/newsfirstlive-kannada/media/post_attachments/wp-content/uploads/2025/07/SAI_PALLAVI_RANABEER.jpg)
ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಹಾಗೂ ದಕ್ಷಿಣ ಭಾರತದ ಸುಂದರಿ ಸಾಯಿ ಪಲ್ಲವಿ ಅವರು ಮುಖ್ಯ ಪಾತ್ರದಲ್ಲಿ ಅಭಿನಯದ ಬಿಗ್ ಬಜೆಟ್ ಮೂವಿ ರಾಮಾಯಣ ಚಿತ್ರದ ಫಸ್ಟ್ ಲುಕ್ ಮೊನ್ನೆ ಮೊನ್ನೆ ರಿಲೀಸ್ ಆಗಿದೆ. ಸಿನಿಮಾ ರಿಲೀಸ್ಗೂ ಮೊದಲೇ ಸಾಕಷ್ಟು ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿದೆ. ಸ್ಟಾರ್ಕ್ಯಾಸ್ಟ್ನಿಂದ ಸಖತ್ ಹೈಪ್ ಸೃಷ್ಟಿಸಿದೆ. ಇನ್ನು ರಾಮಾಯಣ ಸಿನಿಮಾದಲ್ಲಿ ನಟನೆಗಾಗಿ ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಪಡೆಯುತ್ತಿರುವ ಸಂಭಾವನೆ ಎಷ್ಟು?.
ರಾಮಾಯಣ ಸಿನಿಮಾದ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಬಂದಿದೆ. ಪ್ಯಾನ್ ಇಂಡಿಯಾ ಮೂವಿ ಅಭಿಮಾನಿಗಳಂತೂ ಸಿನಿಮಾ ಬಿಡುಗಡೆಗಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಸಿನಿಮಾದಲ್ಲಿ ಯಾರು ಯಾರು ಯಾವ್ಯಾವ ಪಾತ್ರ ಮಾಡುತ್ತಾರೆ ಎಂದು ಮೊನ್ನೆ ರಿವೀಲ್ ಮಾಡಲಾಗಿದೆ. ಇದರ ಬೆನ್ನಲ್ಲೇ ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ದೊಡ್ಡ ಮೊತ್ತದಲ್ಲೇ ಹಣ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಹರಪ್ಪ, ಮೊಹೆಂಜೋದಾರೋದಂತೆ 3,500 ವರ್ಷಗಳ ಹಿಂದಿನ ಹಳೆಯದಾದ ನಗರ ಪತ್ತೆ..!
3 ನಿಮಿಷ 4 ಸೆಕೆಂಡ್ ಇರುವ ರಾಮಾಯಣದ ಗ್ಲಿಂಪ್ಸ್ ವಿಡಿಯೋಗೆ ಸಖತ್ ರೆಸ್ಪಾನ್ಸ್ ಬಂದಿದೆ. ಸಿನಿಮಾ ಹಿಂದೆ ದೊಡ್ಡ ಮಟ್ಟದಲ್ಲಿ ನಿರ್ದೇಶಕ ನಿತೇಶ್ ತಿವಾರಿ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗಿದೆ. ರಿಲೀಸ್ ಆಗಿರುವ ಫಸ್ಟ್ ಲುಕ್ನಲ್ಲಿ ರಣಬೀರ್ ಕಪೂರ್ ಅವರು ಶ್ರೀರಾಮನ ಪಾತ್ರದಲ್ಲಿ ಕಂಗೊಳಿಸಿದ್ರೆ, ಯಶ್ ರಾವಣನ ಪಾತ್ರದಲ್ಲಿ ಆರ್ಭಟಿಸಿದ್ದಾರೆ. ವಿಶುವಲ್ಸ್ ಫುಲ್ ರಿಚ್ ಆಗಿದ್ದು ವಿಎಫ್ಎಕ್ಸ್ ಕೂಡ ಅದ್ಧೂರಿಯಾಗಿದ್ದರಿಂದ ಸಿನಿಮಾ ಬಗ್ಗೆ ಕೂತುಹಲ ಹೆಚ್ಚಿಸುತ್ತಿವೆ.
ಇನ್ನು ಸಿನಿಮಾವೂ ಎರಡು ಭಾಗದಲ್ಲಿ ಬಿಡುಗಡೆ ಆಗಲಿದ್ದು ರಣಬೀರ್ ಕಪೂರ್ ಅವರು 65 ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದಾರೆ. 2 ಭಾಗಗಳಿಂದ ಅಂದರೆ 130 ಕೋಟಿ ರೂಪಾಯಿ ರಣಬೀರ್ ಅವರು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ರಣಬೀರ್ ಕಪೂರ್ ಪ್ರತಿ ಸಿನಿಮಾಕ್ಕೆ 50 ಕೋಟಿ ರೂಪಾಯಿ ಪಡೆಯುತ್ತಿದ್ದರು.
ಅದರಂತೆ ಸಾಯಿ ಪಲ್ಲವಿ ಕೂಡ ಎರಡೂ ಭಾಗಕ್ಕೂ ಈ ಸಿನಿಮಾಕ್ಕೆ 12 ಕೋಟಿ ರೂಪಾಯಿಗಳನ್ನ ಪಡೆಯಲಿದ್ದಾರೆ ಎನ್ನಲಾಗಿದೆ. ಮಾನ್ಸ್ಟಾರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರಾಮಾಯಣ ಸಿನಿಮಾಕ್ಕೆ ಯಶ್ ಅವರು ಸಹ ನಿರ್ಮಾಪಕರು ಆಗಿದ್ದಾರೆ. ಇದರಿಂದ ಸಿನಿಮಾ ರಿಲೀಸ್ ಆದ ಮೇಲೆ ಲಾಭ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ