ರಾಹಾ ಕಪೂರ್ ಈಗ ಬಾಲಿವುಡ್‌ನ ಅತ್ಯಂತ ಶ್ರೀಮಂತ ಸ್ಟಾರ್ ಕಿಡ್!
ಒಂದು ವರ್ಷದಿಂದ ಕನಸಿನ ಮನೆ ನಿರ್ಮಾಣ ಮಾಡುತ್ತಿರುವ ರಣಬೀರ್ ಕಪೂರ್
ಅತಿ ಕಡಿಮೆ ವಯಸ್ಸಿನಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿದ ಬಾಲಿವುಡ್ ಸ್ಟಾರ್ ಮಗು
ಮುಂಬೈ: ಬಾಲಿವುಡ್‌ನ ಬ್ಯೂಟಿಫುಲ್ ಕಪಲ್ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಕಳೆದ ಒಂದು ವರ್ಷದ ತಮ್ಮ ಕನಸಿನ ಮನೆ ಕಟ್ಟುತ್ತಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಮನೆ ಇನ್ನೂ ನಿರ್ಮಾಣ ಹಂತದಲ್ಲಿ ಇದೆ. ಈ ಬಹುಕೋಟಿ ವೆಚ್ಚದ ಮನೆಯನ್ನ ರಣಬೀರ್ ಕಪೂರ್ ತನ್ನ ಮಗಳ ಹೆಸರಿಗೆ ರಿಜಿಸ್ಟರ್ ಮಾಡಿಸಿ ಹೊಸ ದಾಖಲೆ ಬರೆಯುತ್ತಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮಗಳು ರಾಹಾ ಕಪೂರ್ ಈಗ ಬಾಲಿವುಡ್‌ನ ಶ್ರೀಮಂತ ಸ್ಟಾರ್ ಕಿಡ್ ಅನ್ನೋ ಖ್ಯಾತಿಗೆ ಪಾತ್ರವಾಗಿದ್ದಾಳೆ. ಅಂದ್ರೆ ರಣಬೀರ್ ಕಪೂರ್ ಅವರು 250 ಕೋಟಿ ವೆಚ್ಚದ ಡ್ರೀಮ್ ಹೌಸ್ ಅನ್ನು ರಾಹಾ ಕಪೂರ್ ಅವರ ಹೆಸರಿಗೆ ಬರೆಯಲು ಮುಂದಾಗಿದ್ದಾರೆ.
ಇದನ್ನೂ ಓದಿ: PHOTO: ಎಷ್ಟು ಚಂದ ನೋಡಿ ಆಲಿಯಾ-ರಣಬೀರ್ ಮುದ್ದು ಮಗಳು; ಯಾರ್ ತರಹ ಕಾಣಿಸ್ತಾರೆ ಗೆಸ್ ಮಾಡ್ತೀರಾ?
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರು ಸುಮಾರು ಒಂದು ವರ್ಷದಿಂದ ಬಾಂದ್ರಾದಲ್ಲಿ ತಮ್ಮ ಕನಸಿನ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಕೃಷ್ಣ ರಾಜ್ ಬಂಗಲೆಯ ನಿರ್ಮಾಣ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಇತ್ತೀಚೆಗೆ ಅವರು ಆ ಮನೆಗೆ ಭೇಟಿ ನೀಡಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಆ ಮನೆಯ ನಿರ್ಮಾಣ ಕಾರ್ಯ ಮುಗಿಯುವುದರೊಳಗೆ ರಾಹಾ ಕಪೂರ್ ಅವರ ಹೆಸರಿಗೆ ಬರೆದುಕೊಡುವ ಆಸೆ ಹೊಂದಿದ್ದಾರೆ.
ರಾಹಾ ಕಪೂರ್ ಅವರ ಹೆಸರಿಗೆ 250 ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆ ರಿಜಿಸ್ಟರ್ ಆದರೆ ಬಾಲಿವುಡ್‌ನಲ್ಲಿ ಅತಿ ಕಡಿಮೆ ವಯಸ್ಸಿನಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿದ ಮಗು ಅನ್ನೋ ಖ್ಯಾತಿಗೆ ರಾಹಾ ಕಪೂರ್ ಪಾತ್ರವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ