/newsfirstlive-kannada/media/post_attachments/wp-content/uploads/2024/04/UP-POLICE.jpg)
ಸೆಕ್ಸ್​ ರಾಕೆಟ್ ಬಗ್ಗೆ ಖಚಿತ ಮಾಹಿತಿ ತಿಳಿದಿದ್ದ ಉತ್ತರ ಪ್ರದೇಶದ ಪೊಲೀಸರು ಆರು ಮಂದಿ ಯುವಕರು, ಮೂವರು ಯುವತಿಯರನ್ನು ಬಂಧಿಸಿದ್ದಾರೆ. ರಾಂಪುರದ ಪಟ್ವಾಯಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಆಧಾರಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಕೊಹ್ಲಿ ಪಟ್ಟದ ಮೇಲೆ ನಾಲ್ವರ ಕಣ್ಣು; ರನ್ ಮಷಿನ್ ಬೆನ್ನು ಬಿದ್ದ ಭಾರತದ ತ್ರಿಮೂರ್ತಿಗಳು..!
ವರದಿಗಳ ಪ್ರಕಾರ, ಬಾಗಿಲು ಬಂದ್ ಆಗಿದ್ದ ಮನೆಯೊಳಗೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ದಂಧೆಯಲ್ಲಿ ಭಾಗಿಯಾಗಿದ್ದರು. ವೇಶ್ಯಾವಾಟಿಕೆ ದಂಧೆ ಜೊತೆಗೆ ಮೋಜು-ಮಸ್ತಿಯಲ್ಲಿ ಬ್ಯುಸಿಯಾಗಿದ್ದರು. ಬಂಧಿತ ಇಬ್ಬರು ಯುವತಿಯರು ರಾಯ್ ಬರೇಲಿಯವರು. ಉಳಿದವರೆಲ್ಲ ರಾಂಪುರ ನಿವಾಸಿಗಳು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮದುವೆಗೂ ಮೊದಲೇ ಅಪ್ಪ.. ಹೈದರಾಬಾದ್ ತಂಡದ ನಾಯಕ ಕಮ್ಮಿನ್ಸ್ ಲವ್ ಸ್ಟೋರಿ ಮಜವಾಗಿದೆ..!
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಕುಮಾರ್​ಗೆ ವೇಶ್ಯಾವಾಟಿಕೆ ದಂಧೆ ಬಗ್ಗೆ ಮಾಹಿತಿ ಸಿಕ್ಕಿತ್ತು. ತತ್ ಕ್ಷಣವೇ ಕಾರ್ಯ ಪ್ರವರ್ತರಾದ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಂಧಿತ ಕೆಲವು ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಐಪಿಎಲ್ ಪ್ರಿಯರಿಗೆ ಬಿಗ್ ಶಾಕ್ ನೀಡಲು ಮುಂದಾದ Jio Cinema..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us