newsfirstkannada.com

ತೋಟಕ್ಕೆ ಹೋಗಿದ್ದ ಮಹಿಳೆ ಶವವಾಗಿ ಪತ್ತೆ.. ಗಂಡನ ಮನೆಯವರ ಮೇಲೆ ಶಂಕೆ

Share :

Published September 5, 2023 at 12:53pm

    ತೋಟದ ಪೈಪ್​ಲೈನ್ ಬಳಿ ಹೂತಿರುವ ರೀತಿ ಮೃತದೇಹ ಪತ್ತೆ

    ಗುಂಡಿಯಿಂದ ಮೃತದೇಹ ತೆಗೆಯದಂತೆ ಕುಟುಂಬಸ್ಥರ ಪಟ್ಟು.!

    ಹಿಂದೆ ಹಲವು ಬಾರಿ ಗಂಡನ ಮನೆಯವರಿಂದ ಗಲಾಟೆ ಆರೋಪ

ರಾಮನಗರ: ತೋಟಕ್ಕೆ ಹೋಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿರುವ ಘಟನೆ ಚನ್ನಪಟ್ಟಣ ತಾಲೂಕಿನ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದೆ. ಗಂಡನ ಕುಟುಂಬಸ್ಥರು ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ದ್ಯಾವಪಟ್ಟಣ ಗ್ರಾಮದ ಶ್ವೇತಾ ಸಿ‌. ಕೆ. (32) ಎನ್ನುವರು ಶವವಾಗಿ ಪತ್ತೆ ಆಗಿರುವ ಮಹಿಳೆ. ನಿನ್ನೆ ಮನೆಯಿಂದ ತಮ್ಮ ತೋಟಕ್ಕೆ ಹೋಗಿದ್ದರು. ರಾತ್ರಿ ಎಷ್ಟು ಹೊತ್ತು ಆದ್ರೂ ಬಂದಿರಲಿಲ್ಲ. ಇಂದು ಮುಂಜಾನೆ ತೋಟದ ಪೈಪ್​ಲೈನ್ ಗುಂಡಿಯಲ್ಲಿ ಹೂತಿರುವ ರೀತಿಯಲ್ಲಿ ಮೃತದೇಹ ಪತ್ತೆ ಆಗಿದೆ. ಸ್ಥಳಕ್ಕೆ ಎಸ್​ಪಿ ಬರುವವರೆಗೆ ಮೃತದೇಹ ಹೊರ ತೆಗೆಯದಂತೆ ಕುಟುಂಬಸ್ಥರು ಪಟ್ಟು ಹಿಡಿದಿದ್ದರು. ಹೀಗಾಗಿ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಸದ್ಯ ಸಾವಿನ ಸುತ್ತ ಹಲವಾರು ಅನುಮಾನಗಳು ಕಾಡುತ್ತಿದ್ದು ಆಕೆಯ ಅತ್ತೆ, ಮಾವ ಹಾಗೂ ಗಂಡ ಹತ್ಯೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಈ ಹಿಂದೆ ಶ್ವೇತಾ ಜೊತೆ ಹಲವಾರು ಬಾರಿ ಗಂಡನ ಮನೆಯವರು ಗಲಾಟೆ ಮಾಡಿದ್ದರು. ಅಕ್ಕೂರು ಠಾಣೆಯಲ್ಲಿ ಮೂರು ಬಾರಿ ರಾಜೀ‌ಸಂದಾನ ಮಾಡಲಾಗಿತ್ತು. ಹೀಗಾಗಿ ಪತಿಯ ಕುಟುಂಬದ ಮೇಲೆ ಶೆಂಕೆ ವ್ಯಕ್ತಪಡಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಅಕ್ಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೋಟಕ್ಕೆ ಹೋಗಿದ್ದ ಮಹಿಳೆ ಶವವಾಗಿ ಪತ್ತೆ.. ಗಂಡನ ಮನೆಯವರ ಮೇಲೆ ಶಂಕೆ

https://newsfirstlive.com/wp-content/uploads/2023/09/RMG_WOMEN_MURDER.jpg

Load More