newsfirstkannada.com

ರಾಮೇಶ್ವರಂ ಕೆಫೆ ರೀ ಓಪನ್.. ಇನ್ಮುಂದೆ ಹೈ ಸೆಕ್ಯೂರಿಟಿಗೆ ಮಾಲೀಕರ ನಿರ್ಧಾರ; ಏನದು?

Share :

Published March 8, 2024 at 12:40pm

  ರಾಮೇಶ್ವರಂ ಕೆಫೆಯಲ್ಲಿ ಬೆಳಗ್ಗೆಯೇ ಹೋಮ-ಹವನ ಪೂಜಾ‌ ಕಾರ್ಯ

  ಗಣೇಶನ ಪೂಜೆ, ಲಕ್ಷ್ಮಿ ಪೂಜೆ, ಮಹಾಸುದರ್ಶನ ನರಸಿಂಹ ಹೋಮ

  ನಾಳೆಯಿಂದ ಪ್ರತಿಯೊಬ್ಬ ಗ್ರಾಹಕರನ್ನು ಚೆಕ್‌ ಮಾಡುವ ವಿಶೇಷ ವ್ಯವಸ್ಥೆ

ಬೆಂಗಳೂರು: ಬಾಂಬ್ ಬ್ಲಾಸ್ಟ್‌ ಆದ ಒಂದು ವಾರದ ಬಳಿಕ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯನ್ನು ರೀ ಓಪನ್‌ ಮಾಡಲಾಗುತ್ತಿದೆ. ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಕೆಫೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದೆ. ರಾಮೇಶ್ವರಂ ಕೆಫೆ ಸಿಬ್ಬಂದಿ ತಳಿರು-ತೋರಣಗಳಿಂದ ಹೋಟೆಲ್‌ ಅನ್ನು ಸಿಂಗಾರ ಮಾಡಿದ್ರೆ ಪೊಲೀಸರು ಬಿಗಿ ಭದ್ರತೆಯ ಬೆಂಗಾವಲು ನೀಡಿದ್ದಾರೆ.

ರಾಮೇಶ್ವರಂ ಕೆಫೆಯ ಪುನರ್ ಆರಂಭದ ಹಿನ್ನೆಲೆ ಬೆಳಗ್ಗೆಯೇ ಹೋಮ-ಹವನ ಪೂಜಾ‌ ಕಾರ್ಯಗಳು ನಡೆಯಿತು. ಗಣೇಶನ ಪೂಜೆ, ಲಕ್ಷ್ಮಿ ಪೂಜೆ, ಮಹಾಸುದರ್ಶನ ನರಸಿಂಹ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ವಾಸ್ತು ಹೋಮ ನೆರವೇರಿಸಲಾಗಿದೆ. ಶಿವರಾತ್ರಿ ಹಿನ್ನೆಲೆ ಇಂದು ರಾತ್ರಿ ರುದ್ರಾಭಿಷೇಕ ಪೂಜೆ ಹಾಗೂ ಮಹಾರುದ್ರ ಪಾರಾಯಣ ನಡೆಸಲಾಗುತ್ತಿದೆ.

ರಾಮೇಶ್ವರಂ ಕೆಫೆಯಲ್ಲಿ ಇಂದು ಪೂಜಾ ಕಾರ್ಯಗಳು ನಡೆದಿದ್ದು, ನಾಳೆಯಿಂದ ಗ್ರಾಹಕರ ಸೇವೆ ಆರಂಭವಾಗಲಿದೆ. ಪೊಲೀಸ್ ಕಣ್ಗಾವಲಿನಲ್ಲೇ ರಾಮೇಶ್ವರಂ ಕೆಫೆ ಇಂದು ರೀ ಓಪನ್ ಆಗಿದ್ದು, ಪ್ರವೇಶದ್ವಾರದಲ್ಲಿ ಎರಡು ಮೆಟಲ್ ಡಿಟೆಕ್ಟರ್ ಅನ್ನು ಅಳವಡಿಸಲಾಗಿದೆ. ನಾಳೆಯಿಂದ ರಾಮೇಶ್ವರಂ ಕೆಫೆಗೆ ಬರುವ ಪ್ರತಿಯೊಬ್ಬ ಗ್ರಾಹಕರನ್ನು ಚೆಕ್‌ ಮಾಡಿದ ಬಳಿಕವೇ ಒಳಗೆ ಪ್ರವೇಶ ನೀಡಲಾಗುತ್ತಿದೆ.

ಪೂಜಾ ಕಾರ್ಯಗಳ ಬಳಿಕ ದಿ ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ಅವರು ಪ್ರತಿಕ್ರಿಯೆ ನೀಡಿದರು. ನಾಳೆ ಬೆಳಗ್ಗೆ 6.30 ಕ್ಕೆ ರಾಷ್ಟ್ರಗೀತೆ ಹಾಡಿ ರಾಮೇಶ್ವರಂ ಕೆಫೆಯನ್ನು ಪ್ರಾರಂಭ ಮಾಡ್ತೀವಿ. ಪೊಲೀಸ್ ಇಲಾಖೆ ಕೆಲವು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಅದರಂತೆ ಪ್ರವೇಶ ದ್ವಾರದಲ್ಲಿ ಎರಡು ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ. ನಮ್ಮ ಎಲ್ಲಾ ಕೆಫೆಗಳಲ್ಲೂ ಇದೇ ರೀತಿ ಸುರಕ್ಷತಾ ಕ್ರಮಗಳನ್ನ ತೆಗೆದುಕೊಂಡಿದ್ದೇವೆ ಎಂದರು.

ರಾಮೇಶ್ವರಂ ಕೆಫೆಗೆ ಬರುವ ಗ್ರಾಹಕರ ಮೇಲೆ ನಿಗಾಯಿಡಲು ಇನ್ಮುಂದೆ ಇಬ್ಬರು ವಿಶೇಷ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು. ಅವರು ಗ್ರಾಹಕರು ತರುವ ವಸ್ತುಗಳು ಅವರ ನಡವಳಿಕೆಯ ಮೇಲೆ ಗಮನವಹಿಸುವ ಕೆಲಸ ಮಾಡುತ್ತಾರೆ. ಪೊಲೀಸರು ಆದಷ್ಟು ಬೇಗ ಸ್ಫೋಟ ಮಾಡಿದವರ ಪತ್ತೆ ಮಾಡೋ‌ ವಿಶ್ವಾಸ ನಮಗಿದೆ ಎಂದು ರಾಮೇಶ್ವರಂ ಕೆಫೆ ಮಾಲೀಕರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರಂ ಕೆಫೆ ರೀ ಓಪನ್.. ಇನ್ಮುಂದೆ ಹೈ ಸೆಕ್ಯೂರಿಟಿಗೆ ಮಾಲೀಕರ ನಿರ್ಧಾರ; ಏನದು?

https://newsfirstlive.com/wp-content/uploads/2024/03/Rameshwaram-Cafe-8.jpg

Load More