/newsfirstlive-kannada/media/post_attachments/wp-content/uploads/2024/07/ramita-zindal-1.jpg)
ಪ್ಯಾರಿಸ್: 10 ಮೀಟರ್ ಏರ್ ಪಿಸ್ತೂಲ್ನಲ್ಲಿ ಭಾರತಕ್ಕೆ ಈಗಾಗಲೇ ಒಂದು ಪದಕ ಬಂದಿದೆ. ಮನು ಭಕೇರ್ ಕಂಚು ಪದಕ ಗೆಲ್ಲುವ ಮೂಲಕ ಪ್ಯಾರಿಸ್ ನೆಲದಲ್ಲಿ ಭಾರತದ ಹೊಸ ಇತಿಹಾಸ ಬರೆದಿದ್ದಾರೆ. ಈಗ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ, ಮತ್ತೊಬ್ಬ ಮಹಿಳಾ ಶೂಟರ್ ರಮೀತಾ ಜಿಂದಾಲ್. 10ಮೀಟರ್ ಏರ್ ಪಿಸ್ತೂಲ್ ಸ್ಫರ್ಧೆಯಲ್ಲಿ ಈಗಾಗಲೇ ಫೈನಲ್ ಪ್ರವೇಶಿಸಿರುವ ರಮೀತಾ, ಪದಕ ಗೆಲ್ಲುವ ನಿರೀಕ್ಷೆಯನ್ನು ಮೂಡಿಸಿದ್ದಾರೆ. ಶೂಟಿಂಗ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿರುವ ಎರಡನೇ ಭಾರತೀಯ ಮಹಿಳಾ ಶೂಟರ್ ಎಂಬ ಖ್ಯಾತಿಯನ್ನು ಪಡೆದಿರುವ ರಮೀತಾ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಇದನ್ನೂ ಓದಿ :ಪ್ಯಾರಿಸ್ ಅಂಗಳದಲ್ಲಿ ಇತಿಹಾಸ ಬರೆದ ಮನು ಭಕೇರ್: 10 ಮೀಟರ್ ಏರ್ ಪಿಸ್ತೂಲ್ನಲ್ಲಿ ಒಲಿದ ಕಂಚು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ