಿ ನಾರ್ಮಲ್ ಇದೆ ಅಂತಲೂ ಮಾಹಿತಿ ನೀಡಿದ್ದಾರೆ.

ಸರ್ಜರಿಯಲ್ಲಿ ಕಿವಿಯ ಓಲೆ ಎಲ್ಲ ಕಟ್ ಆಗಿತ್ತು. ಗ್ಲಾಸ್​ ಪ್ಲಾಸ್ಟಿಕ್​ ಅನ್ನುವುದು ಗೊತ್ತಾಗದ ವಸ್ತು ಒಂದುವಿನ ನಾಲ್ಕೈದು ಪೀಸ್​ಗಳು ಗಾಯಾಳುವಿನ ಕೆನ್ನೆ ಒಳಗೆ ಹೋಗಿವೆ. ಅದನ್ನು ತೆಗೆದು ಕ್ಲೀಯರ್ ಮಾಡಿ ಸರ್ಜರಿ ಪೂರ್ಣಗೊಳಿಸಿದ್ದಾರೆ. ಎದೆಯಲ್ಲಿ ಚರ್ಮ ಪೂರ್ತಿ ಕಿತ್ತುಕೊಂಡು ಬಂದಿದ್ದು ಅದನ್ನು ಸೇರಿಸೋಕೆ ಆಗಿಲ್ಲದ್ದಕ್ಕೆ ಆ ಭಾಗ ತೆಗೆದು ಸರ್ಜರಿ ಮುಗಿಸಿದ್ದದಾರೆ.

ಪ್ರದೀಪ್ ಕುಮಾರ್, ಬ್ರೂಕ್‌ ಫೀಲ್ಡ್‌ ಆಸ್ಪತ್ರೆ ಎಂಡಿ

ಆಸ್ಪತ್ರೆಗೆ ಭೇಟಿ ಮಾಡಿ ರಾಜ್ಯಪಾಲರಿಂದ ಆರೋಗ್ಯ ವಿಚಾರಣೆ

ಬಾಂಬ್ ಬ್ಲಾಸ್ಟ್‌ನಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರೋ ಗಾಯಾಳುಗಳನ್ನ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಭೇಟಿ ಮಾಡಿದ್ರು. ಬ್ರೂಕ್‌ ಫೀಲ್ಡ್‌, ವೈದೇಹಿ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ರು. ಜೊತೆಗೆ ವಿಪಕ್ಷ ನಾಯಕ ಆರ್, ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡಾ ಗಾಯಾಳುಗಳಿಗೆ ಸಾಂತ್ವನ ಹೇಳಿದ್ರು.

‘ಇದು 100% ಭಯೋತ್ವಾದನೆ ಕೃತ್ಯ’

ಬ್ರ್ಯಾಂಡ್​ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ, ಬಾಂಬ್ ಬೆಂಗಳೂರು ಅಂತ ಮಾಡಬೇಡಿ. ಕುಕ್ಕರ್ ಬ್ಲಾಸ್ಟ್ ಮಾಡಿ ಹಿಂದೂಗಳನ್ನ ಸಾಯಿಸಬೇಕು ಅಂತ ಬಂದಿದ್ದನಲ್ಲ ಅವರನ್ನ ಬ್ರದರ್ ಎಂದು ಕರೆದಿದ್ದೀರಿ. ಈ ಕೆಫೆಯಲ್ಲಿ ಆದ ಘಟನೆಗೆ ಸಂಬಂಧಿಸಿದವರಿಗೆ ಅಂಕಲ್ ಎಂದು ಕರೆಯುತ್ತೀರಿ ಏನು ಅಂತ ಭಯವಾಗುತ್ತಿದೆ.

ಆರ್. ಅಶೋಕ್, ವಿಪಕ್ಷ ನಾಯಕ

ಕೆಫೆಯಲ್ಲಿ ಆಗಿರುವಂತ ಘಟನೆ ಖಂಡನೀಯವಾದದ್ದು. ಸರ್ಕಾರದ ನೀತಿ ಮತ್ತು ನಿಯತ್ತು ಇದರ ಕಾರಣದಿಂದ ಕುಮ್ಮಕ್ಕು ಸಿಗುತ್ತಿದೆ.

ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

ಇದೊಂದು ಸ್ಫೋಟದಿಂದ ಬೆಂಗಳೂರಿನ ಶಾಂತಿ ಭಂಗವಾಗಿದೆ. ಅದು ಕೂಡ ದೊಡ್ಡ ದೊಡ್ದ ಐಟಿ ಕಂಪನಿಗಳೇ ಇರುವ ಪ್ರದೇಶದಲ್ಲಿ ಇಂಥಾದೊಂದು ದುರಂತ ಸಂಭವಿಸಿದ್ದು, ಪೊಲೀಸ್​ ಇಲಾಖೆ ಮತ್ತಷ್ಟು ಎಚ್ಚರ ವಹಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರಂ ಕೆಫೆ ಸ್ಫೋಟದಲ್ಲಿ 9 ಮಂದಿಗೆ ಗಾಯ.. ಗಾಯಾಳುಗಳ ಸ್ಥಿತಿ ಹೇಗಿದೆ? ವೈದ್ಯರು ಏನಂದ್ರು..?

https://newsfirstlive.com/wp-content/uploads/2024/03/Rameshwaram-Cafe-4.jpg

Load More